ಅಕ್ಷಯ್ ಜೊತೆ ಬ್ರೇಕಪ್.. ಸಾಯುವುದಕ್ಕೆ ನಿರ್ಧರಿಸಿದ್ರಾ ರವೀನಾ: 'ಕೆಜಿಎಫ್ 2' ರಮಿಕಾ ಸೇನ್ ಕೊಟ್ಟ ಕಾರಣವೇನು?
ಬಾಲಿವುಡ್ ನಟಿ ರವೀನಾ ಟಂಡನ್ ಒಂದು ಕಾಲದಲ್ಲಿ ಬ್ಯುಸಿ ನಟಿ. ಮದುವೆಗೂ ಮುನ್ನ ರವೀನಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಹಿಂದಿ ಚಿತ್ರರಂಗದ ಸ್ಟಾರ್ ನಟರೊಂದಿಗೆ ನಟಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಮತ್ತೆ ನಟನೆಯಲ್ಲಿ ಆಕ್ಟಿವ್ ಆಗಿರುವ ನಟಿ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ.
ಅದರಲ್ಲೂ 'ಕೆಜೆಎಫ್ 2' ಸಿನಿಮಾದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ ಬಳಿಕವಂತೂ ರವೀನಾ ಟಂಡನ್ ಹೆಚ್ಚಾಗಿ ಓಟಿಟಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅರ್ಬಾಸ್ ಖಾನ್ ನಿರ್ಮಾಣ ಮಾಡಿರುವ 'ಪಾಟ್ನಾ ಶುಕ್ಲಾ' ಸಿನಿಮಾದಲ್ಲಿ ನಟಿಸಿದ್ದು, ಇದು ಮಾರ್ಚ್ 29ರಂದು ಓಟಿಟಿಯಲ್ಲಿ ತೆರೆಕಂಡಿದೆ.

ಮಹಿಳೆಯ ಸಮಸ್ಯೆಯ ಪರವಾಗಿ ಫೈಟ್ ಮಾಡುವ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಂಡಿದ್ದಾರೆ. ಕೇವಲ ರೀಲ್ ಲೈಫ್‌ನಲ್ಲಷ್ಟೇ ಅಲ್ಲ. ರಿಯಲ್ ಲೈಫ್‌ನಲ್ಲೂ ಕೂಡ ರವೀನಾ ಟಂಡನ್ ಒಬ್ಬ ಫೈಟರ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಇಬ್ಬರು ಮಕ್ಕಳನ್ನು ತನ್ನ 21ನೇ ವಯಸ್ಸಿನಲ್ಲಿ ದತ್ತು ಪಡೆದಿದ್ದು ಯಾಕೆ? ಆಕ್ಷಯ್ ಕುಮಾರ್ ಜೊತೆ ಬ್ರೇಕಪ್ ಆದಾಗ ರವೀನಾ ಟಂಡನ್ ಆತ್ಮಹತ್ಯೆ ಯತ್ನಿಸಿದ್ದರೇ? ಈ ವಿಷಯದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಪತ್ರಕರ್ತೆ ಬರ್ಕಾ ದತ್ ಜೊತೆಗಿನ ಸಂದರ್ಶನದಲ್ಲಿ ರವೀನಾ ತನ್ನ ಬಗೆಗಿನ ಕೆಲವು ಗಾಳಿ ಸುದ್ದಿಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಬ್ರೇಕಪ್ ಆದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈಗ ಆ ಸುದ್ದಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ರವೀನಾ ಟಂಡನ್ ಅಂದಿನ ಆಕೆಯ ಮನಸ್ಥಿತಿ ಹೇಗಿತ್ತು? ಅನ್ನುವುದನ್ನು ಪ್ರತಿಕ್ರಿಯಿಸಿದ್ದಾರೆ.
" ಹೌದು, ಬಹಳಷ್ಟು ಸಂಬಂಧಗಳು ಮುರಿದು ಹೋಗುತ್ತವೆ. ಅದನ್ನು ಮರೆತು ಜನರು ಮುಂದಕ್ಕೆ ಹೋಗುತ್ತಾರೆ. ಸ್ನೇಹಿತರಾಗಿ ಉಳಿದು ಕೊಳ್ಳುತ್ತಾರೆ. ನಮಗೆ ಪಾರ್ಟ್ನರ್‌ಗಳಾಗಿ ಇರುವುದಕ್ಕಿಂತ ಹೆಚ್ಚಾಗಿ ಸ್ನೇಹಿತರಾಗಿ ಇರುವುದೇ ಉತ್ತಮ ಎಂದು ಎನಿಸುತ್ತೆ. ಅದರಲ್ಲಿ ತಪ್ಪೇನಿದೆ? ನಾನು ಆರಾಮಾಗಿಯೇ ಇದ್ದೆ. ಮೀಡಿಯಾ ದೊಡ್ಡ ಸೀನ್ ಕ್ರಿಯೇಟ್ ಮಾಡಿತ್ತು. ಯಾಕಂದ್ರೆ, ಅವರಿಗೆ ಅವರ ಮ್ಯಾಗಜೀನ್ ಸೇಲ್ ಆಗಬೇಕಿತ್ತು. ನನಗೆ ವೈಯಕ್ತಿಕವಾಗಿ ನಮ್ಮ ಕುಟುಂಬ ಹಾಗೂ ಸ್ನೇಹಿತರು ಅಷ್ಟೇ ಮುಖ್ಯ ಆಗಿತ್ತು. ಜನರ ಅಭಿಪ್ರಾಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ." ಎಂದು ರವೀನಾ ಟಂಡನ್ ಹೇಳಿದ್ದರು.

ಅಕ್ಷಯ್ ಕುಮಾರ್ ಜೊತೆಸ ಬ್ರೇಕಪ್ ಮಾಡಿಕೊಂಡಾಗ ರವೀನಾ ಟಂಡನ್ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸುದ್ದಿಯಾಗಿತ್ತು. ಅದಕ್ಕೂ ರವೀನಾ ಪ್ರತಿಕ್ರಿಯಿಸಿದ್ದು, ಆ ವೇಳೆ ತಾನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ರವೀನಾ ಟಂಡನ್ ಆತ್ಮಹತ್ಯೆ ಅನ್ನುವ ಸುದ್ದಿಯನ್ನು ನೋಡಿ ವೈದ್ಯರೇ ಗಾಬರಿಗೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ರವೀನಾ ಟಂಡನ್ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸಾಬೀತು ಮಾಡುವುದಕ್ಕೆ ಆಸ್ಪತ್ರೆಯ ವರದಿಗಳನ್ನೆಲ್ಲ ಇಟ್ಟುಕೊಂಡಿದ್ದಾರಂತೆ. ಹಾಗೇ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ? ಮಾಧ್ಯಮಗಳಿಂದ ಅವರನ್ನು ದೂರವೇ ಉಳಿಯುವಂತೆ ಮಾಡಿದ್ದೇಕೆ? ಅನ್ನೋದನ್ನೂ ರಿವೀಲ್ ಮಾಡಿದ್ದಾರೆ.
"ನಾನು ಇಬ್ಬರು ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಾಗ ಅವರಿಗೆ ಸಿಗಬೇಕಿದ್ದ ಬದುಕು ಸಿಗುತ್ತಿಲ್ಲ ಅಂತ ಅನಿಸಿತ್ತು. ಅದಕ್ಕೆ ನನಗೆ 21 ವರ್ಷ ವಿದ್ದಾಗ ಅವರನ್ನು ಕರೆದುಕೊಂಡು ಬಂದೆ. ಅವರನ್ನು ಮಾಧ್ಯಮಗಳಿಂದ ದೂರವೇ ಇರಿಸಿದ್ದೆ. ಯಾಕಂದ್ರೆ ಅವರು ತುಂಬಾನೇ ಚಿಕ್ಕವರಿದ್ದರು. ನನಗೆ ಅವರು ಕಟು ಟೀಕೆಗಳಿಗೆ ಒಳಗಾಗುವುದು ಇಷ್ಟವಿರಲಿಲ್ಲ." ಎಂದು ರವೀನಾ ಟಂಡನ್ ಹೇಳಿಕೊಂಡಿದ್ದರು.


Click it and Unblock the Notifications











