'ಗೀತಾಂಜಲಿ' ಪಾತ್ರದಲ್ಲಿ ಈ ಬಾಲಿವುಡ್ ನಟಿ ನಟಿಸ್ಬೇಕಿತ್ತು: ಆದ್ರೂ 'ಎನಿಮಲ್' ನಿರ್ದೇಶಕ ರಶ್ಮಿಕಾ ಆಯ್ಕೆ ಮಾಡಿದ್ದೇಕೆ?
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ 'ಎನಿಮಲ್' ರಿಲೀಸ್ ಆಗಿದೆ. ಅರ್ಜುನ್ ರೆಡ್ಡಿ ನಿರ್ದೇಶಕ ಆಕ್ಷನ್ ಕಟ್ ಹೇಳಿರುವ 'ಎನಿಮಲ್' ಸಿನಿಮಾಗೆ ಈಗಾಗಲೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಜೋಡಿಯನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ವಿದೇಶದಲ್ಲೂ ಸಿನಿಮಾಗೆ ಕ್ರೇಜ್ ಹೆಚ್ಚಿದೆ. ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ಮಧ್ಯೆ ಇಂಟ್ರೆಸ್ಟಿಂಗ್ ವಿಷಯವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

'ಎನಿಮಲ್' ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೊನೆಯ ಕ್ಷಣದಲ್ಲಿ ರಶ್ಮಿಕಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಮೊದಲ ಆಯ್ಕೆ ಮಾಡಿದ್ದು ಒಬ್ಬ ಬಾಲಿವುಡ್ ನಟಿಯನ್ನ ಅಂದರೆ ನಂಬುತ್ತೀರಾ? ಕೆಲವು ಸೀನ್‌ಗಳಲ್ಲಿ ನಟಿಸಿದ ಬಳಿಕ ಆಕೆ ಸೂಟ್ ಆಗ್ತಿಲ್ಲ ಅಂತ ಅನಿಸಿತ್ತು. ಆಗಲೇ ರಶ್ಮಿಕಾ ಮಂದಣ್ಣ 'ಎನಿಮಲ್' ಸೆಟ್ಟಿಗೆ ಎಂಟ್ರಿ ಕೊಟ್ಟಿದ್ದರು.
ಸಂದೀಪ್ ರೆಡ್ಡಿ ವಂಗಾಗೆ ರಣ್‌ಬೀರ್ ಕಪೂರ್ ಪಾತ್ರ ಎಷ್ಟು ಮುಖ್ಯ ಆಗಿತ್ತೋ.. ಅಷ್ಟೇ ನಾಯಕಿ ಪಾತ್ರ ಕೂಡ ಮುಖ್ಯ ಆಗಿತ್ತು. ಹೀಗಾಗಿ ನಾಯಕಿ ವಿಚಾರದಲ್ಲಿ ರಾಜಿ ಆಗುವ ಮಾತೇ ಇರಲಿಲ್ಲ. ಆದರೆ, ಸಂದೀಪ್ ರೆಡ್ಡಿ ಮನಸ್ಸಲ್ಲಿ ರಶ್ಮಿಕಾ ಮಂದಣ್ಣ ಇರಲಿಲ್ಲ. ಬಾಲಿವುಡ್‌ನ ಜನಪ್ರಿಯ ನಟಿಯನ್ನು ಆಯ್ಕೆ ಮಾಡಲಾಗಿತ್ತು. ಆ ನಟಿ ಕೆಲವು ದಿನ ಶೂಟಿಂಗ್ ಕೂಡ ಮಾಡಿದ್ದರು. ಆಕೆ ಮತ್ಯಾರೂ ಅಲ್ಲ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ.
ಬಾಲಿವುಡ್‌ನಲ್ಲಿ ಪರಿಣಿತಿ ಚೋಪ್ರಾ ಮಾರ್ಕೆಟ್ ಕುಸಿದ್ದರೂ, ಸಂದೀಪ್ ರೆಡ್ಡಿಗೆ ಆಕೆಯ ಮೇಲೆ ಎಲ್ಲಿಲ್ಲದ ನಂಬಿಕೆ ಇತ್ತು. ಹೀಗಾಗಿ ಪರಿಣಿತಿ ಚೋಪ್ರಾರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಗೀತಾಂಜಲಿ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕೆಲವು ಟ್ರಯಲ್ ಸೀನ್‌ಗಳಲ್ಲೂ ನಟಿಸಿದ್ದರು. ಆದರೆ, ಪರಿಣಿತಿ ಚೋಪ್ರಾಗೆ ಈ ಪಾತ್ರ ಯಾಕೋ ಹೊಂದಾಣಿಯಾಗುತ್ತಿಲ್ಲ ಅಂತ ನಿರ್ದೇಶಕರಿಗೆ ಅನಿಸಿತ್ತು. ಹೀಗಾಗಿ, ಗೀತಾಂಜಲಿ ಪಾತ್ರದಿಂದ ಪರಿಣಿತಿ ಚೋಪ್ರಾರನ್ನು ಕೈ ಬಿಡಲಾಯ್ತು.

ಪರಿಣಿತಿ ಚೋಪ್ರಾರನ್ನು ಸಿನಿಮಾ ಕೈಬಿಟ್ಟಿರುವ ಸುದ್ದಿ ಹರಡುತ್ತಿದ್ದಂತೆ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬಂದಿತ್ತು. ಈಗ ಅದೇ ಸಿನಿಮಾ ರಿಲೀಸ್ ಆಗಿದೆ. ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ರಣ್‌ಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಟ್ರೈಲರ್ ರಿಲೀಸ್ ಆದಾಗ ರಶ್ಮಿಕಾ ಡೈಲಾಗ್ ಬಗ್ಗೆ ನೆಟ್ಟಿಗರು ಅಪಹಾಸ್ಯ ಮಾಡಿದ್ದರು.
ಒಂದು ಎಮೋಷನಲ್ ಸೀನ್‌ನಲ್ಲಿ ರಶ್ಮಿಕಾ ನಿರ್ದಿಷ್ಟವಾದ ರೀತಿಯಲ್ಲಿಯೇ ಡೈಲಾಗ್ ಹೇಳಬೇಕಿತ್ತು. ಹಲ್ಲು ಕಚ್ಚಿಕೊಂಡು ಹೇಳಬೇಕಿತ್ತು. ಆದರೆ, ರಶ್ಮಿಕಾ ಮಂದಣ್ಣ ಹಾಗೆ ಮಾಡಿಲ್ಲ ಎಂದು ನೆಟ್ಟಿಗರು ಹೆವೀ ಟ್ರೋಲ್ ಮಾಡಿದ್ದರು. ಕೆಲವರು ರಶ್ಮಿಕಾ ಮಂದಣ್ಣ ಬದಲು ಪರಿಣಿತಿ ಚೋಪ್ರಾನೇ ಇರಬೇಕಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದರು.


Click it and Unblock the Notifications











