ಬಿಹಾರದ ರಸ್ತೆಗೆ ಸುಶಾಂತ್ ಸಿಂಗ್ ರಜಪೂತ್ ಹೆಸರು ನಾಮಕರಣ
ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಅವರ ಸಾವಿನ ಆಘಾತದಿಂದ ಇನ್ನೂ ದೇಶ ಹೊರಬಂದಿಲ್ಲ. ಅಭಿಮಾನಿಗಳು, ಕುಟುಂಬದವರು ಅವರ ಸಾವಿನ ಸಿಬಿಐ ತನಿಖೆಗೆ ಆಗ್ರಹಿಸುತ್ತಲೇ ಇದ್ದಾರೆ.
Recommended Video
ಸುಶಾಂತ್ ಅವರ ಮೂಲ ಊರು ಬಿಹಾರದ ಪೂರ್ನಿಯಾ. ಅವರ ಹುಟ್ಟೂರಿನಲ್ಲಿ ಶೋಕ ಮಡುಗಟ್ಟಿದೆ. ಸುಶಾಂತ್‌ಗೆ ಗೌರವ ಸಲ್ಲಿಸಲು ರಸ್ತೆಯೊಂದಕ್ಕೆ ಅವರ ಹೆಸರು ಇರಿಸಿದ್ದಾರೆ. ಫೋರ್ಡ್ ಕಂಪೆನಿ ಚೌಕ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗೆ ಸುಶಾಂತ್ ಸಿಂಗ್ ರಜಪೂತ್ ಚೌಕ ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ಮುಂದೆ ಈ ರಸ್ತೆಯನ್ನು ಸುಶಾಂತ್ ಸಿಂಗ್ ರಜಪೂತ್ ಮಾರ್ಗ ಎಂದು ಕರೆಯಲಾಗುತ್ತದೆ.
ಫೋರ್ಡ್ ಕಂಪೆನಿ ಚೌಕಕ್ಕೆ ಸುಶಾಂತ್ ಸಿಂಗ್ ರಜಪೂತ್ ಚೌಕ ಎಂದು ಹೆಸರು ಬದಲಿಸಿರುವ ಫೋಟೊಗಳನ್ನು ಅಭಿಮಾನಿಗಳು ಕ್ಲಿಕ್ಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಸುಶಾಂತ್ ಒಬ್ಬ ಮಹಾನ್ ಕಲಾವಿದ. ರಸ್ತೆ ಮತ್ತು ವೃತ್ತಕ್ಕೆ ಅವರ ಹೆಸರು ಇರಿಸುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ. ಮಧುಬನಿಯಿಂದ ಮಠ ಚೌಕಕ್ಕೆ ತೆರಳುವ ಮಾರ್ಗವಿನ್ನು ಸುಶಾಂತ್ ಸಿಂಗ್ ರಜಪೂತ್ ರಸ್ತೆ ಎಂದು ಕರೆಯಲಾಗುತ್ತದೆ ಎಂದು ಅಲ್ಲಿನ ಮೇಯರ್ ಸವಿತಾ ದೇವಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications











