ಕೆಂಪು ಉಡುಪು ಧರಿಸಿ ಬಂದ ರಶ್ಮಿಕಾ ಮಂದಣ್ಣಗೆ ಮುಜುಗರ: ಅಂಥದ್ದೇನಾಯ್ತು?

ಉತ್ತರದಿಂದ ದಕ್ಷಿಣದವರೆಗೂ ರಶ್ಮಿಕಾ ಮಂದಣ್ಣ ಬಗ್ಗೆನೇ ಚರ್ಚೆ. ಅದರಲ್ಲೂ ಬಾಲಿವುಡ್‌ನಲ್ಲೇ ರಶ್ಮಿಕಾ ಸೆಟಲ್ಸ ಆಗುವ ಹಾಗೆ ಕಾಣಿಸುತ್ತಿದೆ. ಯಾಕಂದ್ರೆ, ಒಂದರ ಹಿಂದೊಂದು ಸಿನಿಮಾಗಳು ಈ ನಟಿಯನ್ನು ಹುಡುಕಿಕೊಂಡು ಬರುತ್ತಲೇ ಇದೆ.

ಇತ್ತ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್‌ನಿಂದ ಆಫರ್‌ಗಳನ್ನು ಬಿಡುತ್ತಿಲ್ಲ. ಒಳ್ಳೊಳ್ಳೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ಹೀಗಾಗಿ ನ್ಯಾಷನಲ್ ಕ್ರಶ್ ದಕ್ಷಿಣ ಭಾರತವನ್ನುಬಿಟ್ಟು ಮುಂಬೈನಲ್ಲಿಯೇ ಸೆಟೆಲ್ ಆಗಿದ್ದಾರೆ.

ಇನ್ನು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ ಅಂದರೆ ಕೇಳ್ಬೇಕಾ? ಕ್ಯಾಮರಾಗಳೆಲ್ಲಾ ರಶ್ಮಿಕಾ ಹೋದಲ್ಲೆಲ್ಲಾ ಮುತ್ತಿಕೊಳ್ಳುತ್ತಿವೆ. ಅದರಲ್ಲೂ ಮುಂಬೈ ಏರ್‌ಪೋರ್ಟ್‌ನಿಂದ ಕ್ಯಾಮರಾಗಳು ಹಾವಳಿ ಇಟ್ಟು ಬಿಡುತ್ತವೆ. ಸದ್ಯ ರಶ್ಮಿಕಾ ಮಂದಣ್ಣ ಶಾರ್ಟ್ ಡ್ರೆಸ್ ಧರಿಸಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆದರೆ, ಅಲ್ಲಿ ತಾವೇ ತೊಟ್ಟ ಉಡುಪಿನಿಂದ ಮುಜುಗರ ಅನುಭವಿಸಿರೋ ಫೋಟೊ ಹಾಗೂ ವಿಡಿಯೋ ವೈರಲ್ ಆಗಿವೆ.

ಕೆಂಪು ಡ್ರೆಸ್‌ನಲ್ಲಿ ರಶ್ಮಿಕಾ ಸಖತ್ ಹಾಟ್

ಕೆಂಪು ಡ್ರೆಸ್‌ನಲ್ಲಿ ರಶ್ಮಿಕಾ ಸಖತ್ ಹಾಟ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೆಂಪು ಡ್ರೆಸ್ ತೊಟ್ಟು ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ ಅವರ ಸುತ್ತ ಬರೀ ಕ್ಯಾಮರಾಗಳೇ ಸುತ್ತಿಕೊಂಡಿದ್ದವು. ಶಾರ್ಟ್ ಡ್ರೆಸ್ಸ ತೊಟ್ಟು ಬಂದಿದ್ದ ರಶ್ಮಿಕಾ ಮಂದಣ್ಣ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಕೆಂಪು ಕಾಸ್ಟ್ಯೂಮ್‌ನಲ್ಲಿ ರಶ್ಮಿಕಾ ಮಂದಣ್ಣರನ್ನುನೋಡಿ ಅವರ ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ನಿಜಕ್ಕೂ ರಶ್ಮಿಕಾ ಈ ಡ್ರೆಸ್‌ನಲ್ಲಿ ಹೊಳೆಯುತ್ತಿದ್ದರು.

ರಂಗು ರಂಗಾದ ರಶ್ಮಿಕಾ ಮಂದಣ್ಣ

ರಂಗು ರಂಗಾದ ರಶ್ಮಿಕಾ ಮಂದಣ್ಣ

ಜುಲೈ 15ರಂದು ಮುಂಬೈನಲ್ಲಿ ಫ್ಯಾಶನ್ ಶೋವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ದಿಗ್ಗಜರು ಆಗಮಿಸಿದ್ದರು. ಇದೇ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ತುಂಡು ಉಡುಗೆಯನ್ನು ತೊಟ್ಟು ಬಂದಿದ್ದರು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಆಕರ್ಷಣೆಯಾಗಿದ್ದರು. ರಶ್ಮಿಕಾ ಸುಂದರವಾಗಿ ಕಾಣಿಸಿಕೊಂಡಿದ್ದರೂ, ಅವರಿಗೆ ಕಂಫರ್ಟೆಬಲ್ ಆಗಿ ಇದ್ದಂತೆ ಕಾಣುತ್ತಿರಲ್ಲ.

ರಶ್ಮಿಕಾಗೆ ಮತ್ತೆ ಮುಜುಗರ?

ರಶ್ಮಿಕಾಗೆ ಮತ್ತೆ ಮುಜುಗರ?

ರಶ್ಮಿಕಾ ಫ್ಯಾಶನ್ ಶೋ ಮುಗಿಸಿ ಹೊರ ಬರುತ್ತಿದ್ದಂತೆ ಕೆಲವು ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರು ಮಾಡಿದ್ದವು. ಇದರಲ್ಲಿ ರಶ್ಮಿಕಾ ಮಂದಣ್ಣ ತಾನು ತೊಟ್ಟ ಉಡುಗೆಯಿಂದ ಕಂಫರ್ಟೆಬಲ್ ಆಗಿದ್ದಂತೆ ಕಾಣಿಸಿಲಿಲ್ಲ. ಅದಕ್ಕೆ ಕಾರಣವಿದೆ. ಛಾಯಾಗ್ರಾಹಕರು ರಶ್ಮಿಕಾ ಜೊತೆ ಫೋಟೊ ತೆಗೆಸಿಕೊಳ್ಳಲು ಮುಂದಾದಾಗ ರಶ್ಮಿಕಾ ಮುಜುಗರಕ್ಕೆ ಒಳಗಾಗಿದ್ದಾರೆ. ಇದು ನೆಟ್ಟಿಗರ ಕಣ್ಣಿಗೆ ಬೀಳುತ್ತಿದ್ದಂತೆ ಆ ಫೋಟೊ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಫೋಟೊ ತೆಗೆಸಿಕೊಂಡ ಅನುಪಮ್ ಖೇರ್

ಫೋಟೊ ತೆಗೆಸಿಕೊಂಡ ಅನುಪಮ್ ಖೇರ್

ರಶ್ಮಿಕಾ ಮಂದಣ್ಣ ಬಂದಿದ್ದ ಇದೇ ಫ್ಯಾಶನ್ ಶೋಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಕೂಡ ಆಗಮಿಸಿದ್ದರು. ಇಬ್ಬರೂ ಒಟ್ಟಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಅಲ್ಲದೆ ಅನುಮಪ್ ಖೇರ್ ಸ್ವತ: ರಶ್ಮಿಕಾ ಮಂದಣ್ಣ ಜೊತೆ ನಿಂತು ತಮ್ಮದೇ ಫೋನ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
Rashmika Mandanna Once Again Feel Uncomfortable In Red Dress Video Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X