ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್; ಮ್ಯಾಚ್ ಆಗ್ತಿಲ್ಲ ಫಿಂಗರ್‌ಪ್ರಿಂಟ್ಸ್
ಸೈಫ್ ಅಲಿ ಖಾನ್ ಮನೆಗೆ ನುಗ್ಗು ಚಾಕು ಇರಿದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಹೈ ಸೆಕ್ಯೂರಿಟಿ ಇರುವ ಬಾಲಿವುಡ್ ನಟನ ಮನೆಗೆ ನುಗ್ಗಿ ಸೈಫ್ ಅಲಿ ಖಾನ್‌ಗೆ ದುಷ್ಕರ್ಮಿ ಚಾಕುವಿನಿಂದ ಇರಿದಿದ್ದ. ಇದು ಬಾಲಿವುಡ್ ಮಂದಿಯನ್ನು ಬೆಚ್ಚಿ ಬೀಳಿಸಿತ್ತು. ಆದರೆ, ಈ ಪ್ರಕರಣಕ್ಕೀಗ ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಪೊಲೀಸರು ಬಂಧಿಸಿರುವ ಆರೋಪಿಯ ಫಿಂಗರ್‌ಫ್ರಿಂಟ್ಸ್ ಸೈಫ್ ಮನೆಯಲ್ಲಿ ಸಿಕ್ಕಿಲ್ಲ.
ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣ ಮುಂಬೈ ಪೊಲೀಸ್‌ಗೆ ದೊಡ್ಡ ತಲೆ ನೋವಾಗಿತ್ತು. ದುರ್ಷ್ಕರ್ಮಿಯನ್ನು ಬಂಧಿಸುವುದಕ್ಕೆ ಮುಂಬೈ ಪೊಲೀಸರು ಪರದಾಡಿದ್ದರು. ಮೂರು ದಿನಗಳ ಬಳಿಕ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹೆಜಾದ ಎಂಬುವವನ್ನು ಬಂಧಿಸಲಾಗಿತ್ತು. ಆದ್ರೀಗ ಸೈಫ್ ಅಲಿ ಖಾನ್ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಫಿಂಗರ್‌ಪ್ರಿಂಟ್‌ಗಳ ಪೈಕಿ ಒಂದೂ ಮ್ಯಾಚ್ ಆಗುತ್ತಿಲ್ಲ ಎಂದು ವರದಿಯಾಗಿದೆ.

ಮುಂಬೈನ ಸಿಐಡಿ ಇಂತಹದ್ದೊಂದು ವರದಿಯನ್ನು ಒಪ್ಪಿಸಿದೆ. ಇದರಿಂದ ಮುಂಬೈ ಪೊಲೀಸ್‌ಗೆ ಹಿನ್ನೆಡೆಯಾಗಿದೆ. ಈ ಮೂಲಕ ಮುಂಬೈ ಪೊಲೀಸರು ನಿರಾಪರಾಧಿಯನ್ನು ಬಂಧಿಸಿದ್ದಾರಾ? ಎಂಬ ಪ್ರಶ್ನೆಗಳು ಕೂಡ ಮೂಡುತ್ತಿವೆ. ಮಿಡ್ ಡೇ ಮಾಡಿದ ವರದಿಯಲ್ಲಿ ಸೈಫ್ ಮನೆಯಲ್ಲಿ ಆರೋಪಿ ಶರೀಫುಲ್ ಇಸ್ಲಾಂ ಶೆಹೆಜಾದನ ಫಿಂಗರ್‌ಫ್ರಿಂಟ್ಸ್ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಅಸಲಿಗೆ ಸೈಫ್ ಅಲಿ ಖಾನ್ ಇರಿತ ಪ್ರಕರಣದ ತನಿಖೆ ಎತ್ತ ಕಡೆ ಸಾಗುತ್ತಿದೆ?
ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣದ ಬಳಿಕ ಮುಂಬೈ ಪೊಲೀಸರು ಕೃತ್ಯ ಎಸಗಿದವನನ್ನು ಹುಡುಕಾಡುವುದಕ್ಕೆ ಶತ ಪ್ರಯತ್ನ ಮಾಡಿದ್ದರು. ಸಿಸಿಟಿವಿ ಫುಟೇಜ್ ಅನ್ನು ಆಧರಿಸಿ ಹುಡುಕಾಟ ಶುರು ಮಾಡಿದ್ದರು. ಸುಮಾರು 40 ತಂಡಗಳು ದುಷ್ಕರ್ಮಿಯನ್ನು ಬಂಧಿಸುವುದಕ್ಕೆ ಮುಂದಾಗಿದ್ದರು. ಸುಮಾರು ಮೂರು ದಿನಗಳ ಬಳಿಕ ಶರೀಫ್‌ಫುಲ್ ಇಸ್ಲಾಂ ಅನ್ನು ಬಂಧಿಸಲಾಗಿತ್ತು. ಆದ್ರೀಗ ಫಿಂಗರ್‌ಫ್ರಿಂಟ್ಸ್ ಮ್ಯಾಚ್ ಆಗದೇ ಇರೋದು ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ.
