Divya Bharti: ದುರಂತ ನಾಯಕಿ ದಿವ್ಯಾ ಭಾರತಿ ಬಳಸುತ್ತಿದ್ದ ಪರ್ಫ್ಯೂಮ್ ಇನ್ನೂ ಪತಿಯ ಬಳಿ ಇದೆ ಎಂದ 2ನೇ ಪತ್ನಿ
ದುರಂತ ನಾಯಕಿಯರ ಪಟ್ಟಿಯಲ್ಲಿ ಬಾಲಿವುಡ್ ನಟಿ ದಿವ್ಯಾ ಭಾರತಿ ಹೆಸರು ಕೂಡ ಸಿಗುತ್ತು. 90ರ ದಶಕದ ಅತೀ ಸುಂದರ ನಟಿಯರ ಸಾಲಿನಲ್ಲಿ ದಿವ್ಯಾ ಭಾರತಿಯ ಹೆಸರು ಮೊದಲಿತ್ತು. ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿದ್ದರು. ಈಕೆಯ ದುರಂತ ಸಾವು ಇಂದಿಗೂ ನಿಗೂಢವಾಗಿಯೇ ಇದೆ. ಇಂದಿಗೂ ಈಕೆ ಸಾವು ಅಪಘಾತವೋ, ಆತ್ಮಹತ್ಯೆಯೋ, ಕೊಲೆಯೋ ಎಂಬುದು ಸಾಬೀತಾಗಲೇ ಇಲ್ಲ.
Recommended Video

ದಿವ್ಯ ಭಾರತಿ ಉತ್ತುಂಗದಲ್ಲಿರುವಾಗಲೇ ನಿರ್ಮಾಪಕ ಸಾಜಿದ್ ನಾಡಿಯದ್ವಾಲರನ್ನು ವಿವಾಹವಾಗಿದ್ದರು. ಇಂದಿಗೂ ದಿವ್ಯಾ ಭಾರತಿ ಸಾವಿನ ವಿಷಯಕ್ಕೆ ಬಂದರೆ, ಸಾಜಿದ್ ಹೆಸರು ಕೂಡ ತಳುಕು ಹಾಕಿಕೊಳ್ಳುತ್ತೆ. ಇದನ್ನೆಲ್ಲಾ ಪಕ್ಕಕ್ಕಿಟ್ಟಿ ನೋಡಿದರೆ, ಸಾಜಿದ್ ನಾಡಿಯದ್ವಾಲ ಎರಡನೇ ಪತ್ನಿ ನೀಡಿದ ಹೇಳಿಕೆ ಇದೆಲ್ಲವೂ ಸುಳ್ಳು ಎಂದೆನಿಸುತ್ತೆ. ಮೊದಲ ಪತ್ನಿ ದಿವ್ಯಾ ಭಾರತಿಯೊಂದಿಗೆ ನಿರ್ಮಾಪಕ ಸಾಜಿದ್ ಸಂಬಂಧದದ ಬಗ್ಗೆ ಎರಡನೇ ಪತ್ನಿ ವಾರ್ದಾ ಮನ ಬಿಚ್ಚಿ ಮಾತಾಡಿದ್ದಾರೆ.
ಸಾಜಿದ್ ಹಾಗೂ ದಿವ್ಯಾ ಭಾರತಿ ಮದುವೆ 1992 ರಲ್ಲಿ ನಡೆದಿತ್ತು. ಆಗ ದಿವ್ಯ ಭಾರತಿಗೆ ಕೇವಲ ಹದಿನೆಂಟು ವರ್ಷ. ದಿವ್ಯಾ ಭಾರತಿ ವಿವಾಹವಾದ ಕೇವಲ ಒಂದು ವರ್ಷದ ಬಳಿಕ, ಏಪ್ರಿಲ್ 5, 1993 ರಂದು ಮುಂಬೈನ ತನ್ನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಈಗ ಎರಡನೇ ಪತ್ನಿ ವಾರ್ದಾ, ದಿವ್ಯಾ ಭಾರತಿ ಹಾಗೂ ಪತಿಯ ನಡುವಿನ ಸಂಬಂಧವನ್ನು ರಿವೀಲ್ ಮಾಡಿದ್ದಾರೆ.

