ಬಿಜೆಪಿ ಮುಖಂಡನ ಪುತ್ರನೊಂದಿಗೆ ಸೈಫ್ ಅಲಿ ಖಾನ್ ಪುತ್ರಿ ಡೇಟಿಂಗ್? ಏನಿಲ್ಲಾ ಎನ್ನುತ್ತಲೇ ಗುರುದ್ವಾರದಲ್ಲಿ ಕಂಡ ಜೋಡಿ

ಬಾಲಿವುಡ್‌ನಲ್ಲಿ ಪ್ರಮುಖ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಇಬ್ಬರು. ಈಗ ಇವರ ಪುತ್ರಿ ಸಾರಾ ಅಲಿ ಖಾನ್ ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಂದೆ-ಮಗಳು ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಮಗಳ ಪ್ರತಿಯೊಂದು ಹೆಜ್ಜೆಯಲ್ಲೂ ಸೈಫ್ ಅಲಿ ಖಾನ್ ಬೆನ್ನೆಲ್ಲುಬಾಗಿ ನಿಂತಿದ್ದಾರೆ. ಫ್ಯಾಮಿಲಿ, ಹೆಂಡತಿ, ಮಕ್ಕಳ ವಿಚಾರದಲ್ಲಿ ಸೈಫ್ ಅಲಿ ಖಾನ್ ಹೆಚ್ಚು ಗಮನ ಹರಿಸುತ್ತಾರೆ. ವೈಯಕ್ತಿಕ ವಿಚಾರವನ್ನು ಗೌಪ್ಯವಾಗಿ ಇಡುತ್ತಾರೆ.

ಸಾರಾ ಅಲಿ ಖಾನ್ ಕ್ಯಾಮರಾ ಮುಂದೆ ಓಪನ್ ಆಗಿ ಮಾತಾಡುವ ಸ್ವಭಾವದವರು. ಅದರಲ್ಲೂ ಡೇಟಿಂಗ್, ಲವ್ ವಿಚಾರದಲ್ಲಿ ಓಪನ್‌ಗಾಗಿ ಹೇಳಿಕೊಳ್ಳುತ್ತಾರೆ. ಇದನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದು ತಮಾಷೆಗಾಗಿ ಹೇಳಿದ್ದಾರೋ? ಇಲ್ಲ ಸೀರಿಯಲ್ ಆಗಿ ಹೇಳಿಕೊಂಡಿದ್ದಾರೋ ಅದು ಬೇರೆ ಮಾತು. ಆದರೆ, ಸಾರಾ ಅಲಿ ಖಾನ್ ಅಪ್ಪನಿಗಿಂತ ಕೊಂಚ ಡಿಫ್ರೆಂಟ್. ಈ ಬೆನ್ನಲ್ಲೇ ಬಿಜೆಪಿ ಮುಖಂಡನ ಪುತ್ರನೊಂದಿಗೆ ಡೇಟಿಂಗ್ ಮಾಡುತ್ತಿರುವ ವಿಷಯ ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Saif Ali Khan Daughter Sara Ali Khan Dating rumours With BJP Leader s Son Arjun Pratap Bajwa

ಪಂಜಾಬ್‌ನ ಬಿಜೆಪಿ ಮುಖಂಡನ ಪುತ್ರ ಅರ್ಜುನ್ ಪ್ರತಾಪ್ ಬಾಜ್ವಾ ಜೊತೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಗಾಢ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ. ಇಂತಹದ್ದೊಂದು ಸುದ್ದಿ ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೆ, ಈ ಜೋಡಿ ಡೇಟಿಂಗ್ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಇಂತಹ ಸಂದರ್ಭದಲ್ಲಿಯೇ ಇತ್ತೀಚೆಗೆ ಸಾರಾ ಅಲಿ ಖಾನ್ ಹಾಗೂ ಅರ್ಜುನ್ ಪ್ರತಾಪ್ ಬಾಜ್ವಾ ಇಬ್ಬರೂ ಗುರುದ್ವಾರಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದರು. ಅಸಲಿಗೆ ಸಾರಾ ಜೊತೆ ಕಾಣಿಸಿಕೊಂಡಿರುವ ಅರ್ಜುನ್ ಪ್ರತಾಪ್ ಬಾಜ್ವಾ ಹಿನ್ನೆಲೆಯೇನು?

