ಅಡಲ್ಟ್ ಹೀರೊ ಸಮಸ್ಯೆಗೆ ರಣ್‌ವೀರ್ ಸಿಂಗ್ ಪರಿಹಾರ;"2ನೇ ಎಪಿಸೋಡ್ ಯಾವಾಗ?" ಎಂದು ಕುಟುಕಿದ ನೆಟ್ಟಿಗರು!
ಹಿಂಜರಿಕೆ ಅನ್ನೋದನ್ನು ಮರೆತಿರೋ ಬಾಲಿವುಡ್ ನಟ ರಣ್‌ವೀರ್ ಸಿಂಗ್. ಅವರ ಡ್ರೆಸ್ಸಿಂಗ್ ಸೆನ್ಸ್‌ನಿಂದ ಹಿಡಿದು ಸಿನಿಮಾ ಪಾತ್ರಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತವೆ. ರಣ್‌ವೀರ್ ಸಿಂಗ್ ಅಂದ್ರೆ ಹೈಪರ್ ಆಕ್ಟಿವ್. ಬಾಲಿವುಡ್‌ನಲ್ಲಿ ಇಂತಹ ಬೋಲ್ಡ್ ಹೀರೊ ಮತ್ಯಾರೂ ಇಲ್ಲ. ಇದೇ ಕೆಲವೊಮ್ಮೆ ಅವರನ್ನು ಪೇಚಿಗೆ ಸಿಲುಕಿಸಿದ್ದು ಇದೆ.
ಈ ಹಿಂದೆ ಕೂಡ ರಣ್‌ವೀರ್ ಸಿಂಗ್ ಹೀಗೆ ಬೋಲ್ಡ್ ನಡೆಯಿಂದ ಗಮನ ಸೆಳೆದಿದ್ದರು. ಈಗ ರಣ್‌ವೀರ್ ಸಿಂಗ್ ನಟಿಸಿದ ಹೊಚ್ಚ ಹೊಸ ಜಾಹೀರಾತು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಪುರುಷರ ಲೈಂಗಿಕ ಆರೋಗ್ಯದ ಕುರಿತಾದ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಜಾಹೀರಾತು ಅವರ ಅಭಿಮಾನಿಗಳಿಗೆ ಮಜ ಕೊಟ್ಟಿದೆ. ಹಾಗೇ ಬಾಲಿವುಡ್ ಮಂದಿಗೆ ಕಿಕ್ ಕೊಟ್ಟಿದೆ.

ಆದರೆ, ಕೆಲವರಿಗೆ ಈ ಜಾಹೀರಾತು ಇಷ್ಟ ಆಗಿಲ್ಲ. ಕೆಲವು ಬಾಲಿವುಡ್ ನಟಿಯರು ಹಾಗೂ ನೆಟ್ಟಿಗರು ಈ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ. ವಿಭಿನ್ನವಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ರಣ್‌ವೀರ್ ಸಿಂಗ್ ಅನ್ನು ಟ್ರೋಲ್ ಮೇಲೆ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಜಾಹೀರಾತಿನಲ್ಲಿ ಅಡಲ್ಟ್ ಸ್ಟಾರ್‌ಗೆ ಪರಿಹಾರ ಕೊಡುವುದಕ್ಕೆ ಹೋಗಿ ರಣ್‌ವೀರ್ ಸಿಂಗ್ ಪೇಚಿಗೆ ಸಿಕ್ಕಿಕೊಂಡಂತೆ ಆಗಿದೆ.
ಪುರುಷರ ಲೈಂಗಿಕ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಬೋಲ್ಡ್ ಕೇರ್ ಸಂಸ್ಥೆ ಜಾಹೀರಾತು ಸದ್ಯ ಟ್ರೋಲ್ ಆಗುತ್ತಿದೆ. ಈ ಜಾಹೀರಾತಿನಲ್ಲಿ ಎರಡು ಚಿತ್ರರಂಗದ ಪ್ರಮುಖ ತಾರೆಯರು ಕಾಣಿಸಿಕೊಂಡಿದ್ದರು. ಬಾಲಿವುಡ್‌ನಿಂದ ರಣ್‌ವೀರ್ ಸಿಂಗ್ ಕಾಣಿಸಿಕೊಂಡರೆ, ಇನ್ನೊಂದು ಕಡೆ ಅಮೆರಿಕಾದ ಅಡಲ್ಟ್ ಸಿನಿಮಾರಂಗದ ಸ್ಟಾರ್ ಹೀರೊ ಜಾನಿ ಸಿನ್ಸ್ ನಟಿಸಿದ್ದರು. ಈ ಜಾಹೀರಾತನ್ನು ಧಾರಾವಾಹಿಯ ಪರಿಕಲ್ಪನೆಯಲ್ಲಿ ಶೂಟಿಂಗ್ ಮಾಡಲಾಗಿತ್ತು.

ಬಾಲಿವುಡ್‌ನ ಅತ್ತೆ, ಸೊಸೆ ಹಾಗೂ ತುಂಬು ಕುಟುಂಬದ ಕಲ್ಪನೆಯಲ್ಲಿ ಧಾರಾವಾಹಿಗಳನ್ನು ನೆನಪಿಸುವಂತೆಯೇ ಚಿತ್ರೀಕರಣ ಮಾಡಲಾಗಿತ್ತು. ಇಲ್ಲಿ ರಣ್‌ವೀರ್ ಸಿಂಗ್ ಸಹೋದರನಾಗಿ ಜಾನಿ ಸಿನ್ಸ್ ಕಾಣಿಸಿಕೊಂಡಿದ್ದಾರೆ. ಜಾನಿ ಸಿನ್ಸ್ ಪತ್ನಿ ಮನೆಬಿಟ್ಟು ಹೋಗುವುದಕ್ಕೆ ಮುಂದಾದಾಗ ಅತ್ತಿಗೆ ರಣ್‌ವೀರ್ ಸಿಂಗ್ ಪ್ರಶ್ನೆ ಮಾಡುತ್ತಾರೆ. ಆ ವೇಳೆ ಅತ್ತಿಗೆ ತನ್ನ ಪತ್ನಿಯ ಲೈಂಗಿಕ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ರಣ್‌ವೀರ್ ಸಿಂಗ್ ನೀಡಿದ ಒಂದು ಟ್ಯಾಬ್ಲೆಟ್ ಸುಖಾಂತ ಕಾಣುತ್ತೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಣ್‌ವೀರ್ ಸಿಂಗ್ ಪರ ಹಾಗೂ ವಿರೋಧ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರಂತೂ ಈ ಜಾಹೀರಾತಿನ ಎರಡನೇ ಎಪಿಸೋಡ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. "ಎರಡನೇ ಎಪಿಸೋಡ್ ಎಲ್ಲಿ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಹೀಗೆ ಮತ್ತೊಬ್ಬರು " ಬ್ರೋ.. ಜಾನಿ ಸಿನ್ಸ್ ಭಾರತದ ಕಮರ್ಷಿಯಲ್‌ನಲ್ಲಿ ಏನು ಮಾಡುತ್ತಿದ್ದಾರೆ?" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ "ಏಕ್ತಾ ಕಪೂರ್ ಧಾರಾವಾಹಿಯಲ್ಲಿ ರಣ್‌ವೀರ್ ಸಿಂಗ್ ಅನ್ನು ಕಲ್ಪನೆ ಮಾಡಿಕೊಂಡೆ. ಆದರೆ, ಜಾನಿ ಸಿನ್ಸ್ ಅನ್ನು ನನ್ನ ಕನಸಿನಲ್ಲಿ ಕಲ್ಪನೆಯನ್ನೂ ಮಾಡಿಕೊಂಡಿಲ್ಲ. ಇದು ಇನ್ನೊಂದು ಲೆವೆಲ್‌ನ ಜಾಹೀರಾತು" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ರಣ್‌ವೀರ್ ಸಿಂಗ್ ಈ ಬೋಲ್ಡ್ ಕೇರ್ ಸಂಸ್ಥೆಯ ಸಹ ಮಾಲೀಕರು ಆಗಿದ್ದಾರೆ. ಇದು ಪುರುಷರ ಲೈಂಗಿಕ ಆರೋಗ್ಯ ಮತ್ತು ಸುರಕ್ಷತೆಯ ಬ್ರ್ಯಾಂಡ್ ಆಗಿದೆ. ಡಿಸೆಂಬರ್‌ನಲ್ಲಿ ರಣ್‌ವೀರ್ ಸಿಂಗ್ ಈ ಕಂಪನಿಗೆ ಸಹ ಮಾಲೀಕರಾಗಿದ್ದರು.


Click it and Unblock the Notifications