ಒಟ್ಟು 19 ಫಿಂಗರ್‌ಫ್ರಿಂಟ್ಸ್ ಸ್ಯಾಂಪಲ್‌ಗಳನ್ನು ಸೈಫ್ ಅಲಿ ಖಾನ್ ಮನೆಯಿಂದ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ಒಂದೇ ಒಂದು ಫಿಂಗರ್‌ಫ್ರಿಂಟ್ ಕೂಡ ಆರೋಪಿ ಶರೀಫುಲ್ ಫಿಂಗರ್‌ಪ್ರಿಂಟ್‌ಗೆ ಮ್ಯಾಚ್ ಆಗುತ್ತಿಲ್ಲ. ಈ ಬೆಳವಣಿಗೆ ಈಗ ಮುಂಬೈ ಪೊಲೀಸರು ಮೇಲೆ ಒತ್ತಡವನ್ನು ಹೆಚ್ಚಾಗುವಂತೆ ಮಾಡಿದೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಪೊಲೀಸರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಬಂಧಿಸಿರುವ ಆರೋಪಿ ಶರೀಫುಲ್ ಅವರ ಫಿಂಗರ್‌ಪ್ರಿಂಟ್‌ಗಳನ್ನು ಸಿಐಡಿಯ ಫಿಂಗರ್‌ಪ್ರಿಂಟ್ಸ್ ಬ್ಯೂರೋದ ಪರೀಕ್ಷಾ ವಿಭಾಗಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಪರೀಕ್ಷೆ ಮಾಡಿದಾಗ, ಆರೋಪಿಯ ಫಿಂಗರ್‌ಫ್ರಿಂಟ್ಸ್ ಮ್ಯಾಚ್ ಆಗದೇ ಇರುವುದು ಬೆಳಕಿಗೆ ಬಂದಿದೆ. ಈ ವರದಿಯನ್ನು ಸಿಐಡಿ ಅಧೀಕ್ಷಕರಿಗೆ ರವಾನೆ ಮಾಡಲಾಗಿದೆ ಎಂದು ಮಿಡ್ ಡೇ ವರದಿಯನ್ನು ಮಾಡಿದೆ.
ದುಷ್ಕರ್ಮಿ ಸೈಫ್ ಅಲಿ ಖಾನ್ ಮನೆಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಮುಖ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಮುಂಬೈ ಪೊಲೀಸರು ಹಂಚಿದ್ದ ಫೋಟೊಗಳಲ್ಲಿ ಕ್ಲಾರಿಟಿ ಇರಲಿಲ್ಲ. ಹೀಗಾಗಿ ರೈಲ್ವೆ ಪೊಲೀಸರು ಕೂಡ ಗೊಂದಲಕ್ಕೆ ಒಳಗಾಗಿ ಬೇರೆ ಯಾರನ್ನೋ ಅರೆಸ್ಟ್ ಮಾಡಿರಬಹುದು ಎಂದು ಅಂದಾಹಿಸಲಾಗಿದೆ. ಸದ್ಯ ಆರೋಪಿಯ ಫಿಂಗರ್‌ಪ್ರಿಂಟ್ಸ್ ಮ್ಯಾಚ್ ಆಗದೇ ಇರುವುದು ಮುಂಬೈ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಹಾಗೇ ಕೆಲವು ವರದಿಗಳು ಸೈಫ್ ಅಲಿ ಖಾನ್ ಮೇಲೂ ಅನುಮಾನಗಳನ್ನು ವ್ಯಕ್ತಪಡಿಸಿವೆ. ಚಾಕು ಇರಿತ ಪ್ರಕರಣದ ಬಳಿಕ ಸೈಫ್ ಅಲಿ ಖಾನ್ 36 ಲಕ್ಷ ರೂಪಾಯಿ ಹೆಲ್ತ್ ಇನ್‌ಶ್ಯೂರೆನ್ಸ್ ಅನ್ನು ಕ್ಲೈಮ್ ಮಾಡಿದ್ದರು. ಈ ಬಗ್ಗೆ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ IRDAIಗೆ ದೂರನ್ನು ಸಲ್ಲಿಸಿದೆ.


Click it and Unblock the Notifications











