Dhurandhar 2: 'ಧುರಂಧರ್ 2' ಪೇಯ್ಡ್ ಪ್ರೀಮಿಯರ್‌ಗೆ ಬುಕಿಂಗ್ ಓಪನ್; ಕಲೆಕ್ಷನ್ ಲೆಕ್ಕಾಚಾರ ಎಷ್ಟು ಕೋಟಿ ಗೊತ್ತೇ?

ಇದೇ ಮಾರ್ಚ್ 19 ರಂದು ಬಾಕ್ಸಾಫೀಸ್‌ನಲ್ಲಿ ಬಿಗ್ ಕ್ಲ್ಯಾಶ ನಡೀಬೇಕಿತ್ತು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಹಾಗೂ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಒಂದೇ ದಿನ ರಿಲೀಸ್ ಆಗಬೇಕಿತ್ತು. ಆದ್ರೀಗ 'ಟಾಕ್ಸಿಕ್‌' ಈ ಬಾಕ್ಸಾಫೀಸ್‌ ಯುದ್ಧದಿಂದ ಹಿಂದೆ ಸರಿದಿದೆ. ಜೂನ್ 4ರಂದು ಮುಂದೂಡಲ್ಪಟ್ಟಿರುವುದರಿಂದ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ಏಕಾಂಗಿಯಾಗಿ ಅಬ್ಬರಿಸಲಿದೆ.

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಬಿಡುಗಡೆಗೂ ಮುನ್ನ ದೇಶಾದ್ಯಂತ ಪೇಯ್ಡ್ ಪ್ರೀಮಿಯರ್ ಮಾಡುತ್ತಿದೆ. ಇಂದು (ಮಾರ್ಚ್ 7) ಈ ಸಿನಿಮಾದ ಪೇಯ್ಡ್‌ ಪ್ರೀಮಿಯರ್‌ಗೆ ಬುಕಿಂಗ್ ಓಪನ್ ಮಾಡಲಾಗಿದೆ. ಅದಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಿಡುಗಡೆಗೆ ಇನ್ನೂ 12 ದಿನಗಳು ಇರುವಾಗಲೇ ಈ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರಿದ್ದಾರೆ.

Ranveer Singh movie Dhurandhar 2 paid premier box office collection prediction

'ಧುರಂಧರ್ 2' ಸಿನಿಮಾದ ಪೇಯ್ಡ್ ಪ್ರೀಮಿಯರ್ ಒಂದು ದಿನ ಮುನ್ನ ಅಂದರೆ, ಮಾರ್ಚ್ 18ರಂದು ದೇಶಾದ್ಯಂತ ನಡೆಯಲಿದೆ. ಪೇಯ್ಡ್‌ ಪ್ರೀಮಿಯರ್‌ಗಾಗಿ ಮಾತ್ರ ಬುಕಿಂಗ್ ಓಪನ್ ಮಾಡಲಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಪೇಯ್ಡ್‌ ಪ್ರೀಮಿಯರ್‌ನಿಂದ 'ಧುರಂಧರ್ 2' ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಾಗಿದ್ದರೆ, 'ಧುರಂಧರ್ 2' ಪೇಯ್ಡ್ ಪ್ರೀಮಿಯರ್ ಅಂಕಿ ಅಂಶಗಳೇನು? ಕರ್ನಾಟಕದಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು? ಇಲ್ಲಿದೆ ಲೆಕ್ಕಾಚಾರ.

'ಧುರಂಧರ್ 2' ಪೇಯ್ಡ್ ಪ್ರೀಮಿಯರ್‌ಗೆ ರೆಸ್ಪಾನ್ಸ್

ರಣ್‌ವೀರ್ ಸಿಂಗ್, ಆದಿತ್ಯ ಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್ 2' ಪೇಯ್ಡ್ ಪ್ರೀಮಿಯರ್‌ಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಪೇಯ್ಡ್ ಪ್ರೀಮಿಯರ್‌ಗೆ ಬುಕಿಂಗ್ ಓಪನ್ ಆಗಿದೆ. ಈ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಟ್ರೇಡ್ ಎಕ್ಸ್‌ಪರ್ಟ್‌ಗಳು 'ಧುರಂಧರ್ 2' ಕಲೆಕ್ಷನ್ ಹಾಕುತ್ತಿದ್ದಾರೆ. ಅವರ ಪ್ರಕಾರ, ಈ ಸಿನಿಮಾ ಕೇವಲ ಪೇಯ್ಡ್ ಪ್ರೀಮಿಯರ್‌ನಿಂದಲೇ ₹50 ಕೋಟಿ (Net) ಅಧಿಕ ಕಲೆಕ್ಷನ್ ಮಾಡುತ್ತೆ ಎಂದು ಅಂದಾಜಿಸಿದ್ದಾರೆ.

ಬೆಂಗಳೂರಿನಲ್ಲೂ ಹೆಚ್ಚಿದ ಕ್ರೇಜ್

ಬಾಕ್ಸಾಫೀಸ್ ಕ್ಲ್ಯಾಶ್‌ನಿಂದ 'ಟಾಕ್ಸಿಕ್' ಹಿಂದೆ ಸರಿದ ಬಳಿಕ 'ಧುರಂಧರ್ 2'ಗೆ ಲಾಭ ಆಗಿದೆ. ಬೆಂಗಳೂರಿನಲ್ಲಿ ಪೇಯ್ಡ್‌ ಪ್ರೀಮಿಯರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸುಮಾರು 200 ಶೋಗಳು ಪೇಯ್ಡ್ ಪ್ರೀಮಿಯರ್‌ಗೆ ಬುಕಿಂಗ್ ಓಪನ್ ಆಗಿದೆ. ಅದರಲ್ಲಿ ಸುಮಾರು 50 ಶೋಗಳು ಈಗಾಗಲೇ ಹೌಸ್‌ಫುಲ್ ಆಗಿದ್ದು, ಇನ್ನು 12 ದಿನಗಳಲ್ಲಿ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮೈಸೂರಿನಲ್ಲೂ 30 ಶೋಗಳು ಪೇಯ್ಡ್ ಪ್ರೀಮಿಯರ್ ಹಾಕಿದ್ದು, 6 ಮಲ್ಟಿಪ್ಲೆಕ್ಸ್ ಫುಲ್ ಆಗಿವೆ ಎನ್ನುತ್ತಿದೆ ವಿತರಕರ ವಲಯ. ಶಿವಮೊಗ್ಗ, ದಕ್ಷಿಣ ಕನ್ನಡ ಭಾಗದಲ್ಲಿ 40 ಶೋಗಳು ಆಯೋಜನೆ ಮಾಡಲಾಗಿದೆ.

Ranveer Singh movie Dhurandhar 2 paid premier box office collection prediction

ಕರ್ನಾಟಕ ಕಲೆಕ್ಷನ್ ಎಷ್ಟು?

'ಧುರಂಧರ್ 2'ಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆಯಿದೆ. ಮೊದಲ ದಿನ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಸಿಕ್ಕಿರುವ ಪ್ರತಿಕ್ರಿಯೆಗಳಿಗೆ ಹೋಲಿದರೆ, ಕರ್ನಾಟಕದಲ್ಲಿ ಒಂದೊಳ್ಳೆ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಸದ್ಯ ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ ಪೇಯ್ಡ್ ಪ್ರೀಮಿಯರ್‌ನಿಂದಲೇ ಸುಮಾರು 7 ರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

ಟಿಕೆಟ್ ಬೆಲೆ ಹೇಗಿದೆ?

ಪೇಯ್ಡ್ ಪ್ರೀಮಿಯರ್‌ಗೆ ಕರ್ನಾಟಕದಲ್ಲಿ ಒಂದೊಂದು ಕಡೆ ಒಂದು ಟಿಕೆಟ್ ರೇಟ್ ಫಿಕ್ಸ್ ಆಗಿದೆ. ಬೆಂಗಳೂರಿನಲ್ಲಿ ಸದ್ಯ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ ಪೇಯ್ಡ್ ಪ್ರೀಮಿಯರ್ ಓಪನ್ ಆಗಿದೆ. 600 ರೂಪಾಯಿಯಿಂದ 2000 ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಮೈಸೂರಿನಲ್ಲಿ 350 ರಿಂದ 700 ರೂಪಾಯಿ ಟಿಕೆಟ್ ಬೆಲೆಯಿದೆ. ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದಲ್ಲಿ 300 ರಿಂದ 600 ರೂಪಾಯಿವರೆಗೂ ಟಿಕೆಟ್ ಬೆಲೆಯಿದೆ.

More from Filmibeat

English summary
Ranveer Singh movie Dhurandhar 2 paid premier box office collection prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X