Dhurandhar-Japan: ಭಾರತದಲ್ಲಿ ದಾಖಲೆ ಬರೆದ 'ಧುರಂಧರ್' ಜಪಾನ್‌ನಲ್ಲಿ ಮಕಾಡೆ ಮಲಗಲು ಇವೇ ಕಾರಣ?

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದಿರೋ 'ಧುರಂಧರ್' ವಿದೇಶಗಳಲ್ಲಿ ಲಗ್ಗೆ ಇಟ್ಟಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಜಪಾನ್‌ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಆದರೆ, ಜಪಾನ್‌ನಲ್ಲಿ ಈ ಸಿನಿಮಾಗೆ ಟೀಮ್ ನಿರೀಕ್ಷೆ ಮಾಡಿದ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಬಗ್ಗೆನೇ ಈಗ ಎಲ್ಲಾ ಕಡೆಗೆ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದೆ. ಭಾರತ ಸೇರಿದಂತೆ ವಿದೇಶದ ಬೇರೆ ಭಾಗಗಳಲ್ಲಿ ಸದ್ದು ಮಾಡಿರೋ ಸಿನಿಮಾ ಜಪಾನ್‌ನಲ್ಲಿ ಸೋತಿದ್ದು ಏಕೆ?

ಇತ್ತೀಚೆಗೆ ಜಪಾನ್‌ನಲ್ಲಿ ಭಾರತದ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಜಪಾನ್ ದೇಶದ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಿದೆ. ಹೀಗಾಗಿ 'ಧುರಂಧರ್' ಟೀಮ್ ಇಲ್ಲಿ ಅದ್ದೂರಿಯಾಗಿ ಸುಮಾರು 80ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಿತ್ತು. ಆದರೆ, ಸಿನಿಮಾ ಮೊದಲ ದಿನವೇ ದುರಂತ ಒಪನಿಂಗ್ ಕಂಡಿದೆ.

Reason behind Ranveer Singh record breaking movie Dhurandhar failed in Japan

'ಧುರಂಧರ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳು ಸೇರಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಆಗಿತ್ತು. ಹೆಚ್ಚು ಕಡಿಮೆ ಹಾಲಿವುಡ್‌ ಸಿನಿಮಾಗೆ ಪೈಪೋಟಿ ಕೊಡುವಷ್ಟು ಕಲೆಕ್ಷನ್ ಮಾಡಿತ್ತು. ಈ ಮಟ್ಟಿಗೆ ಕ್ರೇಜ್ ಮಾಡಿದ್ದ ಸಿನಿಮಾ ಜಪಾನ್‌ನಲ್ಲಿ ಮೊದಲ ದಿನ ಸೇಲ್ ಆಗಿದ್ದು ಬರೀ 900 ಟಿಕೆಟ್‌ಗಳು ಮಾತ್ರ. ಹಾಗಿದ್ದರೆ, ಜಪಾನ್‌ನಲ್ಲಿ ಈ ಸಿನಿಮಾ ಸೋಲುವುದಕ್ಕೆ ಕಾರಣಗಳೇನು?

ಟಾಪ್‌ 25ನಲ್ಲೂ ಇಲ್ಲ 'ಧುರಂಧರ್'

'ಧುರಂಧರ್' ಬಿಡುಗಡೆಗೂ ಮುನ್ನ ರಣ್‌ವೀರ್ ಸಿಂಗ್ ಜಪಾನ್ ಪ್ರಜೆಗಳಿಗಾಗಿ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದರು. ಆದರೆ, ಸಿನಿಮಾ ನೋಡುವಂತೆ ಅವರಿಗೆ ಮಾನವಿ ಮಾಡಿಕೊಂಡಿದ್ದರು. ಆದರೂ ಆ ವಿಡಿಯೋ ಮೋಡಿ ಮಾಡಿಲ್ಲ. 80 ಸೆಂಟರ್‌ಗಳಿಂದ ಬರೀ 900 ಟಿಕೆಟ್‌ಗಳು ಖರೀದಿಯಾಗಿದ್ದು ಚಿತ್ರರಂಗಕ್ಕೆ ದೊಡ್ಡ ಮಟ್ಟಿಗೆ ನಿರಾಸೆ ಆಗಿದೆ. ಸೋಲೇ ಕಂಡಿರದ 'ಧುರಂಧರ್‌'ಗೆ ಜಪಾನ್‌ನಲ್ಲಿ ಸೋಲಾಗಿದೆ. ಇದಕ್ಕೆ ಕಾರಣಗಳೇನು ಅಂತ ನೋಡುವುದಾರೇ,

Also Read
ಜಪಾನ್‌ನಲ್ಲಿ 'ಧುರಂಧರ್'ಗೆ ಭಾರಿ ಮುಖಭಂಗ , 3100 ಕೋಟಿ ಗಳಿಸಿದ್ದ ಚಿತ್ರಕ್ಕೆ ಕೇಳೋರೇ ದಿಕ್ಕಿಲ್ಲ
ಜಪಾನ್‌ನಲ್ಲಿ 'ಧುರಂಧರ್'ಗೆ ಭಾರಿ ಮುಖಭಂಗ , 3100 ಕೋಟಿ ಗಳಿಸಿದ್ದ ಚಿತ್ರಕ್ಕೆ ಕೇಳೋರೇ ದಿಕ್ಕಿಲ್ಲ

'ಧುರಂಧರ್' ಸೋಲಿಗೇನು ಕಾರಣ?

ಭಾರತದಲ್ಲಿ ಇರೋ ಬರೋ ದಾಖಲೆಗಳನ್ನು ಉಡೀಸ್ ಮಾಡಿದ 'ಧುರಂಧರ್' ಜಪಾನ್‌ನಲ್ಲಿ ಮಕಾಡೆ ಮಲಗಿದ್ದು ಏಕೆ? ಈ ಸಿನಿಮಾ ಸೋಲಿಗೆ ಅಸಲಿ ಕಾರಣಗಳು ಏನು? ಒಂದಿಷ್ಟು ಕಾರಣಗಳು ಇಲ್ಲಿವೆ.

ಜಪಾನ್‌ ಸಬ್‌ಟೈಟಲ್‌ನಲ್ಲಿ ರಿಲೀಸ್: ಜಪಾನೀಯರು ಅವರ ಭಾಷೆಯಲ್ಲಿ ಸಿನಿಮಾ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಆದರೆ, 'ಧುರಂಧರ್' ಸಿನಿಮಾವನ್ನು ಕೇವಲ ಸಬ್‌ಟೈಟಲ್ಸ್ ಹಾಕಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಕಂಟೆಂಟ್‌ಗಳು ಟ್ರೆಂಡ್ ಆಗಲಿಲ್ಲ. ಇಂತಹದ್ದೊಂದು ಅಭಿಪ್ರಾಯ ಕೇಳಿಬರುತ್ತದೆ.

Recommended For You
Dhurandhar The Revenge:ಓಟಿಟಿಯಲ್ಲಿ ಧೂಳೆಬ್ಬಿಸಿದ 'ಧುರಂಧರ್ ದಿ ರಿವೇಂಜ್': 5 ದಿನಗಳಲ್ಲಿ 5 ಕೋಟಿ ವೀಕ್ಷಣೆ
Dhurandhar The Revenge:ಓಟಿಟಿಯಲ್ಲಿ ಧೂಳೆಬ್ಬಿಸಿದ 'ಧುರಂಧರ್ ದಿ ರಿವೇಂಜ್': 5 ದಿನಗಳಲ್ಲಿ 5 ಕೋಟಿ ವೀಕ್ಷಣೆ

ಕಥೆಯನ್ನಿಟ್ಟುಕೊಂಡು ಪ್ರಚಾರ: ಜಪಾನ್‌ನಲ್ಲಿ 'ಧುರಂಧರ್' ಸಿನಿಮಾವನ್ನು ಪ್ರಚಾರ ಮಾಡಿದ ರೀತಿ ಸರಿಯಿರಲಿಲ್ಲ. ಸಿನಿಮಾದ ಕಥೆಯನ್ನು ಇಟ್ಟುಕೊಂಡು ಜಪಾನಿನ ಉದ್ದಕ್ಕೂ ಪ್ರಚಾರ ಮಾಡಲಾಗಿತ್ತು. ಆದರೆ, ವಿಶ್ವದಾದ್ಯಂತ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎಂದು ಪ್ರಚಾರ ಮಾಡಬೇಕಿತ್ತು ಎಂಬುವುದು ಹಲವರ ಅಭಿಪ್ರಾಯವಾಗಿತ್ತು.

Reason behind Ranveer Singh record breaking movie Dhurandhar failed in Japan

ಸಮಯ ಸರಿಯಿರಲಿಲ್ಲ: 'ಧುರಂಧರ್' ಸಿನಿಮಾದ ರಿಲೀಸ್ ಸರಿಯಾಗಿ ಇರಲಿಲ್ಲ. 'ಧುರಂಧರ್' ರಿಲೀಸ್ ಆದ ಸಮಯದಲ್ಲಿ ಜಪಾನ್‌ನಲ್ಲಿ ಲೋಕಲ್ ಸಿನಿಮಾಗಳು ರಿಲೀಸ್ ಆಗಿದ್ದವು. ಹೀಗಾಗಿ ಅವುಗಳ ಮಧ್ಯೆ ಕಳೆದು ಹೋಯ್ತು. ಅದರ ಬದಲು ಸಿನಿಮಾಗಳು ಹೆಚ್ಚು ರಿಲೀಸ್ ಆಗದೇ ಇರುವ ಟೈಮ್‌ನಲ್ಲಿ ರಿಲೀಸ್ ಮಾಡಬೇಕಿತ್ತು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.

ಜಪಾನ್ ಮಾರ್ಕೆಟ್ ಕರಾಬ್: ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಹಾಕಿರುವಂತೆ ಭಾರತೀಯ ಸಿನಿಮಾಗಳಿಗೆ ಜಪಾನಿನ ಮಾರುಕಟ್ಟೆಯಲ್ಲಿ ಏರಿಳಿತಗಳಿವೆ. ಕೆಲವು ಸಿನಿಮಾಗಳು ಇಲ್ಲಿ ಜನರ ಮನಸ್ಸು ಗೆದ್ದರೆ, ಇನ್ನು ಕೆಲವು ಸಿನಿಮಾಗಳು ಸೋತಿವೆ. ರಾಜಮೌಳಿ ನಿರ್ದೇಶಿಸಿದ 'RRR', 'ಬಾಹುಬಲಿ 2', ಶಾರುಖ್ ಖಾನ್ 'ಜವಾನ್' ಹಾಗೂ ಪ್ರಭಾಸ್ ಸಿನಿಮಾ 'ಕಲ್ಕಿ 2898 ಎಡಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಇನ್ನು ಕೆಲವು ಸಿನಿಮಾಗಳು ಹೀನಾಯವಾಗಿ ಸೋತಿವೆ. ಹೀಗಾಗಿ ಜಪಾನ್ ಬಾಕ್ಸಾಫೀಸ್ ಅಂದಾಜು ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.

English summary
Reason behind Ranveer Singh record breaking movie Dhurandhar failed in Japan. Japanese are not showing interest on Dhurandhar.
Read more about: ranveer singh japan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X