ರವೀನಾ, ಉರ್ಮಿಳಾ, ಮಾಧುರಿಯನ್ನು ಟಾರ್ಗೆಟ್ ಮಾಡ್ತಿದ್ದಾರಾ?; 'ಕೆಜಿಎಫ್ 2' ನಟಿ ಹೇಳಿದ್ದೇನು?

ಬಾಲಿವುಡ್ ನಟಿ ರವೀನಾ ಟಂಡನ್ ಈಗ ಮತ್ತೆ ಬ್ಯುಸಿಯಾಗಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಬಳಿಕ ಮತ್ತೆ ಸ್ಕ್ರೀನ್ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, 90ರ ದಶಕದಲ್ಲಿ ಈ ಬಾಲಿವುಡ್‌ ನಟಿಯನ್ನು ಡೇಟ್ಸ್ ತೆಗೆದುಕೊಳ್ಳುವುದಕ್ಕೆ ಸೂಪರ್‌ಸ್ಟಾರ್‌ಗಳು ತುದಿಗಾಲಲ್ಲಿ ನಿಲ್ಲುತ್ತಿದ್ದರು.

1991ರಲ್ಲಿ ರವೀನಾ ಟಂಡನ್ 'ಪತ್ತರ್ ಕೆ ಪೂಲ್' ಅನ್ನೋ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಹಲವು ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ರವೀನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲಿ ಹಲವು ನಾಯಕಿಯರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರು. ಇವರ ನಡುವೆ ಕಾಂಪಿಟೇಷನ್ ಹೊರತಾಗಿಯೂ ಒಂದು ಅದ್ಭುತ ಬಾಂಡಿಂಗ್ ಇತ್ತು.

Really Urmila, Madhuri Dixit, Raveena Tandon targeted in Bollywood what is the reason

ಸದ್ಯ 'ಕರ್ಮ ಕಾಲಿಂಗ್' ಅನ್ನೂ ಸೀರಿಸ್‌ನಲ್ಲಿ ರವೀನಾ ನಟಿಸಿದ್ದಾರೆ. ಈ ಸೀರಿಸ್‌ನ ಪ್ರಚಾರದಲ್ಲಿ ರವೀನಾ ಟಂಡನ್ ಬ್ಯುಸಿಯಾಗಿದ್ದಾರೆ. ಈ ವೇಳೆ ಇಂಡಿಯಾ ಟುಗೆ ಸಂದರ್ಶನ ನೀಡಿದ್ದು, ಈ ವೇಳೆ ಬಾಲಿವುಡ್‌ನಲ್ಲಿ ಮಾಧುರಿ ದೀಕ್ಷಿತ್, ಉರ್ಮಿಳಾ ಮತೊಂಡ್ಕರ್ ಹಾಗೂ ತನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ಹೇಳಿಕೆ ಕೊಟ್ಟಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

90ರ ದಶಕದ ನಾಯಕಿಯರಿಗೂ ಇಂದಿನ ಹೀರೊಯಿನ್‌ಗಳಿಗೂ ಏನು ವ್ಯತ್ಯಾಸ ಅನ್ನೋದನ್ನು ರವೀನಾ ಟಂಡನ್ ಹೇಳಿದ್ದಾರೆ. "ನಮ್ಮ ಅಭಿಪ್ರಾಯಗಳು ಬೇರೆಯಾಗಿದ್ದಿರಬಹುದು. ಆದರೆ, ನನಗೆ ತುಂಬಾ ದೀರ್ಘಾವಧಿಯ ಕರಿಯರ್ ಸಿಕ್ಕಿದೆ" ಎಂದು ಹೇಳಿದ್ದಾರೆ. ಹಾಗೇ "ನನ್ನ ಕಾಲದ ಕಲಾವಿದರೊಂದಿಗೆ ಸ್ನೇಹಿತರಾಗಿರುವುದಕ್ಕೆ ಸಾಧ್ಯವೇ ಇಲ್ಲ ಅನ್ನೋದೆಲ್ಲ ಸುಳ್ಳು. ನನ್ನ ಎಲ್ಲಾ ಸಹ ನಟರು ಇಂದಿಗೂ ನನ್ನ ಸ್ನೇಹಿತರು" ಎಂದು ರವೀನಾ ಸಂದರ್ಶನದಲ್ಲಿ ಹೇಳಿದ್ದಾರೆ.

Really Urmila, Madhuri Dixit, Raveena Tandon targeted in Bollywood what is the reason

ಇದೇ ಸಂದರ್ಶನದಲ್ಲಿ ಮತ್ತೊಂದು ಗಂಭೀರ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಸಂಭಾವನೆ ವಿಷಯದಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ವಯಸ್ಸಿನ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಹೀರೊಗಳಿಗೆ ಎಷ್ಟೇ ವಯಸ್ಸಾದರೂ ಯಾರೂ ಹೇಳುವುದಿಲ್ಲ. ಅದೇ ನಾಯಕಿಯರಿಗೆ ವಯಸ್ಸಾದರೆ ತೆರೆಯ ಹಿಂದೆ ಚರ್ಚೆ ಮಾಡುತ್ತಾರೆ. ಅಲ್ಲದೆ ಮಾಧ್ಯಮಗಳಲ್ಲಿ ಹೋಲಿಕೆ ಮಾಡಲಾಗುತ್ತೆ ಎಂದು ಅಸಮಧಾನ ಹೊರಹಾಕಿದ್ದಾರೆ.

"ವಯಸ್ಸಿನ ಬಗ್ಗೆ ಚರ್ಚೆ ಮಾಡುವಾಗಲೆಲ್ಲಾ ಉರ್ಮಿಳಾ, ಮಾಧುರಿ ಹಾಗೂ ನನ್ನ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ನಮ್ಮ ವಯಸ್ಸನ್ನು ಬಚ್ಚಿಟ್ಟುಕೊಂಡಿಲ್ಲ. ಹಾಗಾಗಿ ಈ ಬಗ್ಗೆ ನಾವೇನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಈ ಮೂಲಕ ನೀನು ನನ್ನ ಪ್ರತಿಭೆಯನ್ನು ಕಸಿದುಕೊಳ್ಳವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತೇನೆ" ಎಂದು ರವೀನಾ ಟಂಡನ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ರವೀನಾ ಟಂಡನ್ ಇಂದಿಗೂ ಬಾಲಿವುಡ್‌ನಲ್ಲಿ ಸುಂದರ ನಟಿಯರಲ್ಲಿ ಒಬ್ಬರು. ಕನ್ನಡ ಸಿನಿಮಾ 'ಉಪೇಂದ್ರ'ದಲ್ಲೂ ನಟಿಸಿದ್ದರು. ಇತ್ತೀಚೆಗೆ 'ಕೆಜಿಎಫ್ 2' ಸಿನಿಮಾದಲ್ಲಿ ರಿಮಿಕಾ ಸೇನ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದನೇ ಕೆಲವು ವೆಬ್‌ ಸೀರಿಸ್‌ಗೂ ಬಣ್ಣ ಹಚ್ಚಿದ್ದಾರೆ. ಸದ್ಯ 'ಕರ್ಮ ಕಾಲಿಂಗ್' ಸೀರಿಸ್‌ನಲ್ಲಿ ನಟಿಸಿದ್ದು, ಇದು ಇದೇ ಜನವರಿ 26 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Raveena Tandon reacting on Ageism in Bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X