ರಶ್ಮಿಕಾ ಮಂದಣ್ಣ ಲಿಫ್ಟ್ ವಿಡಿಯೋದಲ್ಲಿ ಇರೋ ಅಸಲಿ ಮುಖ ಯಾರದ್ದು? ಆಕೆಯ ಹಿನ್ನೆಲೆಯೇನು?
Rashmika Mandanna Deepfake: ಶಾರ್ಟ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಲಿಫ್ಟ್ ಒಳಗೆ ಎಂಟ್ರಿ ಕೊಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಕಳೆದ ಒಂದೆರಡು ದಿನಗಳಿಂದ ಈ ವಿಡಿಯೋ ಬಗ್ಗೆ ಸುದ್ದಿಯಾಗುತ್ತಿದೆ. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅಂತಹವರೇ ಈ ವಿಡಿಯೋ ನೋಡಿ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಕೂಡ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕೃತ್ಯ ಎಸಗಿದವರಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಡಿಜಿಟಲ್ ಜಮಾನದಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸಿದರೆ ಇರುವ ಐಟಿ ರೂಲ್ಸ್ ಅನ್ನು ಟ್ವೀಟ್ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಅನ್ನು ಧರಿಸಿ ಲಿಫ್ಟ್ ಒಳಗೆ ಎಂಟ್ರಿ ಕೊಡುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಅಸಲಿಗೆ ರಶ್ಮಿಕಾ ಮಂದಣ್ಣರದ್ದೇ ಅಲ್ವೇ ಅಲ್ಲ. ಇದನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಬಳಸಿ ಇನ್ಯಾರದ್ದೋ ವಿಡಿಯೋಗೆ ರಶ್ಮಿಕಾ ಮುಖ ಫಿಕ್ಸ್ ಮಾಡಿದ ವಿಡಿಯೋ. ಈ ಕೃತ್ಯದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಈ ವಿಡಿಯೋದಲ್ಲಿರುವ ಅಸಲಿ ಮುಖ ಯಾರದ್ದು? ಅವರ ಹಿನ್ನೆಲೆ ಏನು ಅಂತ ಹುಡುಕಾಡುತ್ತಿದ್ದಾರೆ.
ರಶ್ಮಿಕಾ ವಿಡಿಯೋದ ಅಸಲಿ ಮುಖ ಯಾರದ್ದು?
ರಶ್ಮಿಕಾ ಮಂದಣ್ಣರದ್ದೇ ವಿಡಿಯೋ ಎನ್ನುವಷ್ಟು ಸಹಜ. ಆದರೆ, ಇದು ಫೇಕ್ ವಿಡಿಯೋ. ಡೀಪ್ ಫೇಕ್ ಅನ್ನುವ ಆರ್ಫಿಷಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಿ ಈ ವಿಡಿಯೋ ಸೃಷ್ಟಿಸಲಾಗಿತ್ತು. ಈ ವಿಡಿಯೋದ ಅಸಲಿ ಕಥೆ ತಿಳಿಯುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುಮಾರು 12 ಮಿಲಿಯನ್‌ಗೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದರು. ವೈರಲ್ ಆಗಿರುವ ರಶ್ಮಿಕಾ ವಿಡಿಯೋ ಹಿಂದಿರುವ ಅಸಲಿ ಮುಖದ ಹೆಸರು ಜಾರಾ ಪಟೇಲ್. ಈಕೆ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮಹಿಳೆ.
ಜಾರಾ ಪಟೇಲ್ ಯಾರು ಈಕೆ?
ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾರಾ ಪಟೇಲ್ ಯಾರು ಅನ್ನೋ ಹುಡುಕಾಟ ಶುರುವಾಗಿದೆ. ಜಾರಾ ಪಟೇಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಕೆನೇ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಪ್ರೊಫೈಲ್ ಪ್ರಕಾರ, ಜಾರಾ ಪಟೇಲ್ ಫುಲ್ ಟೈಮ್ ಡಾಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬ್ರಿಟಿಷ್ ಇಂಡಿಯನ್ ಗರ್ಲ್ ಅಂತಾನೂ ಬರೆದುಕೊಂಡಿದ್ದಾರೆ. ರಶ್ಮಿಕಾ ಜೊತೆ ಜೊತೆಗೆನೇ ಈಕೆಯ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
4 ಲಕ್ಷ ಫಾಲೋವರ್ಸ್.. 6 ಲಕ್ಷ ಲೈಕ್ಸ್
ಜಾರಾ ಪಟೇಲ್ ಇನ್‌ಸ್ಟಾಗ್ರಾಂ ಖಾತೆಯನ್ನು ಸುಮಾರು 4.33 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಈಕೆ ತನ್ನ ಖಾತೆಯಲ್ಲಿ ತನ್ನ ಹಾಟ್ ಅಂಡ್ ಗ್ಲಾಮರ್ಸ್ ಫೋಟೊ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈಕೆಯ ವಿಡಿಯೋಗೆ ರಶ್ಮಿಕಾ ಮುಖವನ್ನು ಕೂರಿಸಿ ವೈರಲ್ ಮಾಡಲಾಗಿದೆ. ಆದರೆ, ಜಾರಾ ಪಟೇಲ್ ಇರುವ ಒರಿಜನಲ್ ವಿಡಿಯೋವನ್ನು 6 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ರಾಜೀವ್ ಚಂದ್ರಶೇಖರ್ ವಾರ್ನಿಂಗ್
ರಶ್ಮಿಕಾ ಡೀಪ್ ಫೇಕ್ ವಿಡಿಯೋಗೆ ಅಮಿತಾಭ್ ಬಚ್ಚನ್ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. "2023 ಏಪ್ರಿಲ್‌ನಲ್ಲಿ ಹೇಳಲಾದ ಐಟಿ ನಿಯಮಗಳ ಅಡಿಯಲ್ಲಿ ಯಾವುದೇ ಬಳಕೆದಾರರಿಂದ ಎಂತಹದ್ದೇ ತಪ್ಪು ಮಾಹಿತಿ ಪೋಸ್ಟ್ ಮಾಡುವಂತಿಲ್ಲ. ಒಂದು ವೇಳೆ ಜನರು ಅಥವಾ ಸರ್ಕಾರ ತಪ್ಪು ಮಾಹಿತಿ ಹಂಚಿದ ಬಗ್ಗೆ ವರದಿ ಮಾಡಿದಾಗ ಅದನ್ನು ಸಂಬಂಧ ಪಟ್ಟ ಪ್ಲಾಟ್‌ಫಾರ್ಮ್‌ಗಳು ತೆಗೆದು ಹಾಕಬೇಕು" ಎಂದು ಎಕ್ಸ್(ಟ್ವಿಟರ್)ನಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.


Click it and Unblock the Notifications











