"ನನ್ನ ತಾಯಿ ಲೆಗಸಿಯನ್ನು ಮರುಸೃಷ್ಟಿಸುವುದು ಯಾರಿಂದಲೂ ಸಾಧ್ಯವಿಲ್ಲ"-ನಟಿ ಜಾನ್ವಿ ಕಪೂರ್

ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸದ್ಯಕ್ಕೀಗ 'ಪೆದ್ದಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸಿರುವ 'ಪೆದ್ದಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಜೂನ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಜಾಹ್ನವಿ ಕಪೂರ್ ಹಾಗೂ ರಾಮ್ ಚರಣ್ ಇಬ್ಬರೂ ಬ್ಯಾಕ್ ಟು ಬ್ಯಾಕ್ ಪ್ರಚಾರದಲ್ಲಿ ಬ್ಯುಸಿಯಾಗಿ ಇದ್ದಾರೆ.

ಜಾಹ್ನವಿ ಕಪೂರ್ ಹಾಗೂ ರಾಮ್ ಚರಣ್ ಇಬ್ಬರೂ ಸಂದರ್ಶನವೊಂದರಲ್ಲಿ ತನ್ನ ಬದುಕಿನ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲೂ ಜಾಹ್ನವಿ ಕಪೂರ್ ತಮ್ಮ ತಾಯಿ ಶ್ರೀದೇವಿ ಬಗ್ಗೆ, ರಾಮ್ ಚರಣ್ ತಂದೆ ಚಿರಂಜೀವಿ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ತಮ್ಮ ತಮ್ಮ ಪೋಷಕರು ಇಷ್ಟು ದೊಡ್ಡ ಸೂಪರ್‌ಸ್ಟಾರ್‌ಗಳು ಅನ್ನೋದು ಅವರಿಗೆ ತಿಳಿದೇ ಇರಲಿಲ್ಲ ಅಂತ ಎಂದು ಹೇಳಿಕೊಂಡಿದ್ದಾರೆ.

Re-creating Sridevi legacy is not imppossible for me and others said Janhvi Kapoor

ಅದರಲ್ಲೂ ಜಾಹ್ನವಿ ಕಪೂರ್ ಈ ಸಂದರ್ಶನದಲ್ಲಿ ತಮ್ಮ ತಾಯಿ ಅತಿಲೋಕ ಸುಂದರಿ ಶ್ರೀದೇವಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ಅವರೊಂದಿಗೆ ಕಳೆದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೇ ತಾಯಿ ಶ್ರೀದೇವಿ ಪರಂಪರೆಯನ್ನು ತನಗಷ್ಟೇ ಅಲ್ಲ, ಬೇರೆ ಯಾರಿಗೂ ಮರು ಸೃಷ್ಟಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ತಾಯಿ ಬಗ್ಗೆ ಜಾಹ್ನವಿ ಹೇಳಿದ್ದೇನು?

ಶ್ರೀದೇವಿ ಜನಪ್ರಿಯತೆ ಬಗ್ಗೆ ಜಾಹ್ನವಿ ಕಪೂರ್‌ಗೆ ಕಿಂಚಿತ್ತೂ ಗೊತ್ತಿರಲಿಲ್ವಂತೆ. ಚಿತ್ರರಂಗಕ್ಕೆ ಕಾಲಿಡೋವರೆಗೂ ಅದರ ಅನುಭವ ಆಗುವುದಕ್ಕೂ ಬಿಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. "ನಾನು ಈ ಸಿನಿಮಾ ರಂಗದಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದ ಮೇಲೆ ನನಗೆ ಅಮ್ಮನ ಜನಪ್ರಿಯತೆ ಎಷ್ಟಿದೆ? ಅವರ ಮೇಲೆ ಜನರು ಇಟ್ಟಿರುವ ಪ್ರೀತಿ ಎಂತಹದ್ದು ಅನ್ನೋದು ಅರ್ಥ ಆಗುವುದಕ್ಕೆ ಶುರುವಾಗಿತ್ತು. ಅಮ್ಮ ನಮ್ಮನ್ನು ಈ ಸಿನಿಮಾ ಪ್ರಪಂಚದಿಂದ ತುಂಬಾ ದೂರವೇ ಇಟ್ಟಿದ್ದರು" ಎಂದು ಹೇಳಿಕೊಂಡಿದ್ದಾರೆ.

ಒಂದೇ ಫ್ರೇಮ್‌ನಲ್ಲಿ ಚಿರು ಪುತ್ರ, ಕಮಲ್ ಪುತ್ರಿ ಹಾಗೂ ಶ್ರೀದೇವಿ ಪುತ್ರಿ; ಗೆದ್ದವರು ಯಾರು?

ಮಾರ್ಕೆಟ್‌ಗೆ ಹೋಗಿ ಮೀನು ತರ್ತಿದ್ರು

ಶ್ರೀದೇವಿ ಲೇಡಿ ಸೂಪರ್‌ಸ್ಟಾರ್ ಆಗಿದ್ದರೂ ಮೀನು ಮಾರ್ಕೆಟ್‌ಗೆ ಹೋಗುತ್ತಿದ್ದರು ಅನ್ನೋ ಸಂಗತಿಯನ್ನು ಹಂಚಿಕೊಂಡಿದ್ದಾರೆ. " ಪ್ರತಿ ಶುಕ್ರವಾರ ಮೀನಿನ ಮಾರ್ಕೆಟ್‌ಗೆ ಹೋಗಿ ಒಳ್ಳೆಯ ಮೀನನ್ನು ಆರಿಸಿಕೊಂಡು ಬರೋರು. ಅದನ್ನು ಅವರು ತುಂಬಾನೇ ಖುಷಿಯಿಂದ ಮಾಡೋರು. ಆ ವೇಳೆ ನಮಗೆ ಅವರ ಗ್ಲಾಮರಸ್ ಮುಖ ಕಾಣಿಸುತ್ತಿರಲಿಲ್ಲ. ನಮ್ಮ ಪಾಲಿಗೆ ಅವರು ಸೂಪರ್‌ವುಮನ್‌ ನಂತೆ ಕಾಣಿಸುತ್ತಿದ್ದರು" ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

Re-creating Sridevi legacy is not imppossible for me and others said Janhvi Kapoor

ಅಮ್ಮ ಲೆಗಸಿ ಮರು ಸೃಷ್ಟಿಸಲು ಸಾಧ್ಯವಿಲ್ಲ

ಇದೇ ಸಂದರ್ಶನದಲ್ಲಿ ತಾಯಿ ಸಾಧನೆಯ ಮರು ಸೃಷ್ಟು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. "ನನ್ನ ಅಮ್ಮ ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಜನರಿಂದ ಪ್ರೀತಿ ಸಂಪಾದನೆ ಮಾಡಿದ್ದಾರೆ ಅನ್ನೋದೇ ನಮಗೆ ಆಶೀರ್ವಾದ. ಆದರೆ, ಅವರು ಸೃಷ್ಟಿಸಿದ ಲೆಗಸಿಯನ್ನು ಮರು ಸೃಷ್ಟಿ ಮಾಡುವುದು ನನಗೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಬೇರೆ ಯಾರಿಂದಲೂ ಸಾಧ್ಯವಿಲ್ಲ" ಎಂದು ಜಾಹ್ನವಿ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.

ರಾಮ್ ಚರಣ್ ಹೇಳಿದ್ದೇನು?

ಇದೇ ಸಂದರ್ಶನದಲ್ಲಿ ತಂದೆ ಚಿರಂಜೀವಿ ಬಗ್ಗೆ ರಾಮ್‌ ಚರಣ್ ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. "ಶ್ರೀದೇವಿ ಮೇಡಂ ಅವರಂತೆ ನನ್ನ ತಂದೆ ಕೂಡ ಹಾಗೆನೇ. ಅವರಿಗೆ ಬಂದ ಎಲ್ಲಾ ಅವಾರ್ಡ್‌ ಹಾಗೂ ಸಿನಿಮಾ ಮ್ಯಾಗಜೀನ್‌ಗಳು ಅವರ ಆಫೀಸ್‌ನಲ್ಲೇ ಇರುತ್ತಿತ್ತು. ನಮಗೆ ಆ ಮ್ಯಾಗಜೀನ್‌ಗಳನ್ನು ಮುಟ್ಟುವುದಕ್ಕೂ ಭಯ ಆಗುತ್ತಿತ್ತು. ಹೀಗಾಗಿ ನಮಗೆ ಬಾಲ್ಯದಲ್ಲಿ ನಮ್ಮ ತಂದೆ, ಜಾನ್ವಿಯವರ ತಾಯಿ ಎಷ್ಟು ದೊಡ್ಡ ಸ್ಟಾರ್‌ಗಳು ಅನ್ನೋದು ಗೊತ್ತಿರಲಿಲ್ಲ" ಎಂದು ರಾಮ್ ಚರಣ್ ಹೇಳಿದ್ದಾರೆ.

English summary
Re-creating Sridevi legacy is not imppossible for me and others said Janhvi Kapoor.
Read more about: janhvi kapoor sridevi ram charan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X