ಮೊದಲ ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ರಣ್‌ವೀರ್ ಸಿಂಗ್ ಮದುವೆ ಫೋಟೊ ತೆಗೆದು ಹಾಕಿದ್ದೇಕೆ? ಯಾಕೀ ನಿರ್ಧಾರ?
ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಜೋಡಿ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. ಈ ಜೋಡಿ ಬಾಂಡಿಂಗ್ ನೋಡಿ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಈ ಜೋಡಿ ಒಟ್ಟಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಘೋಷಣೆ ಮಾಡಿದ್ದರು. ಅದು ಇನ್ನೂ ಖುಷಿ ಕೊಟ್ಟಿತ್ತು. ಹೀಗಿರುವಾಗಲೇ ಮತ್ತೊಂದು ಸುದ್ದಿ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ.
ರಣ್‌ವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಮದುವೆ ಫೋಟೊಗಳನ್ನು ತೆಗೆದು ಹಾಕಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಪ್ರಮುಖ ಕಾರಣ. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಹುಟ್ಟಿಕೊಂಡಿವೆ.

ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ರಣ್‌ವೀರ್ ಸಿಂಗ್ ಮದುವೆ ಸೇರಿದಂತೆ ಹಲವು ಫೋಟೊಗಳನ್ನು ತೆಗೆದು ಹಾಕಿದ್ದಾರೆ. 2013ರಿಂದ ಪೋಸ್ಟ್ ಮಾಡಿದ್ದ ಎಲ್ಲಾ ಫೋಟೊಗಳನ್ನು ತೆಗೆದು ಹಾಕಿದ್ದಾರೆ. ಇದು ಅಭಿಮಾನಿಗಳನ್ನು ಗೊಂದಲಕ್ಕೆ ಸೃಷ್ಟಿಸಿದೆ.
ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಕೆಲವು ವರ್ಷ ಡೇಟಿಂಗ್ ಮಾಡಿದ ಬಳಿಕ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2018ರಲ್ಲಿ ಇಟಲಿಯಲ್ಲಿ ಇಬ್ಬರು ಕುಟುಂಬದ ಸಮ್ಮುಖದಲ್ಲಿ ಮದುವೆ ಆಗಿದ್ದರು. ಕೊಂಕಣಿ ಹಾಗೂ ಸಿಂಧಿ ಎರಡೂ ಸಂಪ್ರದಾಯದಂತೆ ಮದುವೆ ನಡೆದಿತ್ತು. 2023ರಲ್ಲಿ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ತೋರಿಸಿದ್ದರು. ಈಗ ವಿಡಿಯೋ ಹಾಗೂ ಫೋಟೊಗಳನ್ನು ರಣವೀರ್ ಸಿಂಗ್ ತೆಗೆದು ಹಾಕಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ರಣ್‌ವೀರ್ ಸಿಂಗ್ ನಡೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇಬ್ಬರ ಸಾಂಸಾರಿಕ ಜೀವನದಲ್ಲಿ ಏನಾದರೂ ಸಮಸ್ಯೆ ಇದೆಯೇ? ಇಬ್ಬರೂ ಕಿತ್ತಾಡಿಕೊಂಡಿದ್ದಾರೆಯೇ? ಮೊದಲ ಮಗುವಿನ ನಿರೀಕ್ಷೆ ಸಮಯದಲ್ಲೇ ಈ ಜೋಡಿ ಹೀಗ್ಯಾಕೆ ಮಾಡಿಕೊಳ್ಳುತ್ತಿದೆ ಅನ್ನೋದು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ, ಕೆಲವು ಮಾಧ್ಯಮಗಳಿಗೆ ಆಪ್ತರು ಮಾಹಿತಿ ನೀಡಿದ್ದು, ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಮೊದಲ ಮಗುವನ್ನು ಸ್ವಾಗತ ಮಾಡುವುದಕ್ಕೆ ಇಬ್ಬರೂ ಕಾತುರದಿಂದ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಇಬ್ಬರೂ ಹಾಲಿಡೇ ಮೂಡಿನಲ್ಲಿ ಇದ್ದಾರೆ.
ಇದೇ ಸಂದರ್ಭದಲ್ಲಿ ರಣ್‌ವೀರ್ ಸಿಂಗ್ 2022ರ ಹಿಂದಿನ ಎಲ್ಲಾ ಫೋಟೊಗಳನ್ನು ತೆಗೆದು ಹಾಕಿದ್ದಾರೆ. ಇದು ಕೇವಲ ಮದುವೆ ಫೋಟೊಗಳು ಅಷ್ಟೇ ಅಲ್ಲ. ಆದರೆ, ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇನ್ನೂ ಆ ಫೋಟೊಗಳು ಇವೆ. ಹೀಗಾಗಿ ಇಬ್ಬರು ಸಾಂಸಾರಿಕ ಜೀವನ ತೊಂದರೆಯಲ್ಲಿ ಇಲ್ಲ ಅಂತ ಆಪ್ತ ಮೂಲಗಳು ತಿಳಿಸಿದ್ದಾ ನ್ಯೂಸ್ 18 ವರದಿ ಮಾಡಿದೆ.


Click it and Unblock the Notifications











