Ranveer Singh Vanity Van: ರಣ್‌ವೀರ್ ಸಿಂಗ್ ವ್ಯಾನಿಟಿ ವ್ಯಾನ್ ವಿವಾದ: 3 ಕ್ಯಾರಾವ್ಯಾನ್‌ನ ಅಸಲಿ ಕಥೆಯೇನು?
ಇತ್ತೀಚೆಗೆ ಸಿನಿಮಾದ ಪ್ರೊಡಕ್ಷನ್ ಕಾಸ್ಟ್ ಗಗನಕ್ಕೇರಿದೆ. ಸಿನಿಮಾ ನಿರ್ಮಾಣದ ಖರ್ಚು ಗಗನಕ್ಕೇರಿದೆ ಎಂದು ನಿರ್ಮಾಪಕರು ಒಂದೇ ಕಣ್ಣಿನಲ್ಲಿ ನೀರು ಹಾಕುತ್ತಿದ್ದಾರೆ. ಅದರಲ್ಲೂ ಸ್ಟಾರ್‌ಗಳಿಗೆ ಸಂಭಾವನೆ ಅಲ್ಲದೆ, ಮಾಡಬೇಕಿರೋ ಖರ್ಚು ಅವರಿಗೆ ದುಬಾರಿ ಅನಿಸುವುದಕ್ಕೆ ಶುರುವಾಗಿದೆ. ಅದರಲ್ಲೂ ಹೀರೋ-ಹೀರೋಯಿನ್ ಅಷ್ಟೇ ಅಲ್ಲದೆ, ಅವರ ಸಿಬ್ಬಂದಿಗಳಿಗೂ ಖರ್ಚು ಮಾಡಬೇಕು ಅನ್ನೋ ಅಳುಕಿದೆ.
ಕೆಲ ನಿರ್ಮಾಪಕರ ತಮ್ಮ ಗೋಳುಗಳನ್ನು ಹೇಳಿಕೊಂಡ ಉದಾಹರಣೆಗಳು ಇವೆ. ಇನ್ನು ಕೆಲ ನಿರ್ಮಾಪಕರು ಬಾಯಿ ಬಂದ್ ಮಾಡಿಕೊಂಡು ಸುಮ್ಮನಿದ್ದಾರೆ. ಇದು ಕೇವಲ ಬಾಲಿವುಡ್ ಅಷ್ಟೇ ಅಲ್ಲ. ಕನ್ನಡ ಚಿತ್ರರಂಗದಲ್ಲಿಯೂ ಇದೆ ಅನ್ನೋದು ಹೊಸ ವಿಷಯವೇನಲ್ಲ. ಆದರೆ, ಒಬ್ಬ ಸ್ಟಾರ್ ಹೀರೋ ಒಂದು ಸಿನಿಮಾದ ಚಿತ್ರೀಕರಣದ ವೇಳೆ ಮೂರು ವ್ಯಾನಿಟಿ ವ್ಯಾನ್ ಅನ್ನು ಬಳಸಿಕೊಂಡ ಉದಾಹರಣೆಗಳು ಇಲ್ಲ. ಇಂತಹದ್ದೊಂದು ವಿವಾದಕ್ಕೆ ರಣ್‌ವೀರ್ ಸಿಂಗ್ ಗುರಿಯಾಗಿದ್ದರು.

'ಧುರಂಧರ್' ಥಿಯೇಟರ್‌ನಲ್ಲಿ ರಿಲೀಸ್ ಆದಾಗ ಪ್ರೇಕ್ಷಕರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಸಿನಿಮಾದ ಟೈಟಲ್ ಕಾರ್ಡ್‌ನಿಂದ ಹಿಡಿದು ಪ್ರತಿಯೊಂದು ಕಡೆ ಗಮನ ಕೊಟ್ಟಿದ್ದಾರೆ. ಟೈಟಲ್ ಕಾರ್ಡ್‌ನಲ್ಲಿ ರಣ್‌ವೀರ್ ಸಿಂಗ್ ಪಾತ್ರಕ್ಕೆ ಮೂರು ವ್ಯಾನಿಟಿ ವ್ಯಾನ್ ಅನ್ನು ಬಳಸಿರುವ ಬಗ್ಗೆ ಮಾಹಿತಿ ಇತ್ತು. ಇದನ್ನು ನೋಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಅಸಲಿಗೆ ರಣ್‌ವೀರ್ ಸಿಂಗ್ 'ಧುರಂಧರ್' ಶೂಟಿಂಗ್ ವೇಳೆ ಮೂರು ವ್ಯಾನಿಟಿ ವ್ಯಾನ್ ಅನ್ನು ಬಳಸಿದ್ದರೆ? ಅಸಲಿಗೆ ಈ ವಿವಾದದ ಹಿಂದಿನ ಸತ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.
ರಣ್‌ವೀರ್ ಸಿಂಗ್ 'ಧುರಂಧರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದ್ದಂತೆ ಅವರು ಬಳಿಸಿದ ವ್ಯಾನಿಟಿ ವ್ಯಾನ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಹೌದು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಧುರಂಧರ್' ದಾಖಲೆ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾ ₹1300 ಕೋಟಿ ಕಲೆಕ್ಷನ್ ಮಾಡಿದ್ದು, ಕೆಲ ಮೆಗಾ ಬ್ಲಾಕ್‌ಬಸ್ಟರ್ ದಾಖಲೆಗಳನ್ನು ಮುರಿದಿದೆ. ಈಗ 'ಧುರಂಧರ್ 2' ಮೇಲೆ ಎಲ್ಲರ ನಿರೀಕ್ಷೆಯಿದೆ.
ಈ ಗ್ಯಾಪ್‌ನಲ್ಲಿ ರಣವೀರ್ ಸಿಂಗ್ ನಿರ್ಮಾಪಕರಿಂದ ಮೂರು ವ್ಯಾನಿಟಿ ವ್ಯಾನ್‌ಗಳನ್ನು ತರಿಸಿಕೊಂಡಿದ್ದರು. ಅವುಗಳಲ್ಲಿ ಒಂದು ರಣವೀರ್‌ಗಾಗಿ, ಇನ್ನೊಂದು ಅವರ ಸಿಬ್ಬಂದಿಗಾಗಿ, ಮತ್ತು ಮೂರನೆಯದು ವಿಶೇಷ ಅಗತ್ಯಗಳಿಗಾಗಿ ಎಂದು ಸುದ್ದಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ನೀಡಲಾಗಿತ್ತು. 'ಧುರಂಧರ್' ಸಿನಿಮಾದ ಎಂಡ್ ಕ್ರೆಡಿಟ್‌ಗಳಲ್ಲಿ 'ವೆಂಡರ್ ಟ್ರಾನ್ಸ್‌ಪೋರ್ಟೇಷನ್' ವಿಭಾಗದಲ್ಲಿ ವ್ಯಾನಿಟಿ ವ್ಯಾನ್ ನೀಡಿದ ವಿವರವನ್ನು ನೀಡಲಾಗಿತ್ತು. ಅದರಲ್ಲಿ 'ಹಮ್ಜಾ ವ್ಯಾನ್', 'ಹಮ್ಜಾ ಸ್ಟಾಫ್ ವ್ಯಾನ್', 'ಹಮ್ಜಾ ನಾರ್ಮಲ್ ವ್ಯಾನ್' ಎಂದು ಹೇಳಲಾಗಿತ್ತು. ಇದನ್ನು ನೋಡಿ ರಣ್‌ವೀರ್ ಸಿಂಗ್ ಮೂರು ವ್ಯಾನಿಟಿ ವ್ಯಾನ್ ಬಳಸಿಕೊಂಡಿದ್ದಾರೆಂದು ಟೀಕೆಗಳು ಹಬ್ಬಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಹೆವಿ ಟ್ರೋಲ್ ಕೂಡ ಮಾಡಿದ್ದರು.

'ಧುರಂಧರ್' ಸಿನಿಮಾದ ನಟನೆಗೆ ರಣ್‌ವೀರ್ ಸಿಂಗ್ ಪ್ರಶಂಸೆಯನ್ನೇನೋ ಪಡೆದಿದ್ದರು. ಆದರೆ, ಸೌಲಭ್ಯಗಳ ಕಾರಣಕ್ಕೆ ನಿರ್ಮಾಪಕರಿಗೆ ಹೆಚ್ಚುವರಿ ವೆಚ್ಚ ಹೊರಿಸಿದ್ದಾರೆಂದು ನೆಟಿಜನ್‌ಗಳು ಕಿಡಿಕಾರಿದ್ದರು. ಆದರೆ, ಅಸಲಿ ಮ್ಯಾಟರ್ ಬೇರೆನೇ ಇದೆ ಎಂದು ಹೇಳಲಾಗುತ್ತಿದೆ. 3 ವ್ಯಾನಿಟಿ ವ್ಯಾನ್ ಬಳಕೆ ಮಾಡಿದ್ದೇಕೆ ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿದೆ. ಬ್ಯಾಂಕಾಕ್‌ನಲ್ಲಿ ಶೂಟಿಂಗ್ ಮಾಡುವ ವೇಳೆ ಔಟ್‌ಡೋರ್ ಶೂಟಿಂಗ್ ಇದ್ದ ಕಾರಣ ಮೂರು ವಾಹನವನ್ನು ಬಳಸಲಾಗಿದೆ.
ಬ್ಯಾಂಕಾಕ್‌ನಲ್ಲಿ ವ್ಯಾನ್ ಎಂದು ವ್ಯಾನಿಟಿ ವ್ಯಾನ್ ಎಂದು ಅರ್ಥವಲ್ಲ. ಇದನ್ನು ಪ್ಯಾಸೆಂಜರ್ ವ್ಯಾನ್ ಎಂದು ಕರೆಯುತ್ತಾರೆ. ಒಂದು ವ್ಯಾನಿಟಿ ವ್ಯಾನ್ ಅನ್ನು ರಣ್‌ವೀರ್ ಸಿಂಗ್ ಮೇಕಪ್ ಹಾಗೂ ಕ್ಯಾಸ್ಟ್ಯೂಮ್ ಇಡುವುದಕ್ಕೆ ಬಳಸಲಾಗಿದೆ. ಇನ್ನು ಎರಡು ವ್ಯಾನಿಟಿ ವ್ಯಾನ್ ಅನ್ನು ಸಿಬ್ಬಂದಿ, ಲಗೇಜ್ ಹಾಗೂ ಲೋಕಷನ್‌ಗಳಿಗೆ ಟ್ರ್ಯಾವೆಲ್ ಮಾಡುವುದಕ್ಕೆ ಬಳಸಲಾಗಿದೆ ಎಂದು ವರದಿಯಾಗಿದೆ.


Click it and Unblock the Notifications











