»   » ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ

ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ

Posted By:
Subscribe to Filmibeat Kannada

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಜೀವನವನ್ನು 2 ಗಂಟೆ 19 ನಿಮಿಷದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಸಾಮಾನ್ಯ ಹುಡುಗ, ಕ್ರಿಕೆಟ್ ಜಗತ್ತಿಗೆ ದೇವರಾದ ಕಥೆ ಇದು. ಸಚಿನ್ ಅವರ ಸ್ಫೂರ್ತಿಧಾಯಕ ಜೀವನವನ್ನು ಪರದೆ ಮೇಲೆ ನೋಡಿದ ಮೇಲೆ ಅವರ ಬಗ್ಗೆ ಇದ್ದ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತೆ. 'ಸಚಿನ್ ಎ ಬಿಲಿಯನ್ ಡ್ರೀಮ್ಸ್ ಸಿನಿಮಾದ ಸಂಪೂರ್ಣ ವಿಮರ್ಶೆ ಮುಂದಿದೆ ಓದಿ.....

Rating:
4.0/5

ಚಿತ್ರ: ಸಚಿನ್ ಎ ಬಿಲಿಯನ್ ಡ್ರೀಮ್ಸ್
ನಿರ್ಮಾಣ: ರವಿ ಭಾಗ್ಚಾಂಡ್ಕಾ, ಕಾರ್ನೀವಲ್ ಮೋಷನ್ ಪಿಕ್ಚರ್ಸ್
ಕಥೆ, ನಿರ್ದೇಶನ: ಜೇಮ್ಸ್ ಎರ್ಸ್ಕೈನ್
ಸಂಗೀತ: ಎ.ಆರ್ ರೆಹಮಾನ್
ಸಂಕಲನ: ಅವದೆಶ್ ಮೊಹ್ಲಾ
ತಾರಾಗಣ: ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಮಯುರೇಶ್ ಪೆಮ್ ಮತ್ತು ಇತರರು.
ಬಿಡುಗಡೆ ದಿನಾಂಕ: ಮೇ 26 2017

ಲೆಜೆಂಡ್ ಹಿಂದಿನ ವ್ಯಕ್ತಿಯೇ 'ಸಚಿನ್'

'ಸಚಿನ್ ಎ ಬಿಲಿಯನ್ ಡ್ರೀಮ್ಸ್'.....ಒಬ್ಬ ಲೆಜೆಂಡ್ ಹಿಂದಿನ ವ್ಯಕ್ತಿಯ ಪರಿಚಯವನ್ನು ಮಾಡಿಸುತ್ತದೆ. ಕ್ರಿಕೆಟ್ ಮೈದಾನದಲ್ಲಿ ಸಾಮ್ರಾಟನಾಗಿ ಮೆರೆದ ಸಚಿನ್ ಅವರ, ವೈಯಕ್ತಿಕ ಬದುಕು, ಬಾಲ್ಯ, ಮತ್ತು ಅವರ ಜೀವನದ ಅಮೂಲ್ಯ ಕ್ಷಣಗಳನ್ನು ಸಂಗ್ರಹ ಮಾಡಿ 'ಸಚಿನ್' ಎಂಬ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸಿದೆ.

