ಟೈಗರ್ ಶ್ರಾಫ್-ದಿಶಾ ಪಟಾನಿ ಬ್ರೇಕಪ್: ಬಾಲಿವುಡ್‌ನಲ್ಲೊಂದು ಲವ್ ಫೇಲ್ಯೂರ್!
ಬಾಲಿವುಡ್‌ನಲ್ಲಿ ಪ್ರೀತಿ ಪ್ರೇಮ ಎಲ್ಲವೂ ಕಾಮನ್. ದಿಢೀರನೇ ಯಾರಿಗೆ ಬೇಕಾದರೂ ಲವ್ ಆಗುತ್ತೆ. ಯಾರ ಲವ್ ಬೇಕಾದರೂ ಬ್ರೇಕಪ್ ಆಗಬಹುದು. ಲವ್ ಮಾಡಿ ಬ್ರೇಕಪ್ ಆದ ಅದೆಷ್ಟೋ ಜೋಡಿಗಳು ಬಾಲಿವುಡ್‌ನಲ್ಲಿ ಇವೆ. ಈಗ ಬಾಲಿವುಡ್‌ನಲ್ಲಿ ಹಾಟ್ ಜೋಡಿಯ ಬ್ರೇಕಪ್ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ.
ಹಾಗಂತ ಬಾಲಿವುಡ್‌ನಲ್ಲಿ ಸಕ್ಸಸ್ ಆದ ಲವ್ ಸ್ಟೋರಿಗಳಿಗೇನು ಕಮ್ಮಿಯಿಲ್ಲ. ಅಂತೆಯೇ ಫೆಲ್ಯೂರ್ ಆದ ಲವ್ ಸ್ಟೋರಿಗಳು ಕೂಡ ಅಷ್ಟೇ ಇವೆ. ಬಾಲಿವುಡ್‌ನಲ್ಲಿ ಕ್ಯೂಟ್ ಅಂಡ್ ಹಾಟ್ ಜೋಡಿ ಎಂದು ಕರೆಸಿಕೊಂಡಿರುವ ಜೋಡಿಗಳಲ್ಲೊಂದು ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ. ಇಬ್ಬರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿರೋ ಸುದ್ದಿ ಹರಿದಾಡುತ್ತಲೇ ಇತ್ತು.
ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಕೈ ಕೈ ಹಿಡಿದು ಸುತ್ತಾಡಿದ ವಿಡಿಯೋಗಳು, ಫೋಟೊಗಳು ಹರಿದಾಡಿದ್ದವು. ಆದರೂ ಈ ಜೋಡಿ ಎಲ್ಲೂ ತಾವಿಬ್ಬರೂ ಪ್ರೇಮಿಗಳು ಎಂದು ಹೇಳಿಕೊಂಡಿರಲಿಲ್ಲ. ಆದ್ರೀಗ ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಬೇರೆಯಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

6 ವರ್ಷದ ಪ್ರೀತಿಗೆ ಏನಾಯ್ತು?
ಬಾಲಿವುಡ್‌ನ ಫಿಟ್ಟೆಸ್ಟ್ ಆಕ್ಟರ್ ಟೈಗರ್ ಶ್ರಾಫ್. ಈ ನಟನ ಸ್ಟಂಟ್ಸ್‌ಗೆ ಮರುಳಾಗದವರು ಯಾರಿಲ್ಲ. ಹಾಗೇ ಬೋಲ್ಡ್ ಅಂಡ್ ಸ್ಲಿಮ್ ನಟಿಯರಲ್ಲಿ ದಿಶಾ ಪಟಾನಿ ಕೂಡ ಒಬ್ಬರು. ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ 6 ವರ್ಷಗಳಿಂದ ಎಲ್ಲೇ ಹೋದರೂ ಒಟ್ಟಿಗೆ ಹೋಗಿದ್ದೂ ಇದೆ. ಒಟ್ಟೊಟ್ಟಿಗೆ ಕಂಡಿದ್ದೂ ಇದೆ. ಇವರಿಬ್ಬರ ಈ ಲವ್ ಸ್ಟೋರಿ ಕಳೆದ ಹಲವು ದಿನಗಳಿಂದ ತುಂಬಾನೇ ಚರ್ಚೆಯಲ್ಲಿತ್ತು. ಆದ್ರೀಗ ಈ ಹಾಟ್ ಜೋಡಿಯ ಪ್ರೀತಿಯಲ್ಲಿ ಬಿರುಕು ಬಿದ್ದಿದೆ ಅನ್ನೋ ಮಾತು ಹೇಳಿ ಬರುತ್ತಿದೆ.

