IPL 2023 ಕ್ಷಣಗಣನೆ: ನರೇಂದ್ರ ಮೋದಿ ಸ್ಟೇಡಿಯಂ ರಂಗೇರಿಸಲು ಸಜ್ಜಾದ ರಶ್ಮಿಕಾ ಮಂದಣ್ಣ, ಅರಿಜಿತ್, ತಮನ್ನಾ!
ಇಂಡಿಯನ್ ಪ್ರೀಮಿಯರ್ ಲೀಗ್ 2023 ಆರಂಭ ಆಗುವುದಕ್ಕೆ ಇನ್ನೊಂದು ದಿನ ಬಾಕಿಯಿದೆ. ನಾಳೆ(ಮಾರ್ಚ್ 31) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದೆ.
ಮೊದಲ ಪಂದ್ಯ ಕಳೆದ ಬಾರಿ ಐಪಿಎಲ್ ಟ್ರೋಪಿ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಹಾಗೂ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರೋ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಸ್ಟೇಡಿಯಂ ಅನ್ನು ರಂಗೇರಿಸಲು ತಾರೆಯರನ್ನು ಕರೆಸಲಾಗಿದೆ. ಈ ಇವೆಂಟ್‌ನಲ್ಲಿ ಪರ್ಫಾಮೆನ್ಸ್ ನೀಡಲಿರುವ ಮೂವರು ತಾರೆಯರ ಪಟ್ಟಿ ಹೀಗಿದೆ.
ರಶ್ಮಿಕಾ ಮಂದಣ್ಣ ಪರ್ಫಾರ್ಮೆನ್ಸ್
ಐಪಿಎಲ್ 2023 ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕುತ್ತಿದ್ದಾರೆ. 'ಪುಷ್ಪ'ನ ಅರಗಣಿಯನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾದು ಕೂತಿದೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಮೂಲಕ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. ಶ್ರೀವಲ್ಲಿ ಅವತಾರವೆತ್ತಿ ಹಾಕಿದ್ದ ಹೆಜ್ಜೆಗೆ ವಿಶ್ವದ ಮೂಲೆ ಮೂಲೆಯಲ್ಲಿರೋ ಡ್ಯಾನ್ಸ್ ಪ್ರಿಯರು ಫಿದಾ ಆಗಿದ್ದರು. ಈಗ ರಶ್ಮಿಕಾ ಇದೇ ಮೊದಲ ಬಾರಿಗೆ ದೊಡ್ಡ ವೇದಿಕೆಯೊಂದರಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಅರಿಜಿತ್ ಸಿಂಗ್ ಗಾಯನ
ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಕೂಡ ಐಪಿಎಲ್ ಉದ್ಗಾಟನಾ ಸಮಾರಂಭದಲ್ಲಿ ಪರ್ಫಾಮೆನ್ಸ್ ನೀಡಲಾಗಿದ್ದಾರೆ. ತನ್ನ ರೊಮ್ಯಾಂಟಿಕ್ ಹಾಡುಗಳಿಂದ ಅರಿಜಿತ್ ಸಿಂಗ್ ಈಗಾಗಲೇ ಸಂಗೀತ ಪ್ರಿಯರ ಮನಗೆದ್ದಿದ್ದಾರೆ. ಈ ಬಾರಿ ಐಪಿಎಲ್ ಅನ್ನು ತನ್ನ ಮಧುರವಾದ ಧ್ವನಿಯಿಂದ ಅರಿಜಿತ್ ಸಿಂಗ್ ರಂಗೇರಿಸಲಿದ್ದಾರೆ.
ಲೈವ್ ಪರ್ಫಾಮೆನ್ಸ್ ನೀಡುತ್ತಿರುವ ಅರಿಜಿತ್ ಸಿಂಗ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಯಾವ್ಯಾವ ಹಾಡುಗಳಿಗೆ ಧ್ವನಿಯಾಗುತ್ತಾರೆ ಅನ್ನೋದು ನಾಳೆ ಸಂಜೆ 6 ಗಂಟೆಯ ಬಳಿಕ ತಿಳಿಯಲಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಟರ್‌ನಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದೆ.
ತಮನ್ನಾ ಭಾಟಿಯಾ ಸ್ಟೆಪ್ಸ್
ಐಪಿಎಲ್‌ನಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿರುವ ಮೂವರು ಸೆಲೆಬ್ರೆಟಿಗಳಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ರಶ್ಮಿಕಾ ಮಂದಣ್ಣ, ಅರಿಜಿತ್ ಸಿಂಗ್ ಜೊತೆ ತಮನ್ನಾ ಭಾಟಿಯಾ ಕೂಡ ಪರ್ಫಾಮೆನ್ಸ್ ನೀಡಲಿದ್ದಾರೆ. ಈ ಮೂವರು ನಾಳೆ(ಮಾರ್ಚ್ 31) ಸ್ಟೇಡಿಯಂ ಅನ್ನು ತಮ್ಮ ಪರ್ಫಾಮೆನ್ಸ್‌ನಿಂದ ರಂಗೇರಿಸಲಿದ್ದಾರೆ.
ಇವರೊಂದಿಗೆ ಹಾರ್ದಿಕ್ ಪಾಂಡ್ಯ,ಮಹೇಂದ್ರ ಸಿಂಗ್ ಧೋನಿ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ರವೀಂದ್ರ ಜಡೇಜಾ ಅಂತ ಸ್ಟಾರ್ ಕ್ರಿಕೆಟರ್‌ಗಳ ಆಟವನ್ನು ನೋಡಲು ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಒಟ್ನಲ್ಲಿ ನಾಳೆ ಮನರಂಜನೆಯ ಜೊತೆ ಜೊತೆಗೆ ಕ್ರಿಕೆಟ್ ಮಜಾವನ್ನು ಸೆವೆಯುವುದು ಗ್ಯಾರಂಟಿ.


Click it and Unblock the Notifications