ಸಚಿನ್ ಬಾಲ್ಯದಿಂದ ಕಥೆ ಆರಂಭ

ಸಚಿನ್ ನಿರೂಪಣೆಯೊಂದಿಗೆ ಬಾಲ್ಯದಿಂದ ಪ್ರಾರಂಭವಾದ ಚಿತ್ರ ಮೊದಲು ಚಿಕ್ಕ ವಯಸ್ಸಿನಲ್ಲಿ ಸಚಿನ್ ಹೇಗಿದ್ದರು ಎಂಬುದನ್ನು ಹೇಳುತ್ತಾ ಹೋಗುತ್ತದೆ. ಅಕ್ಕನಿಂದ ಮೊದಲು ಬ್ಯಾಟ್ ಉಡುಗೊರೆ ಆಗಿ ಸಚಿನ್ ಪಡೆಯುತ್ತಾರೆ. ಅದೇ ಸಮಯದಲ್ಲಿ ಭಾರತ ಕ್ರಿಕೆಟ್ ತಂಡ 1983ರ ವಿಶ್ವಕಪ್ ನಲ್ಲಿ ಗೆಲ್ಲುತ್ತೆ. ಈ ಎರಡು ಘಟನೆಗಳು ಆ ಪುಟ್ಟ ಹುಡುಗನಿಗೆ ಕ್ರಿಕೆಟರ್ ಆಗುವ ಕನಸು ಕಾಣುವಂತೆ ಮಾಡುತ್ತೆ.

ಸಚಿನ್ ಸಾಧನೆಯ ಹೆಜ್ಜೆ

ಸಚಿನ್ ಜೀವನದಲ್ಲಿ ನಡೆದ ಬಹುಪಾಲು ಎಲ್ಲ ವಿಷಯಗಳನ್ನು ಈ ಚಿತ್ರ ಒಳಗೊಂಡಿದೆ. ಕ್ರಿಕೆಟ್ ಬದುಕಿಗೆ ಸಚಿನ್ ಬಂದಿದ್ದು ಹೇಗೆ, ಸಚಿನ್ ಜೀವನದಲ್ಲಿ ಅವರ ಅಣ್ಣ ಅಜಿತ್ ತೆಂಡೂಲ್ಕರ್ ಮತ್ತು ಕೋಚ್ ರಾಮಕಾಂತ್ ಅಚ್ರೇಕರ್ ಅವರ ಪಾತ್ರವೇನು ಎಂಬುದನ್ನ ತೋರಿಸಲಾಗಿದೆ. ಇನ್ನು ಚಿತ್ರದಲ್ಲಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ನಟಿಸಿರುವುದು ವಿಶೇಷ.

ಕ್ರಿಕೆಟ್ ಆಟದ ರೋಚಕತೆ

ಸಚಿನ್ ಆಡಿದ ಮೊದಲ ಪಂದ್ಯದಲ್ಲಿ ಡಕ್ ಔಟ್ ಆಗುತ್ತಾರೆ. ಸೊನ್ನೆಯಿಂದ ಶುರುವಾದ ಸಚಿನ್ ಕೆರಿಯರ್ ಮುಂದೆ ಅನೇಕ ದಾಖಲೆಯನ್ನು ನಿರ್ಮಿಸುತ್ತದೆ. ಈ ಜರ್ನಿಯಲ್ಲಿ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡುವ ಅನೇಕ ದೃಶ್ಯಗಳಿವೆ.

ಸಚಿನ್-ಅಂಜಲಿ ಲವ್ ಸ್ಟೋರಿ

ಸಚಿನ್ ಮತ್ತು ಅಂಜಲಿ ಅವರ ಲವ್ ಸ್ಟೋರಿಯನ್ನು ಸಹ ಸಿನಿಮಾದಲ್ಲಿ ತೋರಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿ ಹೇಗಾಯಿತು, ಸಚಿನ್ ಸಾಧನೆಗೆ ಅಂಜಲಿ ಹೇಗೆ ಮುಖ್ಯರಾದರು ಎನ್ನುವುದನ್ನು ನೈಜವಾಗಿ ಬಿಚ್ಚಿಟ್ಟಿದ್ದಾರೆ.

ಭಾವನಾತ್ಮಕ ಅಂಶಗಳು

ಚಿತ್ರದಲ್ಲಿ ಎಮೋಷನಲ್ ಆಗುವ ಅನೇಕ ದೃಶ್ಯಗಳಿವೆ. ಅದರಲ್ಲಿ ಸಚಿನ್ ಕ್ರಿಕೆಟ್ ನಿಂದ ನಿವೃತ್ತಿ ದೃಶ್ಯದಲ್ಲಿ ಅಂತು ಎಲ್ಲರ ಕಣ್ಣಲ್ಲಿ ನೀರು ಬರಿಸುತ್ತದೆ. ಇಡೀ ಸಿನಿಮಾದಲ್ಲಿ ಮನಸ್ಸಿನಲ್ಲಿ ಉಳಿಯುವ ಸೀನ್ ಗಳಲ್ಲಿ ಇದು ಕೂಡ ಒಂದು.

ಸಚಿನ್ ನಟನೆ ಅಮೋಘ

ಸಚಿನ್ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದು ಸಹಜ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕರ ಕೆಲಸ ಉತ್ತಮ

ಸಚಿನ್ ಅವರ ಕ್ರಿಕೆಟ್ ಜೀವನದ ಮೂಲಕ ಭಾರತ ಕ್ರಿಕೆಟ್ ಇತಿಹಾಸವನ್ನು ಸಹ ಹೇಳುವ ಪ್ರಯತ್ನವನ್ನು ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ.

ನೈಜತೆ ಎದ್ದು ಕಾಣುತ್ತೆ

ರಿಯಲ್ ಆಗಿ ನಡೆದಿರುವ ಅನೇಕ ದೃಶ್ಯವನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದು ನೋಡುಗರಿಗೆ ಚಿತ್ರ ತುಂಬ ಹತ್ತಿರವಾಗುತ್ತದೆ. ಸಚಿನ್ ಕುರಿತ ಎಲ್ಲಿಯೂ ನೋಡಿರದ ಕೆಲವು ಅಪರೂಪದ ದೃಶ್ಯಗಳು ಸಹ ಚಿತ್ರದಲ್ಲಿದೆ.

ಮ್ಯೂಜಿಕ್ ಮಾಡುವ ಮ್ಯೂಸಿಕ್

ಎ.ಆರ್.ರೆಹಮಾನ್ ಸಂಗೀತ ಚಿತ್ರದ ದೊಡ್ಡ ಪ್ಲಾಸ್ ಪಾಯಿಂಟ್. ಸಚಿನ್.... ಸಚಿನ್... ಎನ್ನುವ ಟೈಟಲ್ ಸಾಂಗ್ ಬಂದಾಗ ಇಡೀ ಚಿತ್ರಮಂದಿರ ಕ್ರಿಕೆಟ್ ಮೈದಾನವನ್ನಾಗಿಬಿಡುತ್ತೆ.

ಮೇಕಿಂಗ್

ಚಿತ್ರದ ಮೇಕಿಂಗ್ ಸಖತ್ ಅದ್ಧೂರಿಯಾಗಿದೆ. ಸಿನಿಮಾದ ಕ್ವಾಲಿಟಿಯನ್ನು ಹೇಳಿವುದಕ್ಕಿಂತ ಪರದೆ ಮೇಲೆ ನೋಡಿ ಖುಷಿ ಪಡಬೇಕು.

ಖಂಡಿತ ಮಿಸ್ ಮಾಡಬೇಡಿ

'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಸಿನಿಮಾದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ 'ಕ್ರಿಕೆಟ್ ದೇವರ ಆಟ ಅದ್ಬುತ, ನೋಡಿದ ಪ್ರೇಕ್ಷಕ ಮೂಕವಿಸ್ಮಿತ. ಕ್ರಿಕೆಟ್ ಮೈದಾನದ ರೋಚಕತೆ ತೆರೆ ಮೇಲೆ ನೋಡುವುದನ್ನು ನೀವು ಸಹ ಮಿಸ್ ಮಾಡಿಕೊಳ್ಳಬೇಡಿ.

English summary
Sachin Tendulkar'S Hindi Movie 'Sachin a billion dreams' has hit the screens today (May 26th). The movie is Sachin Tendulkar biopic and is a treat for Sachin Tendulkar Fans. 'Sachin a billion dreams' Review is here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada