ಚಿಕನ್ ತಿಂದು ಟ್ರೋಲ್ ಆದ ಬಳಿಕ 'ಇಣುಕಿ ನೋಡುವ ಚಂದ್ರ'ನ ಹಿಂದೆ ಬಿದ್ದ ರಶ್ಮಿಕಾ ಮಂದಣ್ಣ!

'ಪುಷ್ಪ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಟ್ ಆಗಿದ್ದೇ ಆಗಿದ್ದು ರಶ್ಮಿಕಾ ಮಂದಣ್ಣ ರೇಂಜ್ ಬೇರೆಲ್ಲೋ ಹೋಗಿಬಿಟ್ಟಿದೆ. ಬಾಲಿವುಡ ನಿರ್ಮಾಪಕರು ನ್ಯಾಶನಲ್ ಕ್ರಶ್ ಹಿಂದೆ ಬಿದ್ದಾರೆ. ಒಂದರ ಹಿಂದೊಂದು ಆಫರ್ ಕೊಡುವುದಕ್ಕೆ ಶುರು ಮಾಡಿದ್ದಾರೆ.

ಆಮಿತಾಬ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ, ರಣ್‌ಬೀರ್ ಕಪೂರ್ ಬಳಿಕ ಮತ್ತೊಬ್ಬ ಬಾಲಿವುಡ್ ನಟನಿಗೆ ಹೀರೊಯಿನ್ ಆಗುವುದಕ್ಕೆ ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಬಾಲಿವುಡ್‌ನಲ್ಲೀಗ ಇದೇ ಟಾಕ್ ಶುರುವಾಗಿದೆ.

Rashmika Mandanna Shahid Kapoor Movie Peeping Moon produced by Dil Raju Announced

ಬಾಲಿವುಡ್‌ನ ಸ್ಟಾರ್ ನಟ ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಕಾಮಿಡಿ ಸಿನಿಮಾಗಳನ್ನು ನಿರ್ದೇಶಿಸೋ ಹಿರಿಯ ನಿರ್ದೇಶಕ ಅನೀಜ್ ಬಾಜ್ಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಈ ಸಿನಿಮಾಗೂ ಮುನ್ನ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದರು. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಚಿಕನ್ ತಿಂದು ಟ್ರೋಲ್

ರಶ್ಮಿಕಾ ಮಂದಣ್ಣ ಈ ಹಿಂದಿನ ಸಂದರ್ಶವೊಂದರಲ್ಲಿ "ನಾನು ಸಸ್ಯಹಾರಿ" ಎಂದು ಹೇಳಿಕೊಂಡಿದ್ದರು. ಆದ್ರೀಗ ನಾನ್ ವೆಜ್ ಬರ್ಗರ್ ಜಾಹೀರಾತಿನಲ್ಲಿ ರಶ್ಮಿಕಾ ಚಿಕನ್ ಬರ್ಗರ್ ತಿನ್ನುತ್ತಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಟ್ರೋಲ್ ಮಾಡುವವರ ಕಣ್ಣುಗಳು ಅಲರ್ಟ್ ಆಗಿವೆ. ರಶ್ಮಿಕಾ ಮಂದಣ್ಣರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

"ಹೇಳುವುದು ಒಂದು, ಮಾಡುವುದು ಒಂದು" ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ" ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಕಳೆದೆರಡು ದಿನಗಳಿಂದ ರಶ್ಮಿಕಾ ಮಂದಣ್ಣ ಫೇಕ್ ಎಂದು ಕರೆದಿದ್ದು ಅಲ್ಲದೆ, ಹೆವಿ ಟ್ರೋಲ್ ಆಗುತ್ತಿದ್ದಾರೆ. ಈ ಮಧ್ಯೆನೇ ಹೊಸ ಸಿನಿಮಾನೂ ಅನೌನ್ಸ್ ಆಗಿದೆ.

Rashmika Mandanna Shahid Kapoor Movie Peeping Moon produced by Dil Raju Announced

ಶಾಹಿದ್ ಕಪೂರ್ ಜೊತೆ ಸಿನಿಮಾ

ರಶ್ಮಿಕಾ ಮಂದಣ್ಣಗೆ ಟ್ರೋಲ್ ಆಗೋದು ಹೊಸದೇನೂ ಅಲ್ಲ. ಏನಾದರೂ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಅದಕ್ಕೆ ಈ ಬಾರಿ ಕೂಡ ಟ್ರೋಲ್‌ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇದೇ ವೇಳೆ ಹೊಸ ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಅಂದ್ಹಾಗೆ, ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ 'ಪೀಪಿಂಗ್ ಮೂನ್'. ಇದರ ಅರ್ಥ 'ಇಣುಕಿ ನೋಡುವ ಚಂದ್ರ' ಎಂದಾಗುತ್ತದೆ. ಅನೀಜ್ ಬಾಜ್ಮಿ ನಿರ್ದೇಶನ ಮಾಡುತ್ತಿರುವುದರಿಂದ ಇದೊಂದು ಆಕ್ಷನ್ ಕಾಮಿಡಿ ಸಿನಿಮಾ ಎಂದು ಹೇಳಲಾಗುತ್ತಿದೆ.

ಈ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ

'ಪೀಪಿಂಗ್ ಮೂನ್' ಸಿನಿಮಾವನ್ನು ಅನ್ನು ಟಾಲಿವುಡ್ ನಿರ್ದೇಶಕ ದಿಲ್ ರಾಜು ಹಾಗೂ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಮಂದಣ್ಣ ಇವರೊಂದಿಗೆ 'ಗುಡ್‌ಬೈ' ಹಾಗೂ 'ವಾರಿಸು' ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಈ ಪಾತ್ರಕ್ಕೆ ರಶ್ಮಿಕಾನೇ ಬೇಕು ಎಂದು ಚಿತ್ರತಂಡ ನಿರ್ಧಾರ ಮಾಡಿತ್ತು.

" ಈ ಪಾತ್ರಕ್ಕೆ ರಶ್ಮಿಕಾ ಮಂದಣ್ಣನೇ ಬೇಕು ಅನ್ನೋದು ಮೊದಲಿನಿಂದಲೂ ನಿರ್ಧಾರ ಮಾಡಿದ್ದೆವು. ಇಂತಹ ಚಮತ್ಕಾರದ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಎಂದು ತೀರ್ಮಾನ ಮಾಡಿದ್ದೆವು. ರಶ್ಮಿಕಾ ಹಾಗೂ ಶಾಹಿದ್ ಕಪೂರ್ ಸಿನಿಪ್ರಿಯರಿಗೆ ಫ್ರೆಶ್ ಕಾಂಬಿನೇಷನ್. ಹೀಗಾಗಿ ಇವರೇ ಸೂಕ್ತ" ಎಂದು ಚಿತ್ರತಂಡ ಪ್ರತಿಕ್ರಿಯೆ ನೀಡಿದೆ.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಮತ್ತೊಬ್ಬ ಹೀರೊ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ 'ಎನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣ್‌ಬೀರ್ ಕಪೂರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Rashmika Mandanna Shahid Kapoor Movie Peeping Moon produced by Dil Raju Announced, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X