ದೀಪಾವಳಿ ಹಬ್ಬಕ್ಕೆ ಫ್ಯಾನ್ಸ್‌ಗೆ ಮಗಳನ್ನು ಪರಿಚಯಿಸಿದ ದೀಪಿಕಾ-ರಣ್‌ವೀರ್; ಫೋಟೋ ವೈರಲ್

ಬೆಳಕಿನ ಹಬ್ಬ ದೀಪಾವಳಿ ಬಂತು ಅಂದರೆ ಸೆಲೆಬ್ರೆಟಿಗಳು ಜಗಮಗಿಸುತ್ತಾರೆ. ಭಾರತದ ಪ್ರತಿಯೊಂದು ಚಿತ್ರರಂಗದ ಸೆಲೆಬ್ರೆಟಿಗಳು ಈ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಬಾಲಿವುಡ್ ಮಂದಿಗೆ ದೀಪಾವಳಿ ಅಂದರೆ ಎಲ್ಲಿಲ್ಲದ ಸಂಭ್ರಮ. ಇಲ್ಲಿ ಜಾತಿ-ಧರ್ಮಗಳನ್ನು ಮರೆತು ಸೆಲೆಬ್ರೆಟಿಗಳ ಮನೆಗಳಿಗೆ ತೆರಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಇನ್ನು ಕೆಲವು ಸೆಲೆಬ್ರೆಟಿಗಳು ಈ ದಿನದಂದು ವಿಶೇಷವಾದದ್ದು ಏನಾದರೂ ಮಾಡುತ್ತಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಬೆಳಕಿನ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಇದೇ ಮೊದಲ ಬಾರಿ ತಮ್ಮ ಮಗಳ ಮುಖವನ್ನು ತೋರಿಸಿದ್ದಾರೆ. ಈ ಪೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Ranveer Singh and Deepika Padukone Diwali wishes with daughter Dua first photos went viral

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ದೇಶದ ಸಮಸ್ತ ಜನತೆಗೆ ಹಾಗೂ ಅವರ ಅಭಿಮಾನಿಗಳು ದೀಪಾವಳಿ ಹಬ್ಬದ ಶುಭಾಶಗಳನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮುದ್ದಿನ ಮಗಳ ಮುಖವನ್ನು ಈ ಶುಭ ದಿನದಂದೇ ತೋರಿಸಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಕೂಡ ಬೆಳಕಿನ ಹಬ್ಬದ ಶುಭಾಶಗಳನ್ನು ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ತಮ್ಮ ಮಗಳನ್ನು ಜಗತ್ತಿಗೆ ಪರಿಚಯಿಸಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ನಟಿ ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತಿ ರಣ್‌ವೀರ್ ಸಿಂಗ್, ಮಗಳು ದುವಾ ಜೊತೆಗಿರುವ ಐದು ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ನೋಡಿ ಇಬ್ಬರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಾರಿ ದೀಪಿಕಾ-ರಣ್‌ವೀರ್‌ಗಿಂತ ಅವರ ಮಗಳು ದುವಾ ಫೋಟೊಗಳು ವೈರಲ್ ಆಗುತ್ತಿವೆ.

ಇನ್ನೂ ದೀಪಿಕಾ ಪಡುಕೋಣೆ ಶೇರ್ ಮಾಡಿರುವ ಫೋಟೊಗಳಲ್ಲಿ ಅವರು ಕೆಂಪು ಬಣ್ಣದ ಕುರ್ತಾ ಸೆಟ್ ಧರಿಸಿ, ಉದ್ದನೆಯ ನೇತಾಡುವ ಕಿವಿಯೋಲೆಗಳು, ಕೂದಲಿಗೆ ಗಜರಾ ಧರಿಸಿ, ಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಣವೀರ್ ಸಿಂಗ್ ಬಿಳಿ ಕುರ್ತಾ-ಪೈಜಾಮಾ ಧರಿಸಿ ಮಿಂಚಿದ್ದಾರೆ.

ಇವರೊಂದಿಗೆ ದೀಪಿಕಾ ಮತ್ತು ರಣವೀರ್ ಇಬ್ಬರೂ ತಮ್ಮ ಮಗಳು ದುವಾಳನ್ನು ಮಡಿಲಲ್ಲಿ ಹಿಡಿದುಕೊಂಡು ಫೋಟೊ ಶೂಟ್ ಮಾಡಿದ್ದಾರೆ. ಅಭಿಮಾನಿಗಳು ದುವಾಳನ್ನು ನೋಡಿ ಶುಭ ಹಾರೈಸುತ್ತಿದ್ದಾರೆ. ದುವಾ ತನ್ನ ತಾಯಿಯಂತೆಯೇ ಕೆಂಪು ಬಣ್ಣದ ಟ್ರೆಡಿಷನಲ್ ಡ್ರೆಸ್ ಧರಿಸಿ, ಎರಡು ಜಡೆಗಳನ್ನು ಹಾಕಿಕೊಂಡು ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾಳೆ.

ರಣ್‌ವೀರ್ ದಂಪತಿ ಐದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮೊದಲ ಫೋಟೊದಲ್ಲಿ ತಮ್ಮ ಮಗಳೊಂದಿಗೆ ಪಕ್ಕಾ ಫ್ಯಾಮಿಲಿ ಮೂಡ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಇನ್ನು ಎರಡನೇ ಫೋಟೊದಲ್ಲಿ ರಣವೀರ್ ನಗುತ್ತಿದ್ದು ದುವಾ ಅವರನ್ನು ನೋಡುತ್ತಾಳೆ. ಮೂರನೇ ಹಾಗೂ ನಾಲ್ಕನೇ ಫೋಟೊಗಳಲ್ಲಿ ದುವಾಳ ಕೂಡ ಫರ್ಫೆಕ್ಟ್ ಫ್ಯಾಮಿಲಿ ಲುಕ್ ಕೊಟ್ಟಿವೆ. ಐದನೇ ಸಿನಿಮಾದಲ್ಲಿ ದೀಪಿಕಾ ಮಗಳನ್ನು ಮಡಿಲಲ್ಲಿಟ್ಟುಕೊಂಡು ಪೂಜೆ ಮಾಡುತ್ತಿರುವುದನ್ನು ನೋಡಬಹುದು. ದುವಾಳ ಫೋಟೊಗಳನ್ನು ರಿವೀಲ್ ಮಾಡುತ್ತಿದ್ದಂತೆ ಬಾಲಿವುಡ್ ತಾರೆಯರು ಸೇರಿದಂತೆ ಅಭಿಮಾನಿಗಳು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆ "ಓ ಮೈ ಗಾಡ್" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ಸೋಫಿಯಾ ಅನ್ಸಾರಿ, ರಾಜ್‌ಕುಮಾರ್ ರಾವ್, ಹನ್ಸಿಕಾ ಮೋಟ್ವಾನಿ, ಭಾರತಿ ಸಿಂಗ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಮತ್ತು ಪತ್ರಲೇಖಾ ಸೇರಿದಂತೆ ಹಲವು ಸೆಲೆಬ್ರೆಟಿಗಳು ರಣವೀರ್ ಮತ್ತು ದೀಪಿಕಾರವರ ಮಗಳಿಗೆ ಪ್ರೀತಿಯ ಸುರಿಮಳೆಯನ್ನೇ ಸುರಿಸಿದ್ದಾರೆ.

More from Filmibeat

English summary
Ranveer Singh and Deepika Padukone Diwali wishes with daughter Dua first photos went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X