ಟೈಗರ್ ಶ್ರಾಫ್-ದಿಶಾ ಸಿಂಗಲ್
ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಇಬ್ಬರೂ ಬಹಳ ದಿನಗಳಿಂದ ಬೇರೆ ಬೇರೆಯಾಗಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರ ನಡುವೆ ಅಸಲಿಗೆ ನಡೆದಿದ್ದೇನು? ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಇಬ್ಬರೂ ತಮ್ಮ ಪ್ರೀತಿಯನ್ನು ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಳೆದ ಒಂದು ವರ್ಷದಿಂದ ಇಬ್ಬರ ಸಂಬಂಧದಲ್ಲಿ ಆಗಾಗ ಅಪಸ್ವರಗಳು ಹೇಳಿ ಬರುತ್ತಿದ್ದವು. ಕೆಲವು ವಾರಗಳ ಹಿಂದಷ್ಟೇ ಈ ಜೋಡಿ ಬೇರೆ ಬೇರೆಯಾಗಿದೆ ಅನ್ನೋ ಸುದ್ದಿ ಹರಿದಾಡಿದೆ.

ಸ್ನೇಹಿತರಂತೆ ಇರಲು ನಿರ್ಧಾರ
ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ. ಆದರೂ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದ್ರೀಗ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ಪ್ರಚಾರದ ವೇಳೆ ದಿಶಾ ಪಟಾನಿ ತನ್ನ ಬಾಯ್‌ಫ್ರೆಂಡ್ ಟೈಗರ್ ಶ್ರಾಪ್ ಅನ್ನು ನೆನೆದಿದ್ದಾರೆ. ಈಗಾಗಲೇ ಹೆಚ್‌ಟಿ ಮಾಡಿರುವ ವರದಿ ಪ್ರಕಾರ, ದಿಶಾ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಪರಸ್ಪರ ಒಪ್ಪಂದದ ಮೇರೆ ಬೇರೆಯಾಗಿದ್ದು, ಮುಂದೆ ಸ್ನೇಹಿತರಾಗಿಯೇ ಇರಲು ನಿರ್ಧರಿಸಿದ್ದಾರೆ.

ದಿಶಾ-ಟೈಗರ್ ಸಿನಿಮಾಗಲ್ಲಿ ಬ್ಯುಸಿ
ಬ್ರೇಕಪ್ ಸುದ್ದಿಯ ಬಳಿಕವೂ ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಪರಸ್ಪರ ತಮ್ಮ ಸಿನಿಮಾಗಳಿಗೆ ಶುಭಕೋರುತ್ತಿದ್ದಾರೆ. ದಿಶಾ ಪಟಾನಿ ಅಭಿನಯದ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದರೆ, ಇತ್ತ ಟೈಗರ್ ಶ್ರಾಫ್ ಅಭಿನಯದ 'ಸ್ಕ್ರೂ ಧೀಲಾ' ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗಳಿಗೆ ಇಬ್ಬರೂ ಪರಸ್ಪರ ಶುಭಕೋರಿದ್ದಾರೆ. ಹೀಗಾಗಿ ಇಬ್ಬರ ಲವ್ ಸ್ಟೋರಿ ಯಾವ ಹಂತದಲ್ಲಿದೆ ಅನ್ನೋದು ಸದ್ಯಕ್ಕೆ ನಿಗೂಢವಾಗಿದ್ದರೂ, ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಅನ್ನೋ ವರದಿಗಳೂ ಬಂದಿವೆ.


Click it and Unblock the Notifications











