ರಶ್ಮಿಕಾ ಮಂದಣ್ಣ ಈಗ ಗೋಲ್ಡನ್ ಗರ್ಲ್!

ನ್ಯಾಷನಲ್ಸ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸಿಕ್ಕಾ ಪಟ್ಟೆ ಬ್ಯುಸಿ ಅನ್ನೋದು ಗೊತ್ತೇ ಇದೆ. ಒಂದರ ಹಿಂದೊಂದು ಸಿನಿಮಾಗಳು ಇವರನ್ನು ಹುಡುಕಿಕೊಂಡು ಬರುತ್ತಲೇ ಇವೆ. ಬಾಲಿವುಡ್‌ನಲ್ಲೇ ರಶ್ಮಿಕಾಗೆ ಬೇಡಿಕೆ ಹೆಚ್ಚಾಗಿದೆ.

ರಶ್ಮಿಕಾ ಮಂದಣ್ಣ ನಟಿಸಿದ ಒಂದೂ ಬಾಲಿವುಡ್ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆಗಲೇ ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ 'ಪುಷ್ಪ' ಸಿನಿಮಾ ಬಳಿಕವಂತೂ ರಶ್ಮಿಕಾ ಡೇಟ್ಸ್‌ಗಾಗಿ ಬಾಲಿವುಡ್ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ರಶ್ಮಿಕಾ ಒಪ್ಪಿಕೊಂಡ ಎರಡನೇ ಸಿನಿಮಾ ಮೊದಲು ಬಿಡುಗಡೆಗೆ ಸಜ್ಜಾಗಿದೆ.

ರಶ್ಮಿಕಾ ಮಂದಣ್ಣ ಸದ್ಯ ತನ್ನ ಬಾಲಿವುಡ್ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿರೋ ರಶ್ಮಿಕಾ ಮಂದಣ್ಣ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೇಳೆ ಅವರು ತೊಟ್ಟು ಡ್ರೆಸ್‌ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಡ್ರೆಸ್‌ನಲ್ಲಿ ರಶ್ಮಿಕಾಳನ್ನು ನೋಡಿ ಗೋಲ್ಡನ್ ಗರ್ಲ್ ಅಂತಿದ್ದಾರೆ.

Rashmika Mandanna Wore Golden Lehenga Photo Goes Viral In Social Media

'ಗುಡ್ ಬೈ' ಪ್ರಮೋಷನ್‌ನಲ್ಲಿ ಭಾಗಿಯಾಗಿರುವ ರಶ್ಮಿಕಾ ಮಂದಣ್ಣ, ಗೋಲ್ಡನ್ ಗರ್ಲ್ ಲೆಹಂಗಾ ತೊಟ್ಟಿದ್ದರು. ಹಾಗೇ ಡೀಪ್ ನೆಕ್ ಸ್ಲೀವ್ ಲೆಸ್ ಬ್ಲೌಸ್ ಮ್ಯಾಚಿಂಗ್ ಆಗಿತ್ತು. ಈ ಕಣ್ಣು ಕುಕ್ಕುವ ಕಾಸ್ಟ್ಯೂಮ್‌ನಲ್ಲಿರೋ ಫೋಟೊವನ್ನು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆ ಫೋಟೊಗಳೇ ಈಗ ವೈರಲ್ ಆಗುತ್ತಿವೆ. " ಇಂದು ನಾನು ಗೋಲ್ಡನ್ ಗರ್ಲ್. ಎಷ್ಟು ಕೂಲ್ ಆಗಿದೆ. ಈ ಲುಕ್ ನಿಮಗೆ ಒಪ್ಪಿಗೆ ಇದೆಯೇ?" ಎಂದು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿಕೊಂಡು ಬರೆದುಕೊಂಡಿದ್ದಾರೆ.

ಈ ಗೋಲ್ಡನ್ ಫೋಟೊವನ್ನು ಪೋಸ್ಟ್ ಮಾಡುತ್ತಿದ್ದಂತೆ ಫೋಟೊಗೆ 1.6 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ನೆಟ್ಟಿಗರೂ ಕೂಡ ಫೋಟೊಗಳನ್ನು ನೋಡುತ್ತಿದ್ದಂತೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Rashmika Mandanna Wore Golden Lehenga Photo Goes Viral In Social Media

ರಶ್ಮಿಕಾ ಒಪ್ಪಿಕೊಂಡ ಎರಡನೇ ಸಿನಿಮಾ 'ಗುಡ್‌ ಬೈ' ಶೀಘ್ರದಲ್ಲಿಯೇ ರಿಲೀಸ್ ಆಗುತ್ತಿದೆ. ಆ ಬಳಿಕ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಳ್ಳುತ್ತಿರೋ ಮೊದಲನೇ ಸಿನಿಮಾ ಬಿಡುಗಡೆಯಾಗಲಿದೆ. ಇದಲ್ಲದೆ ರಶ್ಮಿಕಾ ಮಂದಣ್ಣ ವಿಜಯ್ ಜೊತೆ 'ವಾರಿಸು', ರಣ್‌ಬೀರ್ ಕಪೂರ್ ಜೊತೆ 'ಎನಿಮಲ್' ಹಾಗೂ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Rashmika Mandanna Wore Golden Lehenga Photo Goes Viral In Social Media, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X