ಸಾಜಿದ್ ಬಳಿ ದಿವ್ಯಾ ಭಾರತಿ ಪರ್ಫ್ಯೂಮ್ ಇದೆ
ದಿವ್ಯಾ ಭಾರತಿ ನಿಧನದ ಬಳಿಕ ಸಾಜಿದ್ 2000ರಲ್ಲಿ ವಾರ್ದಾ ಎಂಬುವವರನ್ನು ವಿವಾಹವಾದರು. ಈ ಜೋಡಿ ಇಂದಿಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ತನ್ನ ಪತಿ ಇನ್ನೂ ಮೊದಲ ಪತ್ನಿ ದಿವ್ಯಾ ಭಾರತಿಯನ್ನು ಮರೆತಿಲ್ಲ ಎಂದು ಹೇಳುತ್ತಿದ್ದಾರೆ. "ಸಾಜಿದ್ ಬಳಿ ಇನ್ನೂ ಮೊದಲ ಪತ್ನಿ ದಿವ್ಯ ಭಾರತಿ ಬಳಸುತ್ತಿದ್ದ ಪರ್ಫ್ಯೂಮ್ ಇದೆ." ಎಂದು ಎರಡನೇ ಪತ್ನಿ ವಾರ್ದಾ ಬಹಿರಂಗ ಪಡಿಸಿದ್ದಾರೆ.

ಪತಿಯನ್ನು ದಿವ್ಯಾ ಭಾರತಿಯಿಂದ ದೂರ ಮಾಡಿಲ್ಲ
ದಿವ್ಯಾ ಭಾರತಿ ಕುಟುಂಬಕ್ಕೆ ಸಾಜಿದ್ ನಾಡಿಯದ್ವಾಲ ಇನ್ನೂಆತ್ಮೀಯರಾಗಿಯೇ ಇದ್ದಾರೆ. ಮಗಳು ಸಾವನ್ನಪ್ಪಿದ ಬಳಿಕವೂ ದಿವ್ಯಾ ಭಾರತಿ ಅಪ್ಪ-ಅಮ್ಮನಿಗೆ ಸಾಜಿದ್ ಮಗನಾಗಿದ್ದಾರೆ. ದಿವ್ಯಾ ಭಾರತಿ ತಂದೆ ಮತ್ತು ಸಹೋದರ ಕುನಾಲ್ ಇಂದಿಗೂ ಸಾಜಿದ್ ಸಹೋದರರಂತೆ ಮಾತನಾಡುತ್ತಾರೆ. ನಾನು ಕೂಡ ಸಾಜಿದ್‌ರನ್ನು ದಿವ್ಯಾ ಕುಟುಂಬದಿಂದ, ದಿವ್ಯಾ ಭಾರತಿಯ ನೆನೆಪಿನಿಂದ ದೂರವಿಡಲು ಯತ್ನಿಸಿಲ್ಲ. " ಎಂದು ಸಾಜಿದ್ ಪತ್ನಿ ವಾರ್ದಾ ಹೇಳಿದ್ದಾರೆ.

ದಿವ್ಯಾ ಭಾರತಿ ಒಳ್ಳೆಯವಳು
ದಿವ್ಯಾ ಭಾರತಿ ತುಂಬಾ ಸುಂದರವಾಗಿದ್ದಳು. ಆಕೆ ತುಂಬಾ ಒಳ್ಳೆಯವಳಾಗಿದ್ದಳು. ನಾವು ಅವಳನ್ನು ಇಂದಿಗೂ ಪ್ರೀತಿಸುತ್ತೇವೆ. ದಿವ್ಯಾ ಭಾರತಿ ನಮ್ಮ ಬದುಕಿನ ಒಂದು ಭಾಗ ಎಂದು ಸಾಜಿದ್ ಪತ್ನಿ ವಾರ್ದಾ ಈ ಹಿಂದೆಯೇ ಹೇಳಿದ್ದರು. 2000 ರಲ್ಲಿ ವಾರ್ದಾ ದಂಪತಿ ಇಬ್ಬರು ಗಂಡು ಮಕ್ಕಳಿದ್ದಾರೆ.

ದುರಂತ ಅಂತ್ಯ ಕಂಡ ದಿವ್ಯ ಭಾರತಿ
ದಿವ್ಯಾ ಭಾರತಿ ಈ ಜಗತ್ತಿನಲ್ಲಿ ಬಹಳ ಕಡಿಮೆ ಕಾಲ ಬದುಕಿದ್ದರೂ ಭಾರತದಾದ್ಯಂತ ಹೆಸರುವಾಸಿಯಾದ ನಟಿ. ನಟಿ ತೆಲುಗು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಾಲಿವುಡ್‌ಗೆ ಕಾಲಿಟ್ಟರು. ನಟಿ ಅನೇಕ ಪ್ರಸಿದ್ಧ ಬಾಲಿವುಡ್ ತಾರೆಯರ ಜೊತೆ ನಟಿಸಿದ್ದಾರೆ. ಆದರೆ 19 ವರ್ಷದ ನಟಿಯ ಸಾವು ನಿಗೂಢವಾಗಿಯೇ ಉಳಿದಿದೆ.


Click it and Unblock the Notifications











