Dhurandhar 2: 'ಧುರಂಧರ್ 2' ಭಾರತಕ್ಕೊಂದು.. ವಿದೇಶಕ್ಕೊಂದು ರನ್ ಟೈಮ್; ಎಷ್ಟು ಗಂಟೆ ಸಿನಿಮಾ ನೋಡ್ಬೇಕು?
ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಮೇಲೆ ಪಾರ್ಟ್ 2 ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಿಡುಗಡೆಗೂ ಮುನ್ನವೇ ಸಿನಿಮಾಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ನಾಳೆ (ಮಾರ್ಚ್ 18) ನಡೆಯಲಿರೋ ಪ್ರೀಮಿಯರ್ ಶೋಗೆ ಜನರು ಮುಗಿಬಿದ್ದು ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಈ ಕ್ರೇಜ್ ಅನ್ನು ನೋಡಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯೋದು ಗ್ಯಾರಂಟಿ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ.
'ಧುರಂಧರ್ 2' ಕ್ರೇಜ್ ಎಲ್ಲಾ ಓಕೆ. ಆದರೆ, ಸಿನಿಮಾದ ರನ್ ಟೈಮ್ ಬಗ್ಗೆ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಇದು ಭಾರತದ ಅತೀ ಉದ್ದದ ಸಿನಿಮಾಗಳಲ್ಲಿ ಒಂದು. ಈಗಾಗಲೇ ಸಿನಿಮಾ ರನ್ ಟೈಮ್ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ನಿರೀಕ್ಷೆ ಮಾಡಿದಂತೆ, ಪ್ರೇಕ್ಷಕರು ಹೆಚ್ಚು ಹೊತ್ತು ಥಿಯೇಟರ್‌ನಲ್ಲಿ ಕಳೆಯಬೇಕಾಗಿ ಬರಬಹುದು.

ಆದಿತ್ಯ ಧರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ಧುರಂಧರ್ 2' ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಸೃಷ್ಟಿಸಬಹುದೆಂದು ಅಂದಾಜಿಸಲಾಗಿದೆ. ಅದಕ್ಕೆ ಪ್ರೀಮಿಯರ್ ಶೋಗೆ ಸಿಕ್ಕಿರುವ ರೆಸ್ಪಾನ್ಸ್ ಉತ್ತರ ಕೊಡುತ್ತಿದೆ. ಹಾಗಿದ್ದರೆ, 'ಧುರಂಧರ್ 2' ಸಿನಿಮಾವನ್ನು ಎಷ್ಟು ಗಂಟೆ ನೋಡಬೇಕು? ಮೊದಲ ದಿನ ಎಷ್ಟು ಕಲೆಕ್ಷನ್ ಆಗಬಹುದು? ಪ್ರೀಮಿಯರ್ ಶೋ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ರಣ್‌ವೀರ ಸಿಂಗ್ 'ಧುರಂದರ್ 2' ರನ್ ಟೈಮ್ ರಿವೀಲ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ಸಿನಿಮಾ ರನ್ ಟೈಮ್ ಸುಮಾರು 3 ಗಂಟೆ 49 ನಿಮಿಷ ಹಾಗೂ 6 ಸೆಕೆಂಡುಗಳಿವೆ. ಅಂದರೆ, ಸುಮಾರು 229 ನಿಮಿಷ ಹಾಗೂ 06 ಸೆಕೆಂಡ್‌ಗಳು ಇವೆ. ಹೀಗಾಗಿ ಪ್ರೇಕ್ಷಕರು ಹೆಚ್ಚು ಕಡಿಮೆ 4 ರಿಂದ 4.30 ಗಂಟೆಗಳ ಕಾಲ ಥಿಯೇಟರ್‌ನಲ್ಲಿಯೇ ಕಳೆಯಬೇಕಾಗುತ್ತೆ.
ಇನ್ನು ಸೆನ್ಸಾರ್ ಬೋರ್ಡ್ 'ಧುರಂಧರ್ 2' ಸಿನಿಮಾಗೆ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಕೆಲವು ಕಟ್‌ಗಳನ್ನು ಹೇಳಿದೆ. ಹೀಗಾಗಿ ಈ ಸಿನಿಮಾದ ರನ್ ಟೈಮ್ ಭಾರತದಲ್ಲಿ ಒಂದು, ಹಾಗೇ ವಿದೇಶದಲ್ಲಿ ಒಂದು ಇದೆ. ಅಂದರೆ, ಭಾರತದಲ್ಲಿ ಈ ಸಿನಿಮಾ 3 ಗಂಟೆ 49 ಸೆಕೆಂಡ್‌ಗಳು ಇದ್ದರೆ, ವಿದೇಶದಲ್ಲಿ 6 ನಿಮಿಷ ಹೆಚ್ಚು ಕಾಲಾವಧಿ ಇದೆ. ವಿದೇಶಿಗರು 3.55 ನಿಮಿಷಗಳ ಕಾಲ ಸಿನಿಮಾ ನೋಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಇನ್ನೊಂದು ಕಡೆ ನಾಳೆ (ಮಾರ್ಚ್ 18) ಪ್ರೀಮಿಯರ್‌ಗೆ ಸಿದ್ಧತೆಗಳು ಶುರುವಾಗಿದೆ. ದೇಶಾದ್ಯಂತ ಸಂಜೆ 5 ಗಂಟೆಯಿಂದ ಪ್ರೀಮಿಯರ್ ಶೋಗಳು ಆರಂಭ ಆಗುತ್ತವೆ. ಒಟ್ಟು ಎರಡು ಪ್ರೀಮಿಯರ್ ಶೋಗಳು ನಡೆಯುವ ಸಾಧ್ಯತೆಯಿದೆ. ಈಗಾಗಲೇ ಪ್ರೀಮಿಯರ್‌ನಿಂದ ದಾಖಲೆ ಕಲೆಕ್ಷನ್ ಆಗಿದೆ. ವಿದೇಶದಲ್ಲಿ ಪ್ರೀಮಿಯರ್‌ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದ್ದು, ಒಳ್ಳೆಯ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಬರೋಬ್ಬರಿ ₹35 ಕೋಟಿಗೂ ಅಧಿಕ ಪ್ರೀಮಿಯರ್‌ನಿಂದಲೇ ಕಲೆಕ್ಷನ್ ಆಗುವ ಸಾಧ್ಯತೆಯಿದೆ.
ಇನ್ನು 'ಧುರಂಧರ್ 2' ಫಸ್ಟ್ ಡೇನೇ ದಾಖಲೆ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಮೊದಲ ದಿನದ ಈ ಸಿನಿಮಾದ ಕಲೆಕ್ಷನ್ ವಿಶ್ವದಾದ್ಯಂತ 175 ಕೋಟಿ ರೂಪಾಯಿಗೂ ಅಧಿಕ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಟ್ನಲ್ಲಿ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸೋದು ಗ್ಯಾರಂಟಿ.


Click it and Unblock the Notifications











