ಏರ್‌ಪೋರ್ಟ್‌ನಲ್ಲಿ ಇಳಿಯುತ್ತಿದ್ದಂತೆ ಟ್ರೋಲ್ ಆದ ರಶ್ಮಿಕಾ: ಪ್ಯಾಂಟ್ ಎಲ್ಲಿ ಎಂದ ನೆಟ್ಟಿಗರು

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಅಂತ ಸಾಬೀತಾಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ರೇಂಜ್ ಕೂಡ ಬದಲಾಗಿದೆ. ಅದರಲ್ಲೂ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಜಾದು ಮಾಡಿದ್ದು ರಶ್ಮಿಕಾ ಮಂದಣ್ಣ ಯಶಸ್ಸಿನ ಮತ್ತೊಂದು ಹಂತಕ್ಕೆ ಏರಿದ್ದಾರೆ. ಎಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ಮಧ್ಯೆ ರಶ್ಮಿಕಾ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದು ಹೊಸತೇನಲ್ಲ. ಸ್ಯಾಂಡಲ್‌ವುಡ್‌ಗೆ ಗುಡ್‌ ಬೈ ಹೇಳಿ ಟಾಲಿವುಡ್‌ ಕಡೆ ಮುಖ ಮಾಡುತ್ತಿದ್ದಂತೆ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಇಲ್ಲಿಂದ ಶುರುವಾಗಿದ ಟ್ರೋಲ್ ಇಂದಿಗೂ ಮುಂದುವರೆಯುತ್ತಲೇ ಇದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈನ ಏರ್‌ಪೋರ್ಟ್‌ಗೆ ಬಂದು ಇಳಿಯುತ್ತಿದ್ದಂತೆ ಭಯಂಕರವಾಗಿ ಟ್ರೋಲ್ ಆಗಿದ್ದಾರೆ. ರಶ್ಮಿಕಾ ಟ್ರೋಲ್ ಆಗಿದ್ದು ಯಾಕೆ? ಹೇಗೆಲ್ಲಾ ಟ್ರೋಲ್ ಆಗಿದ್ದಾರೆ ಅಂತ ತಿಳಿಯಲು ಮುಂದೆ ಓದಿ.

 ರಶ್ಮಿಕಾ ಮಂದಣ್ಣಗೆ ಟ್ರೋಲ್ ಕಾಟ

ರಶ್ಮಿಕಾ ಮಂದಣ್ಣಗೆ ಟ್ರೋಲ್ ಕಾಟ

'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಾಡು ನೋಡಿ ರಶ್ಮಿಕಾ ಅಭಿಮಾನಿಗಳು ಥ್ರಿಲ್ ಆಗಿದ್ದರು. ಇನ್ನು ಸಿನಿಮಾ 300 ಕೋಟಿ ಲೂಟಿ ಮಾಡುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. 'ಪುಷ್ಪ' ಗೆಲ್ಲುತ್ತಿದ್ದಂತೆ ರಶ್ಮಿಕಾ ನಟಿಸುತ್ತಿರುವ ಬಾಲಿವುಡ್ ಸಿನಿಮಾಗಳಿಗೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಿದೆ. ಹೀಗಾಗಿ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕೆಲಸದ ನಿಮಿತ್ತ ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ್ದ ರಶ್ಮಿಕಾ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಈಗ ಅದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತುಂಡುಡುಗೆಯಲ್ಲಿ ರಶ್ಮಿಕಾ ಟ್ರೋಲ್

