'ಕೆಜಿಎಫ್ 2' ತಾರೆ ರವೀನಾ ತಂದೆ ರವಿ ಟಂಡನ್ ನಿಧನ
ಜನಪ್ರಿಯ ನಟಿ ರವೀನಾ ಟಂಡನ್ ಅವರ ತಂದೆ, ಜನಪ್ರಿಯ ಸಿನಿಮಾ ನಿರ್ದೇಶಕ ರವಿ ಟಂಡನ್ ಇಂದು ನಿಧನರಾಗಿದ್ದಾರೆ.
ರವೀನಾ ಟಂಡನ್‌ರ ತಂದೆ ರವಿ ಟಂಡನ್ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ. 'ಖೇಲ್ ಖೇಲ್ ಮೆ', 'ನಜರಾನಾ', 'ಅನ್ಹೋನೆ', 'ಜಿಂದಗಿ', 'ಮಜ್ಬೂರ್', 'ಖುದ್ದಾರ್' ಸೇರಿದಂತೆ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ 'ಏಕ್ ಮೇ ಔರ್ ಏಕ್ ತು', 'ಅಪ್ನೆ ರಂಗ್ ಹಜಾರ್', 'ಅನ್ಹೋನೆ' ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. 'ಲವ್ ಇನ್ ಶಿಮ್ಲಾ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ ರವಿ ಟಂಡನ್.
ತಂದೆ ನಿಧನರಾದ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ರವೀನಾ ಟಂಡನ್ ಖಚಿತ ಪಡಿಸಿದ್ದು, ತಂದೆಯ ಜೊತೆಗೆ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಳ್ಳುವ ಜೊತೆಗೆ ತಂದೆಯ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ರವೀನಾರ ಪೋಸ್ಟ್‌ಗೆ ನಟಿಯರಾದ ನಮ್ರತಾ ಶಿರೋಡ್ಕರ್, ನೀಲಂ ಕೊಠಾರಿ, ಜೂಹಿ ಚಾವ್ಲಾ ಸೇರಿದಂತೆ ಹಲವು ನಟಿಯರು ಪ್ರತಿಕ್ರಿಯಿಸಿದ್ದು, ರವೀನಾಗೆ ಸಂತಾಪ ಹೇಳಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರವೀನಾ ಟಂಡನ್: ಪಕ್ಷ ಯಾವುದು?
ಈ ಹಿಂದಿನ ಹಲವು ಸಂದರ್ಶನಗಳಲ್ಲಿ ರವೀನಾ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದರು. ತಂದೆ ಸಿನಿಮಾ ಉದ್ಯಮದ ವ್ಯಕ್ತಿಯಾಗಿದ್ದರೂ ಸಹ ನಮ್ಮನ್ನು ಸಿನಿಮಾ ಸೆಟ್‌ಗಳಿಂದ ದೂರವೇ ಇಟ್ಟಿದ್ದರು. ಬಹಳ ಅಪರೂಪಕ್ಕೆ ನಮ್ಮನ್ನು ಸಿನಿಮಾ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ನಟಿಯಾಗುವ ಸಮಯದಲ್ಲಿಯೂ ಸಹ ನಾನು ಅಪ್ಪನೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದ ಮೇಲಷ್ಟೆ ಸಿನಿಮಾ ರಂಗಕ್ಕೆ ಬಂದೆ. ಆಗ ಪ್ರತಿ ಅವಕಾಶ ಬಂದಾಗಲೂ ಅಪ್ಪನೊಂದಿಗೆ ಚರ್ಚಿಸುತ್ತಿದ್ದೆ ಎಂದಿದ್ದರು.
ಭರದಿಂದ ಸಾಗಿದೆ KGF 2 ಕೆಲಸಗಳು: ಇಲ್ಲಿದೆ ಹೊಸ ಅಪ್ಡೇಟ್!
ನಟಿ ರವೀನಾ ಟಂಡನ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸಿದ್ದು, ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ ಆಗಲಿದೆ. ಕೆಲವು ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರವೀನಾ ತಾವು ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿಯೂ ಹೇಳಿದ್ದರು.


Click it and Unblock the Notifications










