ದುಷ್ಕರ್ಮಿಗಳಿಂದ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ; ಇನ್ಶ್ಯುರೆನ್ಸ್ ಕಂಪನಿಗೆ ಕೇಳಿದ್ದು ₹36 ಲಕ್ಷ.. ಬಂದಿದ್ದು?

ಸೈಫ್ ಅಲಿ ಖಾನ್ ಮನೆಗೆ ನುಗ್ಗು ದುಷ್ಕರ್ಮಿಯೊಬ್ಬ ಚಾಕು ಇರಿದ ಪ್ರಕರಣ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಟೈಟ್ ಸೆಕ್ಯೂರಿಟಿ ಮಧ್ಯೆ ಬಾಲಿವುಡ್ ನಟನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ಮುಂಬೈ ಮಂದಿಯನ್ನು ಬೆಚ್ಚಿಬೀಳಿಸಿತ್ತು. ಈ ಸಂಬಂಧ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕೃತ್ಯ ನಡೆಸಿದವನ್ನು ಹುಡುಕಾಟ ಜೋರಾಗಿ ನಡೆಯುತ್ತಿದೆ.

ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಫ್‌ಗೆ ಸುಮಾರು ಆರು ಕಡೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆದಿದ್ದು, ವೈದ್ಯರು ಪ್ರಾಣಾಪಾಯದಿಂದ ಹೊರ ಬಂದಿದ್ದಾರೆಂದು ಹೇಳಿದ್ದಾರೆ. ಈ ಮಧ್ಯೆ ಬಾಲಿವುಡ್ ನಟ ಇನ್ಶ್ಯುರೆನ್ಸ್ ಹಣದ ಬಗ್ಗೆ ವರದಿಯಾಗಿದೆ.

Saif Ali Khan claims Rs 36 lakh insurance company sanctioned Rs 25 lakh for his treatment

ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ದುಬಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅನ್ನೋದಕ್ಕೆ ಒಂದು ಸಾಕ್ಷಿ ಸಿಕ್ಕಿದೆ. ಬಾಲಿವುಡ್ ನಟ ತಾನು ಪಾವತಿಸುತ್ತಿರುವ ಹೆಲ್ತ್ ಇನ್ಶ್ಯುರೆನ್ಸ್ ಕಂಪನಿಯಿಂದ ಬರೋಬ್ಬರು 36 ಲಕ್ಷ ರೂಪಾಯಿ ಹಣ ಕೇಳಿದ್ದಾರೆ ದಿ ಮಿಂಟ್ ವರದಿ ಮಾಡಿದೆ. ಹಾಗೇ ಇನ್ಶ್ಯುರೆನ್ಸ್ ಕಂಪನಿ ಎಷ್ಟು ಹಣವನ್ನು ನೀಡಿದೆ ಅನ್ನೋದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.

ಈ ವರದಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ನಿವಾ ಬುಪಾ ಕಂಪನಿಯಿಂದ ಹೆಲ್ತ್ ಇನ್ಶ್ಯುರೆನ್ಸ್ ಖರೀದಿಸಿದ್ದಾರೆ ಎಂದಿದೆ. ಹಾಗೇ ಈ ಕಂಪನಿಯಿಂದ ತನ್ನ ಚಿಕಿತ್ಸೆಗೆ ತಗುಲಿದ 36 ಲಕ್ಷ ರೂಪಾಯಿ ವೆಚ್ಚವನ್ನು ಪಾವತಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಸೈಫ್ ಅಲಿ ಖಾನ್‌ ದಾಖಲಾಗಿರುವ ಲೀಲಾವತಿ ಆಸ್ಪತ್ರೆಗೆ ಈಗಾಗಲೇ 25 ಲಕ್ಷ ರೂಪಾಯಿ ಹಣವನ್ನು ಇನ್ಶ್ಯುರೆನ್ಸ್ ಕಂಪನಿ ಪಾವತಿ ಮಾಡಿದೆ ಎಂದು ವರದಿ ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೆಲ್ತ್ ಇನ್ಶ್ಯುರೆನ್ಸ್ ಪಾಲಿಸಿಯ ಕೆಲವು ಮಾಹಿತಿ ಕೂಡ ಹೊರಬಿದ್ದಿದೆ. ಪಾಲಸಿ, ಐಡಿ, ಚಿಕಿತ್ಸೆಯ ವಿಧಾನ ಸೇರಿದಂತೆ ಹಲವು ಮಾಹಿತಿಗಳು ಲೀಕ್ ಆಗಿವೆ. ಹಾಗೇ ಸೈಫ್ ಅಲಿ ಖಾನ್ ಇದೇ ತಿಂಗಳು 21ರಂದು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಇನ್ನೂ ವೈದ್ಯರು ಖಚಿತ ಮಾಹಿತಿಯನ್ನು ಹಂಚಿಕೊಂಡಿಲ್ಲ.

Saif Ali Khan claims Rs 36 lakh insurance company sanctioned Rs 25 lakh for his treatment

ಸೈಫ್ ಅಲಿ ಖಾನ್ ಸದ್ಯ ಲೀಲಾವತಿ ಆಸ್ಪತ್ರೆಯ ಐಷಾರಾಮಿ ರೂಮಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜನವರಿ 16 ರಿಂದ ಚಿಕಿತ್ಸೆ ಪಡೆಯುತ್ತಿದ್ದು, ಹೆಲ್ತ್ತ ಇನ್ಶ್ಯುರೆನ್ಸ್ ಕಂಪನಿಂದ ಸೈಫ್ ಕುಟುಂಬ ಸುಮಾರು 35 ಲಕ್ಷದ 98 ಸಾವಿರದ 700 ರೂಪಾಯಿಯನ್ನು ನೀಡುವಂತೆ ಕೇಳಿಕೊಂಡಿತ್ತು ಎನ್ನಲಾಗಿದೆ. ಇಲ್ಲಿವರೆಗೂ ಇನ್ಶ್ಯುರೆನ್ಸ್ ಕಂಪನಿ ಸುಮಾರು 25 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದೆ ಎನ್ನಲಾಗಿದೆ.

ಹೆಲ್ತ್‌ ಇನ್ಶ್ಯುರೆನ್ಸ್ ಕಂಪನಿ ನಿವಾ ಬೂಪ ಈ ವರದಿಯನ್ನು ಖಚಿತ ಪಡಿಸಿದೆ ಎಂದು ಮಿಂಟ್ ವರದಿ ಮಾಡಿದೆ. ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಹಣ ರಹಿತ ಚಿಕಿತ್ಸೆಯ ಮೊತ್ತವನ್ನು ಪಾವತಿಸುವಂತೆ ಮನವಿ ಬಂದಿತ್ತು. ಅದಕ್ಕೆ ಈಗಾಗಲೇ ಅನುಮೋದನೆ ಮಾಡಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದೆ. ಸದ್ಯ ಈ ಮಾಹಿತಿ ಸೋರಿಕೆಯಾಗಿದ್ದು ಆ ಬಗ್ಗೆನೂ ಚರ್ಚೆ ನಡೆಯುತ್ತಿದೆ.

More from Filmibeat

English summary
Saif Ali Khan claims Rs 36 lakh insurance company sanctioned Rs 25 lakh for his treatment says report;
Read more about: saif ali khan bollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X