ರಶ್ಮಿಕಾ ಮಂದಣ್ಣ ಮುಂಬೈ ಏರ್‌ಪೋರ್ಟ್‌ನಲ್ಲಿ ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ದೊಗಲೆಯಾಗಿರುವ ಸ್ವೆಟ್ ಟೀ ಶರ್ಟ್ ಹಾಗೂ ಡೆನಿಮ್ ಶಾರ್ಟ್ ಧರಿಸಿದ್ದರು. ದೊಗಲೆ ಟಿ- ಶರ್ಟ್ ರಶ್ಮಿಕಾ ಹಾಕಿದ್ದ ಶಾರ್ಟ್ಸ್ ಅನ್ನು ಮರೆಮಾಚಿತ್ತು. ಈ ಅವತಾರದಲ್ಲಿ ರಶ್ಮಿಕಾ ಮಂದಣ್ಣರನ್ನು ನೋಡುತ್ತಿದ್ದಂತೆ ನೆಟ್ಟಿಗರು ದಿಢೀರನೇ ಅಲರ್ಟ್ ಆಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ತಲೆಗೊಂದು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ನೆಟ್ಟಿಗರು ಮಾಡಿದ ಒಂದೂ ಟ್ರೋಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

 ಪ್ಯಾಂಟ್ ಹಾಕುವುದನ್ನೇ ಮರೆತ್ರಾ ರಶ್ಮಿಕಾ?

ಪ್ಯಾಂಟ್ ಹಾಕುವುದನ್ನೇ ಮರೆತ್ರಾ ರಶ್ಮಿಕಾ?

ರಶ್ಮಿಕಾ ಮಂದಣ್ಣ ಮುಂಬೈ ಏರ್‌ಫೊರ್ಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಿನ್ನ-ವಿಭಿನ್ನ ಕಮೆಂಟ್‌ಗಳು ಹರಿದಾಡುವುದಕ್ಕೆ ಶುರುವಾಗಿವೆ. " ರಶ್ಮಿಕಾ ಮಂದಣ್ಣಗೆ ಚಳಿನೇ ಆಗುವುದಿಲ್ಲ." ಎಂದು ಒಬ್ಬರು ಕಮೆಂಟ್ ಮಾಡಿದ್ದರೆ. ಮತ್ತೊಬ್ಬರು " ರಶ್ಮಿಕಾ ಪ್ಯಾಂಟ್ ಹಾಕುವುದನ್ನೇ ಮರೆತು ಬಿಟ್ಟಿದ್ದಾರೆ ಅಂತ ನನಗನ್ನಿಸುತ್ತೆ." ಇನ್ನೊಬ್ಬರು " ಮೇಲೆ ಪೂರ್ತಿ ಕವರ್ ಆಗಿದೆ. ಕೆಳಗೆ ಮಾತ್ರ ಖಾಲಿ." ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು " ರಶ್ಮಿಕಾ ಮಂದಣ್ಣ ನಿಜವಾಗಲೂ ಸುಂದರವಾಗಿದ್ದಾರೆ." ಅಂತನೂ ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ.

 ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬಾಲಿವುಡ್‌ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಕೈಯಲ್ಲಿ ಎರಡು ಬಾಲಿವುಡ್ ಸಿನಿಮಾಗಳಿವೆ. ಸಿದ್ದಾರ್ಥ ಮಲ್ಹೋತ್ರಾ ಜೊತೆ ನಟಿಸುತ್ತಿರುವ 'ಮಿಷನ್ ಮಜ್ನು'. ಅಮಿತಾಬ್ ಮಗಳಾಗಿ ನಟಿಸುತ್ತಿರುವ 'ಗುಡ್ ಬೈ' ಸಿನಿಮಾ ಕೈಯಲ್ಲಿವೆ. ತೆಲುಗು ಚಿತ್ರರಂಗದಲ್ಲಿ ಯಶಸ್ಸು ಸಿಕ್ಕಂತೆ ಬಾಲಿವುಡ್‌ನಲ್ಲಿಯೂ ರಶ್ಮಿಕಾ ಸಕ್ಸಸ್ ಸಿಗುತ್ತಾ ಅನ್ನುವುದು ಇನ್ನು ಕೆಲವು ದಿನಗಳಲ್ಲಿಯೇ ಗೊತ್ತಾಗಲಿದೆ.

More from Filmibeat

English summary
Rashmika Mandanna was spotted short dress netizens started trolling about her shorts. Soon after the video was shared on Instagram, netizens trolls her dressing sense.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X