Dhurandhar 2 Teaser: 'ಟಾಕ್ಸಿಕ್'ಗೆ ಟಕ್ಕರ್ ಕೊಡಲು ಬಂದೇ ಬಿಡ್ತು 'ಧುರಂಧರ್ 2' ಟೀಸರ್: ಗೆಲ್ಲೋದ್ಯಾವುದು?
ಬಾಲಿವುಡ್ ನಟ ರಣ್‌ವೀರ್ ಸಿಂಗ್‌ಗೆ ಮರು ಜೀವ ಕೊಟ್ಟ ಸಿನಿಮಾ 'ಧುರಂಧರ್'. 2025 ಡಿಸೆಂಬರ್‌ನಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ರಿಷಬ್ ಶೆಟ್ಟಿ ನಟನೆಯ 'ಕಾಂತಾರ ಚಾಪ್ಟರ್ 1', ವಿಕ್ಕಿ ಕೌಶಲ್ ನಟಿಸಿದ್ದ 'ಛಾವಾ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬರೆದ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಈಗ 'ಧುರಂಧರ್' ಸಿನಿಮಾ ಎರಡನೇ ಪಾರ್ಟ್ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪವರ್‌ಫುಲ್ ಟೀಸರ್ ಅನ್ನು ರಿಲೀಸ್ ಮಾಡಿದೆ.
'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಅಂತ ಸಾಬೀತಾದ ಬೆನ್ನಲ್ಲೇ ಯಶ್ 'ಟಾಕ್ಸಿಕ್'ಗೆ ಟಕ್ಕರ್ ಕೊಡುವುದಕ್ಕೆ ನಿಂತಿದೆ. ಈಗಾಗಲೇ 'ಟಾಕ್ಸಿಕ್' ಟೀಸರ್ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆ ಕಾರಣಕ್ಕೆ 'ಧುರಂಧರ್ 2' ಟೀಸರ್ ಮೇಲೆ ಸಿನಿಮಾ ಮಂದಿಯ ಕಣ್ಣು ಇತ್ತು. ಅದರಲ್ಲೂ 'ಉರಿ: ಸರ್ಜಿಕಲ್ ಸ್ಟ್ರೈಕ್' ಅಂತಹ ಸಿನಿಮಾ ನಿರ್ದೇಶಿಸಿದ್ದ ಆದಿತ್ಯ ಧರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರಿಂದ 'ಧುರಂಧರ್ 2' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿತ್ತು.

ನಿರೀಕ್ಷೆಯಂತೆಯೇ 'ಧರುಂಧರ್ 2' ಟೀಸರ್ ರಿಲೀಸ್ ಆಗಿದೆ. ರಣ್‌ವೀರ್ ಸಿಂಗ್ ಈ ಸಿನಿಮಾದಲ್ಲಿ ಹಂಜ ಅಲಿ ಮಜಾರಿ ಪಾತ್ರದಲ್ಲಿ ನಟಿಸುತ್ತಿದ್ದು, ರಗಡ್ ಲುಕ್ ಕೊಟ್ಟಿದ್ದಾರೆ. ಮೊದಲ ಪಾರ್ಟ್‌ನಲ್ಲಿ ಉದ್ದ ಕೂದಲು, ಗಡ್ಡ ಬಿಟ್ಟು ಬೀಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅದೇ 'ಧುರಂಧರ್ 2'ನಲ್ಲಿ ರಣ್‌ವೀರ್ ಸಿಂಗ್ ಕ್ಲೀನ್ ಶೇರ್ ಮಾಡಿಕೊಂಡು, ಹೇರ್ ಕಟ್ ಮಾಡಿಕೊಂಡ ಅವತಾರದಲ್ಲಿದ್ದಾರೆ.
ಆದರೆ, 'ಧರುಂಧರ್ 2' ಟೀಸರ್ ನೋಡುವುದಕ್ಕೆ ಕಾತುರದಿಂದ ಕಾದು ಕೂತಿದ್ದವರಿಗೆ ನಿರಾಸೆಯಾಗಿದೆ. ಯಾಕಂದ್ರೆ, 'ಧುರಂಧರ್' ಸಿನಿಮಾದ ಕೊನೆಯಲ್ಲಿ ತೋರಿಸಿದ್ದ ತುಣುಕುಗಳಿಗೂ ಈ ಟೀಸರ್‌ಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ವೀಕ್ಷಕರಿಗೆ ಈ ಟೀಸರ್‌ನಲ್ಲಿ ಹೊಸ ದೃಶ್ಯಗಳು ನೋಡುವುದಕ್ಕೆ ಸಿಕ್ಕಿಲ್ಲ. ಹೀಗಾಗಿ 'ಧುರಂಧರ್' ನೋಡಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಈ ಟೀಸರ್ ನಿರಾಸೆ ತಂದೊಡ್ಡಿದೆ.


Click it and Unblock the Notifications











