ಬಾಲಿವುಡ್ ನಟ ವರುಣ್ ಧವನ್‌ಗೆ ಚಮಕ್ ಕೊಟ್ಟ ರಶ್ಮಿಕಾ ಮಂದಣ್ಣ ವಿಡಿಯೋ ಸಖತ್ ವೈರಲ್
ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತೇ ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಮಧ್ಯೆ ವರುಣ್ ಧವನ್ ಬೇರೆ ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಜೊತೆ ಹೆಜ್ಜೆ ಹಾಕಿದ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ. ರಶ್ಮಿಕಾ ಕೊಟ್ಟ ಚಮಕ್‌ಗೆ ವರುಣ್ ಧವನ್ ಹೌಹಾರಿದ ದೃಶ್ಯ ಬೇಜಾನ್ ಸೌಂಡ್ ಮಾಡುತ್ತಿದೆ.
ಇನ್ನೊಂದ್ಕಡೆ ಅಭಿಮಾನಿಗಳಿಗೆ ರಶ್ಮಿಕಾ ಹಾಗೂ ವರುಣ್ ಧವನ್ ಹೊಸ ಸಿನಿಮಾ ಮಾಡ್ತಿದ್ದಾರಾ? ಅನ್ನೋ ಅನುಮಾನ ಕಾಡುತ್ತಿದೆ. 'ಪುಷ್ಪ' ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದಾರೆ. ಇತ್ತ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೇರೆ ಗೆಲ್ಲುತ್ತಿವೆ. ಈ ಮಧ್ಯೆ ಮತ್ತೊಂದು ಹೊಸ ಸಿನಿಮಾಗೇನಾದರೂ, ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಕೊಟ್ಟಬಿಟ್ರಾ? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ. ಅಸಲಿಗೆ ವರುಣ್ ಧವನ್‌ಗೆ ರಶ್ಮಿಕಾ ಚಮಕ್ ಕೊಟ್ಟಿದ್ದೇಕೆ? ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರಾ? ಇಂತಹದ್ದೇ ಒಂದಿಷ್ಟು ಮ್ಯಾಟರ್‌ಗೆ ಉತ್ತರ ಇಲ್ಲಿದೆ.

ವರುಣ್‌ಗೆ ರಶ್ಮಿಕಾ ಚಮಕ್
ವರುಣ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರುಣ್ ಹಾಗೂ ರಶ್ಮಿಕಾ ಹಾಕಿದ ಸ್ಟೆಪ್ಸ್ ರಶ್ಮಿಕಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ವಿಡಿಯೋ ಕೊನೆಯಲ್ಲಿ ರಶ್ಮಿಕಾ ಬಾಲಿವುಡ್ ನಟನಿಗೆ ಕೊಟ್ಟ ಚಮಕ್‌ಗೆ ಆ ನಟನೇ ಹೌಹಾರಿದ್ದಾನೆ. ಈ ವಿಡಿಯೋವನ್ನು ವರುಣ್ ಧವನ್ ಶೇರ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ರಶ್ಮಿಕಾ ಹಾಗೂ ವರುಣ್ ಇಬ್ಬರೂ 'ಬೀಸ್ಟ್' ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವರುಣ್ ಧವನ್‌ಗೆ ಅಚಾನಕ್ ಚಮಕ್ ಕೊಟ್ಟು ಬೆಚ್ಚಿಬೀಳಿಸಿದ್ದಾರೆ. ಆ ವಿಡಿಯೋವನ್ನೊಮ್ಮೆ ನೀವೂ ನೋಡಿ.

ರಶ್ಮಿಕಾ-ವರುಣ್ ಸಿನಿಮಾ ಮಾಡ್ತಿದ್ದಾರಾ?
ವರುಣ್ ಧವನ್ ಶೇರ್ ಮಾಡಿದ ವಿಡಿಯೋ ನೋಡಿ, ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿರಬಹುದಾ? ಎಂಬ ಅನುಮಾನ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್ ಇಬ್ಬರೂ ಒಟ್ಟಿಗೆ ನಟಿಸುತ್ತಿಲ್ಲ,. ಇವರಿಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು ಒಂದು ಜಾಹೀರಾತಿಗಾಗಿ. ಕಳೆದೆರಡು ದಿನಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್ ಇಬ್ಬರೂ ಜಾಹೀರಾತಿಗಾಗಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ವೇಳೆ ಬಿಡುವಿನ ಸಮಯದಲ್ಲಿ 'ಬೀಸ್ಟ್' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

'ಬೀಸ್ಟ್' ಸಾಂಗಿಗೆ ಮಸ್ತ್ ಸ್ಟೆಪ್ಸ್
ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್ ಜಾಹೀರಾತಿಗಾಗಿ ಒಟ್ಟಿಗೆ ನಟಿಸುತ್ತಿದ್ದರೂ, ಇಬ್ಬರ ಜೋಡಿಯನ್ನು ಇಷ್ಟ ಪಟ್ಟಿದ್ದಾರೆ. ಬೀಚ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್ 'ಬೀಸ್ಟ್' ಸಿನಿಮಾದ 'ಹಲಮತಿ ಹಬಿಬೋ' ಸಾಂಗಿಗೆ ಸ್ಟೆಪ್ಸ್ ಹಾಕಿದ್ದಾರೆ. ಇದೇ ವಿಡಿಯೋ ಬೇಜಾನ್ ಸದ್ದು ಮಾಡುತ್ತಿದ್ದು, ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವ ಎಲ್ಲಾ ಸಾಧ್ಯತೆನೂ ಇದೆ. 'ಬೀಸ್ಟ್' ಸಿನಿಮಾದ ಹಬಿಬೋ ಹಾಡಿನಲ್ಲಿ ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದು, ಕೇವಲ ಲಿರಿಕಲ್ ವಿಡಿಯೋ 100 ಮಿಲಿಯನ್ಸ್ ದಾಟಿದೆ.

ರಿಲೀಸ್‌ಗೆ ರೆಡಿ ಬಾಲಿವುಡ್ ಸಿನಿಮಾ
ರಶ್ಮಿಕಾ ಮಂದಣ್ಣ ಬಿಟೌನ್‌ನಲ್ಲಿ ಸೆಟಲ್ ಆಗುವುದಕ್ಕೆ ಸ್ಕೆಚ್ ಹಾಕಿದಂತಿದೆ. ಇನ್ನೂ ಒಂದೂ ಸಿನಿಮಾ ರಿಲೀಸ್ ಆಗಿಲ್ಲ. ಆಗಲೇ ರಶ್ಮಿಕಾ ಮಂದಣ್ಣ ಫೇಮಸ್ ಆಗಿದ್ದಾರೆ. 'ಪುಷ್ಪ' ಸಿನಿಮಾ ರಶ್ಮಿಕಾಗೆ ಸ್ಟಾರ್ ಪಟ್ಟು ಕೊಟ್ಟುಬಿಟ್ಟಿದೆ. ಅಲ್ಲದೆ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ 'ಮಿಷನ್ ಮಜ್ನು' ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ವಿಕಾಸ್ ಬೆಹಲ್ ನಿರ್ದೇಶನದ 'ಗುಡ್ ಬೈ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸಿದ್ದು, ಈ ಸಿನಿಮಾ ಕೂಡ ಮುಗಿದಿದೆ.


Click it and Unblock the Notifications