ಅರ್ಜುನ್ ಪ್ರತಾಪ್ ಬಾಜ್ವಾ ಪಂಜಾಬ್‌ನ ಬಿಜೆಪಿ ಉಪಾಧ್ಯಕ್ಷ ಫತೇಹ್ ಜಂಗ್ ಸಿಂಗ್ ಬಾಜ್ವಾ ಅವರ ಪುತ್ರ. ರಾಜಕೀಯ ಹಿನ್ನೆಲೆ ಇದ್ದರೂ, ಚುನಾವಣೆ ಸಮಯದಲ್ಲಿ ಅಪ್ಪನಿಗೆ ನೆರವಾದರೂ, ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅರ್ಜುನ್ ಪ್ರತಾಪ್ ಬಾಜ್ವಾ ಮಾಡಲಿಂಗ್, ನಟನೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಚಂಡೀಗಢ ಹಾಗೂ ಮುಂಚೈ ಎರಡೂ ನಗರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜನಪ್ರಿಯತೆಯಲ್ಲಿ ಸಾರಾ ಅಲಿ ಖಾನ್‌ಗಿಂತ ಅರ್ಜುನ್ ಪ್ರತಾಪ್ ಬಾಜ್ವಾ ಒಂದು ಹೆಜ್ಜೆ ಮುಂದಿದ್ದಾರೆಂದೇ ಹೇಳಬಹುದು. ಅರ್ಜುನ್ ಭಾರತದಲ್ಲಿ ಅತೀ ಬೇಡಿಕೆಯಲ್ಲಿರುವ ಸೂಪರ್‌ ಮಾಡೆಲ್‌ಗಳಲ್ಲಿ ಒಬ್ಬರಾಗಿದ್ದಾರೆ. ಆಕರ್ಷಕ ಮೈಕಟ್ಟು, ಹ್ಯಾಂಡ್ಸಮ್ ಲುಕ್‌ಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಫ್ಯಾಷನ್ ಲೋಕದಲ್ಲೂ ಇವರಿಗೆ ಬೇಡಿಕೆಯಿದೆ. ರೋಹಿತ್ ಮತ್ತು ವರುಣ್ ಬಾಲ್ ಅಂತ ಫೇಮಸ್ ವಿನ್ಯಾಸಗಾರರ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

Saif Ali Khan Daughter Sara Ali Khan Dating rumours With BJP Leader s Son Arjun Pratap Bajwa

ಇನ್ನು ಅರ್ಜುನ್ ಕೇವಲ ಮಾಡಲಿಂಗ್‌ನಲ್ಲಿ ಅಷ್ಟೇ ಅಲ್ಲ. ಇವರೊಬ್ಬ ಪ್ರತಿಭಾವಂತ ಗಾಯಕ ಕೂಡ ಹೌದು. ಕೊವಿಡ್ ಸಮಯದಲ್ಲಿ ಅಮ್ಮ ಪ್ರೇರಣೆಯಿಂದ ಹಾಡುವುದಕ್ಕೆ ಶುರು ಮಾಡಿದ್ದ ಅರ್ಜುನ್ ಪ್ರತಾಪ್ ಬಾಜ್ವಾ ಕೆಲವು ಅಲ್ಬಮ್‌ಗಳನ್ನು ಹೊರಗೆ ತಂದಿದ್ದಾರೆ. 'ಥಿಂಕಿನ್ ಬೌಟ್ ಯೂ', 'ಹೆಲ್‌ಕ್ಯಾಟ್' ಮತ್ತು 'ಎನ್ ರೂಟ್' ಹಾಡುಗಳು ಪಂಜಾಬ್ ಪ್ರಾಂತ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಇದರೊಂದಿಗೆ ಅಕ್ಷಯ್ ಕುಮಾರ್ ನಟಿಸಿದ 'ಸಿಂಗ್ ಇಸ್ ಬ್ಲಿಂಗ್' ಸಿನಿಮಾದಲ್ಲಿ ಪ್ರಭುದೇವಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಕೂಡ ಮಾಡಿದ್ದರು ಎಂದು ವರದಿಯಾಗಿದೆ. 'ಬ್ಯಾಂಡ್ ಆಫ್ ಮಹಾರಾಜಾಸ್' ಎಂಬ ಸಿನಿಮಾದ ಮೂಲಕ ನಟನೆಗೂ ಎಂಟ್ರಿ ಕೊಟ್ಟಿದ್ದಾರೆ.

ಈಗ ಇವರೊಂದಿಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹೆಸರು ಕೇಳಿ ಬರುತ್ತಿದೆ. ಹಲವು ತಿಂಗಳುಗಳಿಂದ ಇಬ್ಬರ ಬಗ್ಗೆ ವದಂತಿಗಳು ಹರಿದಾಡುತ್ತಿತ್ತು. ಆ ವೇಳೆ ಈ ಜೋಡಿ ಡೇಟಿಂಗ್ ರೂಮರ್ ಅನ್ನು ತಳ್ಳಿ ಹಾಕಿದ್ದವು. ಆದರೆ, ಜುಲೈ 29, 2025 ರಂದು ಇಬ್ಬರೂ ಒಟ್ಟಿಗೆ ಗುರುದ್ವಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಈ ಜೋಡಿ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ರೆಕ್ಕೆ ಪುಕ್ಕಗಳು ಹಬ್ಬಿಕೊಂಡಿದ್ದವು.

More from Filmibeat

English summary
Bollywood actress Saif Ali Khan daughter Sara Ali Khan was recently spotted with BJP leader’s son Arjun Pratap Bajwa, sparking fresh dating rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X