"ರಾಮಾಯಣದಲ್ಲಿ ಯಶ್ ನಟಿಸುತ್ತಿಲ್ಲ ಅನ್ನೋ ಸತ್ಯಕ್ಕೆ ದೂರ": ಶೀಘ್ರದಲ್ಲೇ ಚಿತ್ರತಂಡದಿಂದ ಘೋಷಣೆ?
ಇತ್ತ 'ಆದಿಪುರುಷ್' ಬಿಡುಗಡೆಗೆ ವೇದಿಕೆ ರೆಡಿಯಾಗಿದೆ. ಅತ್ತ ಮತ್ತೊಂದು 'ರಾಮಾಯಣ' ಸೆಟ್ಟೇರಿಸುವುದಕ್ಕೆ ಕಸರತ್ತು ನಡೆಯುತ್ತಿದೆ. ಎರಡು ಪ್ರಮುಖ ಸ್ಟಾರ್ ನಟರ ಹೆಸರುಗಳು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಕಳೆದ ಕೆಲವು ದಿನಗಳಿಂದ 'ರಾಮಾಯಣ' ಸಿನಿಮಾ ಇದೇ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ರಣ್‌ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಯಶ್ ವಿಲನ್ ಆಗಿ ನಟಿಸುತ್ತಿದ್ದಾರೆ ಅಂತ ಇತ್ತೀಚೆಗೆ ಸುದ್ದಿಯಾಗಿತ್ತು.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ. ರಾಕಿ ಭಾಯ್ ಈ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಅನ್ನೋ ಸುದ್ದಿಗಳು ದೊಡ್ಡದಾಗಿಯೇ ಸುದ್ದಿ ಮಾಡಿದ್ದವು. ಆದ್ರೀಗ ಅದೂ ಸುಳ್ಳು ಅಂತ ಕೆಲ ಮಾಧ್ಯಮಗಳಲ್ಲಿ ವರದಿಯಾಗಿವೆ. ಅಸಲಿಗೆ ಇದರಲ್ಲಿ ಏನಿದೆ? ಅಂತ ತಿಳಿಯೋಕೆ ಮುಂದೆ ಓದಿ.
ದಂಗಲ್ ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿಯ ಡ್ರೀಮ್ ಪ್ರಾಜೆಕ್ಟ್ 'ರಾಮಾಯಣ'. ಅಷ್ಟೇ ಅಲ್ಲ ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ ಅಂತಾನೂ ಹೇಳಲಾಗುತ್ತಿದೆ. ಆದರೆ, ಈ ಸಿನಿಮಾದಲ್ಲಿ ಯಾವ್ಯಾವ ಸ್ಟಾರ್ ಕಾಣಿಸಿಕೊಳ್ಳುತ್ತಾರೆ? ಅನ್ನೋದೇ ಗೊಂದಲಮಯವಾಗಿದೆ.

'ರಾಮಾಯಣ' ಸಿನಿಮಾ ನಿರ್ಮಿಸುತ್ತಿರುವ ನಮಿತ್ ಮಲ್ಹೀತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಇಬ್ಬರೂ ಹಗಲು ರಾತ್ರಿ ಇದೇ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಈ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಅಂತ ವರದಿಯಾಗಿದೆ.
" ಯಶ್ ರಾಮಾಯಣದಲ್ಲಿ ನಟಿಸುತ್ತಿಲ್ಲ ಅನ್ನೋ ವರದಿಗಳು ಸತ್ಯಕ್ಕೆ ದೂರವಾಗಿವೆ. ಅತ್ಯಂತ ದೊಡ್ಡ ಸ್ಟಾರ್ ಕಾಸ್ಟ್ ಅನ್ನು ಅನೌನ್ಸ್ ಮಾಡುವವರೆಗೆ ಕಾದು ನೋಡಿ. ರಾಮಾಯಣ ಚಿತ್ರತಂಡವೇ ಈ ಸುದ್ದಿಯನ್ನು ಅನೌನ್ಸ್ ಮಾಡಲಿದೆ" ಎಂದು ಮಾಹಿತಿ ನೀಡಿದ್ದಾಗಿ ಬಾಲಿವುಡ್ ಸಿನಿಮಾ ವೆಬ್‌ಸೈಟ್ ಕೊಯ್‌ಮೋಯ್ ವರದಿ ಮಾಡಿದೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಚಿತ್ರರಂಗದಲ್ಲಿರೋ ಅತ್ಯುತ್ತಮ ತಂತ್ರಜ್ಞರನ್ನು, ಸ್ಟಾರ್ ಕಾಸ್ಟ್ ಅನ್ನು ಹಾಗೂ ವಿಎಫ್‌ಎಕ್ಸ್ ಟೀಮ್ ಅನ್ನು ಕರೆದುಕೊಂಡು ಬರುತ್ತಿದ್ದಾರೆ. ಈ ಮೂಲಕ ಹಿಂದೆಂದೂ ನೋಡಿರದ 'ರಾಮಾಯಣ'ವನ್ನು ತೆರೆಮೇಲೆ ತೋರಿಸಲಾಗುತ್ತಂತೆ. ಈ ಮೂಲಕ ಮತ್ತೆ ಯಶ್ 'ರಾಮಾಯಣ'ದಲ್ಲಿ ನಟಿಸುತ್ತಾರೆ ಅನ್ನೋ ಸುದ್ದಿಗೆ ಜೀವ ಬಂದಂತಾಗಿದೆ.


Click it and Unblock the Notifications











