Snapshot:ಈ ನಟಿಯ ಮೊದಲ ಸಿನಿಮಾ ರಿಲೀಸ್ ವೇಳೆ ರಣ್‌ವೀರ್ ಸಿಂಗ್ ಇನ್ನೂ ಹುಟ್ಟೇ ಇರಲಿಲ್ಲ; ಯಾರಿವರು?

ಬಾಲಿವುಡ್‌ನ ಜನಪ್ರಿಯ ನಟಿ ನೀಲಂ ಕೊಠಾರಿ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಹೆಚ್ಚಿನ ಪರಿಚಯ ಇರಲಿಕ್ಕಿಲ್ಲ. ಆದರೆ, ಉತ್ತರ ಭಾರತದಲ್ಲಿ ಈ ನಟಿ ಸಿಕ್ಕಾಪಟ್ಟೆ ಫೇಮಸ್. 80 ಹಾಗೂ 90ರ ದಶಕದಲ್ಲಿ ಹಲವು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಯಾಕೆ ಕನ್ನಡದ ಸಿನಿಮಾವೊಂದರಲ್ಲೂ ನಟಿಸಿದ್ದಾರೆ.

54 ವರ್ಷದ ಈ ನಟಿ ಇತ್ತೀಚೆಗೆ ಬಾಲಿವುಡ್‌ನ ಕ್ರೇಜಿಸ್ಟಾರ್ ರಣ್‌ವೀರ್ ಸಿಂಗ್ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ ಇವರಿಬ್ಬರೂ ಬಾಲಿವುಡ್‌ ತಾರೆಯರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.

Ranveer Singh poses with actress Neelam Kothari whom she started her career before he was born

ಈ ಬಾಲಿವುಡ್ ನಟಿ ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾವೇ 'ಆದಿತ್ಯ'. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದರು. ಇವರಿಗೆ ನೀಲಂ ಕೊಠಾರಿ ನಾಯಕಿಯಾಗಿದ್ದರು. ಇದು ಬಿಟ್ಟರೆ, ಮತ್ತೊಂದು ಕನ್ನಡ ಸಿನಿಮಾದಲ್ಲಿ ನೀಲಂ ನಟಿಸಲಿಲ್ಲ.

ವಿವಾಹದ ಬಳಿಕ ಸೈಲೆಂಟ್ ಆಗಿದ್ದ ನೀಲಂ ಕೊಠಾರಿ ಬಾಲಿವುಡ್‌ ನಟ ರಣ್‌ವೀರ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಬಗ್ಗೆ ನೆಟ್ಟಿಗರು ಕುತೂಹಲಕಾರಿಯಾಗಿ ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೇನಂದರೆ, ಬಾಲಿವುಡ್‌ನ ಈ ಜನಪ್ರಿಯ ನಟಿ ತನ್ನ ವೃತ್ತಿ ಬದುಕು ಆರಂಭ ಮಾಡುವಾಗ ಇಂದಿನ ಸೂಪರ್‌ ಸ್ಟಾರ್ ರಣ್‌ವೀರ್ ಸಿಂಗ್ ಇನ್ನೂ ಹುಟ್ಟೇ ಇರಲಿಲ್ಲ.

ಬಾಲಿವುಡ್‌ನ ಬ್ಯೂಟಿಫುಲ್ ನಟಿ ನೀಲಂ ಕೊಠಾರಿ 1984ರಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದರು. 'ಜವಾನಿ' ಅನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಸಿನಿಮಾಗಳಲ್ಲಿ, ಟಿವಿ ಶೋಗಳಲ್ಲಿ ಆಕ್ಟಿವ್ ಆಗಿದ್ದಾರೆ. 'ಇಲ್ಜಾಮ್', 'ಕತ್ರೋಂಕೆ ಕಿಲಾಡಿ', 'ಅಗ್ನಿಪತ್' ಅಂತ ಸಿನಿಮಾ ನಟಿಸಿದ್ದಾರೆ.

Ranveer Singh poses with actress Neelam Kothari whom she started her career before he was born

ನಟಿ ನೀಲಂ ಕೊಠಾರಿ ವಿವಾಹದ ಬಳಿಕ ಸಿನಿಮಾರಂಗದಿಂದ ಕೆಲವು ವರ್ಷಗಳ ಕಾಲ ದೂರವೇ ಉಳಿದಿದ್ದರು. ಬ್ರಿಟಿಷ್ ಹಾಂಕಾಂಗ್‌ನಲ್ಲಿ ನಟಿಸಿದ ನೀಲಂ ಕೊಠಾರಿ ನಟನೆ ಜೊತೆಗೆ ಜ್ಯುವೆಲರಿ ಡಿಸೈನರ್ ಕೂಡ ಹೌದು. ಈ ನಟಿಯೊಂದಿಗೆ ರಣ್‌ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಂತೆ ಸಿನಿಪ್ರಿಯರು ಮತ್ತೆ ನಟಿಯನ್ನು ನೆನಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ.

ವಯಸ್ಸು 54 ದಾಟಿದರೂ ನಟಿ ನೀಲಂ ಕೊಠಾರಿ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಎನರ್ಜೆಟಿಕ್ ಹೀರೊ ರಣ್‌ವೀರ್ ಸಿಂಗ್ ಜೊತೆ ಕಾಣಿಸಿಕೊಂಡ ಬಳಿಕ ನೆಟ್ಟಿಗರು "ಈ ನಟಿ ಮೊದಲ ಸಿನಿಮಾದಲ್ಲಿ ನಟಿಸುವಾಗ ರಣ್‌ವೀರ್ ಸಿಂಗ್ ಇನ್ನೂ ಹುಟ್ಟೇ ಇರಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಈ ಇಂಟ್ರೆಸ್ಟಿಂಗ್ ವಿಷಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
A captivating photo of Bollywood's Neelam Kothari with Ranveer Singh, highlighting her career's start in 1984 before Singh was born, sweeps social media|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X