»   » 4 ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಸಚಿನ್ ಎ ಬಿಲಿಯನ್ ಡ್ರೀಮ್ಸ್'

4 ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಸಚಿನ್ ಎ ಬಿಲಿಯನ್ ಡ್ರೀಮ್ಸ್'

Posted By:
Subscribe to Filmibeat Kannada

ಕ್ರಿಕೆಟ್ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ಬಿಡುಗಡೆ ಆದ ನಾಲ್ಕು ದಿನಗಳ ಅಂತ್ಯದಲ್ಲಿಯೇ ಉತ್ತಮ ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ.[ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ]

ಕಳೆದ ಶುಕ್ರವಾರ ದಂದು ಬಿಡುಗಡೆಯಾಗಿದ್ದ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂಥೆ ಮೂರು ಭಾಷೆಗಳಿಂದಲೂ 4 ದಿನಗಳ ಅಂತ್ಯಕ್ಕೆ ಒಟ್ಟಾರೆ 32.25 ಕೋಟಿ ರೂ ಗಳಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

'Sachin: A Billion Dream's Box Office Collection Day 4: Film 'Holds Well'

ಬಿಡುಗಡೆ ಆದ ಮೊದಲನೇ ದಿನ ಮೇ 26 ರಂದು ಚಿತ್ರ 8.60 ಕೋಟಿ ರೂ, ಶನಿವಾರ 9.20 ಕೋಟಿ ರೂ, ಭಾನುವಾರ 10.25 ಕೋಟಿ ರೂ ಮತ್ತು ಸೋಮವಾರ 4.20 ಕೋಟಿ ರೂ ಗಳಿಸಿದೆ. ಈ ಬಗ್ಗೆ ಚಿತ್ರ ವಿಮರ್ಶಕ ಮತ್ತು ಚಲನಚಿತ್ರ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ರವರು ಟ್ವೀಟ್ ಮಾಡಿದ್ದಾರೆ. ಸಚಿನ್ ರವರ ಕ್ರಿಕೆಟ್ ಜೀವನ ಮತ್ತು ವೈಯಕ್ತಿಕ ಜೀವನ ಕೇವಲ 2 ಗಂಟೆ 19 ನಿಮಿಷಗಳ ಅವಧಿಯಲ್ಲಿ ಸೊಗಸಾಗಿ ಮೂಡಿಬಂದಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿದೆ.

'Sachin: A Billion Dream's Box Office Collection Day 4: Film 'Holds Well'

'ಸಚಿನ್ ಎ ಬಿಲಿಯನ್ ಡ್ರೀಮ್ಸ್' ನಲ್ಲಿ ಸಚಿನ್ ತೆಂಡೂಲ್ಕರ್ ಸ್ವತಃ ತಮ್ಮ ಪಾತ್ರವನ್ನು ನಿರ್ವಹಿಸಿದ್ದು, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಮಯುರೇಶ್ ಪೆಮ್ ಮತ್ತು ಇತರರು ಅಭಿನಯಿಸಿದ್ದಾರೆ. ಜೇಮ್ಸ್ ಎರ್ಸ್ಕೈನ್ ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ರವಿ ಭಾಗ್ವಾಂಡ್ಕಾ ಮತ್ತು ಕಾರ್ನೀವಲ್ ಮೋಷನ್ ಪಿಕ್ಚರ್ಸ್ ಪ್ರೊಡಕ್ಷನ್ ಕಂಪನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

English summary
Cricket legend Sachin Tendulkar debut movie 'Sachin: A Billion Dream's' collects Rs 32.25 crore on day 4.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada