ಸೈಫ್ ಅಲಿಖಾನ್ ದಿಢೀರ್ ಆಸ್ಪತ್ರೆಗೆ ದಾಖಲು;Jr.NTR 'ದೇವರ' ಶೂಟಿಂಗ್ ವೇಳೆ ಪೆಟ್ಟಾಯ್ತಾ? ಏನಿದು ಸುದ್ದಿ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಇಂದು (ಜನವರಿ 22) ದಿಢೀರನೇ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೈಫ್ ಅಲಿ ಖಾನ್ ಮೊಣಕಾಲು ಹಾಗೂ ಬೆನ್ನಿಗೆ ತೀವ್ರವಾಗಿ ಪೆಟ್ಟಾಗಿದ್ದು, ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವರದಿಗಳಾಗಿವೆ. ಆದರೆ, ಇದೂವರೆಗೂ ಸೈಫ್ ಅಲಿ ಖಾನ್ ತಂಡದಿಂದ, ಆಪ್ತರಿಂದ ಇಲ್ಲವೇ ಪತ್ನಿ ಕರೀನಾ ಕಪೂರ್ ಖಾನ್ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕರೀನಾ ಕಪೂರ್ ಖಾನ್ ಸದ್ಯ ಆಸ್ಪತ್ರೆಯಲ್ಲಿ ಪತಿ ಸೈಫ್ ಅಲಿ ಖಾನ್ ಜೊತೆಯೇ ಇದ್ದಾರೆಂದು ಮಾಧ್ಯಮಗಳಲ್ಲಿ ವರದಿಗಳಾಗಿವೆ. ಸೈಫ್ ಅಲಿ ಖಾನ್ ಸದ್ಯ 'ದೇವರ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾಗೆ ಶೂಟಿಂಗ್ ಮಾಡುವ ವೇಳೆ ಮೊಣಕಾಲು ಹಾಗೂ ಭುಜಕ್ಕೆ ಗಂಭೀರವಾಗಿ ಪೆಟ್ಟಾಗಿದೆ ಎಂದು ಕೆಲವು ಮಾಧ್ಯಮಗಳು ಹೇಳಿದ್ದವು.
ಆದರೆ, ಸೈಫ್ ಅಲಿ ಖಾನ್‌ಗೆ 'ದೇವರ' ಸಿನಿಮಾದ ಚಿತ್ರೀಕರಣದ ವೇಳೆ ಪೆಟ್ಟಾಗಿಲ್ಲ. ಹಲವು ದಿನಗಳಿಂದ ಮೊಣಕಾಲಿನ ಶಸ್ತ್ರ ಚಿಕಿತ್ಸೆಯನ್ನು ಸೈಫ್ ಅಲಿ ಖಾನ್ ಮಾಡಿಕೊಳ್ಳಬೇಕಿತ್ತು. ಆದರೆ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಲಿಲ್ಲ. ಹೀಗಾಗಿ ಸದ್ಯ ಬಿಡುವು ಸಿಕ್ಕಿದ್ದರಿಂದ ಇಂದು (ಜನವರಿ 22) ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಒಳಗಾಗಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ಸೈಫ್ ಅಲಿ ಖಾನ್ ಹಲವು ದಿನಗಳಿಂದ ಮೊಣಕಾಲು ಹಾಗೂ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಹಾಗೇ ಉಳಿಸಿಕೊಂಡಿದ್ದ ಶಸ್ತ್ರ ಚಿಕಿತ್ಸೆ ಇಂದು ನೆರೆವೇರಿದೆ ಎಂದು ವರದಿ ಮಾಡಲಾಗಿದೆ. ಆದರೆ, ನಿಜಕ್ಕೂ ಸೈಫ್ ಅಲಿ ಖಾನ್‌ಗೆ ಏನಾಗಿದೆ? ಯಾವ ಕಾರಣ ಶಸ್ತ್ರ ಚಿಕಿತ್ಸೆಯಾಗಿದೆ ಎಂಬುದನ್ನು ಸೈಫ್ ಅಲಿ ಖಾನ್ ತಂಡ ಅಥವಾ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿಲ್ಲ.
ಸೈಫ್ ಅಲಿಖಾನ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ನೆಚ್ಚಿನ ನಟನ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಸಿನಿಮಾ ಮಂದಿಗೆ ಶೂಟಿಂಗ್ ವೇಳೆ ಪೆಟ್ಟುಗಳಾಗುವುದಕ್ಕೆ ಸಹಜ. ಬಿದ್ದು ಎದ್ದು ಶೂಟಿಂಗ್ ಮಾಡುತ್ತಲೇ ಇರುತ್ತಾರೆ. ಸದ್ಯ ಸೈಫ್ ಅಲಿ ಖಾನ್ ತೆಲುಗಿನ ಫ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಹೀಗಾಗಿ ಇದೇ ಸಿನಿಮಾದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿರಬಹುದೆಂಬ ಸುದ್ದಿ ಹಬ್ಬಿದೆ.
ಈ ಹಿಂದೆ ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ 'ರಂಗೂನ್' ಸಿನಿಮಾ ಶೂಟಿಂಗ್ ಮಾಡುವ ವೇಳೆ ಸೈಫ್ ಅಲಿ ಖಾನ್‌ಗೆ ಪೆಟ್ಟಾಗಿತ್ತು. ಹಲವು ಬಾರಿಗೆ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಶೂಟಿಂಗ್ ಮಾಡಿದ್ದು ಇದೆ. ರಂಗೂನ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಬೆರಳು ಹಾಗೂ ಪಾದಕ್ಕೆ ಪೆಟ್ಟಾಗಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿದಾಗ ಫ್ಯಾನ್ಸ್ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು.


Click it and Unblock the Notifications











