'ರೈತರನ್ನು ಗೌರವಿಸುತ್ತೇನೆ' ಎಂದು ಹೇಳಿದ್ದಕ್ಕೂ ಟ್ರೋಲ್ ಆದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಬಾಲಿವುಡ್‌ನ ಖ್ಯಾತ ಮತ್ತು ಪ್ರಭಾವಿಗಳಲ್ಲಿ ಒಬ್ಬರು. ಸತತ ಬಾಕ್ಸಾಫೀಸ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಲ್ಮಾನ್ ಖಾನ್ ಕೂಡ ತಪ್ಪು ಎಸಗಿದ್ದಾರೆ. ಸುಶಾಂತ್‌ಗೆ ಬರಬೇಕಿದ್ದ ಅನೇಕ ಅವಕಾಶಗಳನ್ನು ಸಲ್ಮಾನ್ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

Recommended Video

ಶಿವಣ್ಣನ ಭೇಟಿ ಮಾಡ್ಬೇಕು ಅನ್ನೋದು ಅವನ ಕೊನೆ ಆಸೆ ಆಗಿತ್ತು | Shivanna | Filmibeat Kannada

ಈ ಆರೋಪಗಳಿಗೆ ಸಲ್ಮಾನ್ ಖಾನ್ ಇರುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ತಮ್ಮ ಫಾರ್ಮ್ ಹೌಸ್‌ನಲ್ಲಿ ಅಡ್ಡಾಡುತ್ತಾ ಕೃಷಿ ಮತ್ತು ರೈತರ ಬಗ್ಗೆ ಪೋಸ್ಟ್‌ಗಳನ್ನು ಹಾಕಲು ಆರಂಭಿಸಿದ್ದಾರೆ. ಮೂರು ದಿನಗಳ ಹಿಂದೆ ತಮ್ಮ ಫಾರ್ಮ್ ಹೌಸ್‌ನಲ್ಲಿ ನಡೆದುಕೊಂಡು ಹೋಗುವ ಫೋಟೊ ಹಾಕಿದ್ದ ಅವರು, ಮಂಗಳವಾರ ಮೈಕೈಗೆ ಕೆಸರು ಮೆತ್ತಿಕೊಂಡ ಫೋಟೊ ಹಂಚಿಕೊಂಡಿದ್ದಾರೆ. ಇದನ್ನು ಜನರು ಮನಬಂದಂತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ತಿನ್ನುವವರ ಹೆಸರು...

ತಿನ್ನುವವರ ಹೆಸರು...

ಕೆಲವು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಕೆಲವು ಗಿಡಗಳನ್ನು ಹಿಡಿದುಕೊಂಡಿದ್ದ ಸಲ್ಮಾನ್, ಪ್ರತಿ ಅಗುಳಿನಲ್ಲಿಯೂ ಅದನ್ನು ತಿನ್ನುವವರ ಹೆಸರು ಬರೆದಿರುತ್ತದೆ ಎಂಬ ನಾಣ್ಣುಡಿಯನ್ನು ಬರೆದಿದ್ದರು. ಜತೆಗೆ ಜೈ ಜವಾನ್! ಜೈ ಕಿಸಾನ್ ಎಂಬ ಘೋಷ ವಾಕ್ಯವನ್ನೂ ಬರೆದಿದ್ದರು.

ರೈತರನ್ನು ಗೌರವಿಸುತ್ತೇನೆ

ರೈತರನ್ನು ಗೌರವಿಸುತ್ತೇನೆ

ಮಂಗಳವಾರ ಮತ್ತೊಂದು ಪೋಸ್ಟ್ ಹಾಕಿರುವ ಅವರು, ಮೈಕೈ ತುಂಬಾ ಕೆಸರು ಬಳಿದುಕೊಂಡಿದ್ದಾರೆ. ಕೆಲಸ ಮಾಡಿ ಸುಸ್ತಾಗಿ ಕುಳಿತವರಂತೆ ಪೋಸ್ ನೀಡಿರುವ ಅವರು ಎಲ್ಲಾ ರೈತರನ್ನೂ ಗೌರವಿಸುತ್ತೇನೆ ಎಂದು ಬರೆದಿದ್ದಾರೆ. ಇದು ವಿಪರೀತ ಟ್ರೋಲ್‌ಗೆ ಒಳಗಾಗಿದೆ.

ರೈತರಾಗಿಸುವುದಿಲ್ಲ

ರೈತರಾಗಿಸುವುದಿಲ್ಲ

ನಿಮ್ಮ ದೇಹದ ಮೇಲೆ ಸ್ವಲ್ಪ ಮಣ್ಣು ಎಸೆದುಕೊಳ್ಳುವುದು ನಿಮ್ಮನ್ನು ರೈತನನ್ನಾಗಿ ಮಾಡುವುದಿಲ್ಲ. ಇದು ತೀರಾ ಕಳಪೆ ಮತ್ತು ತಾನು ದೊಡ್ಡ ಮನುಷ್ಯ ಎಂಬ ದರ್ಪ ಪ್ರದರ್ಶಿಸುವ ಮನೋಭಾವವನ್ನು ಸೂಚಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.

ನಾಟಕ ಸಾಕು ಮಾಡಿ!

ನಾಟಕ ಸಾಕು ಮಾಡಿ!

ಮಣ್ಣನ್ನು ನಿಮ್ಮ ಮುಖಕ್ಕೆ ಬಳಿದುಕೊಂಡಿದ್ದೀರಿ. ಆದರೆ ಕಾಲಿಗೆ ಹಚ್ಚಿಕೊಳ್ಳುವುದನ್ನು ಮರೆತಿದ್ದೀರಲ್ಲ? ಓವರ್ ಆಕ್ಟಿಂಗ್ ಮಾಡುವುದನ್ನು ನಿಲ್ಲಿಸಿ ಸಾಕು ಎಂದು ಅನೇಕರು, ಇದು ಸಲ್ಮಾನ್ ಖಾನ್ ತಾನು ಮಹಾನ್ ಮಾನವೀಯ ವ್ಯಕ್ತಿ ಎಂದು ತೋರಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಟೀಕಿಸಿದ್ದಾರೆ.

ಫುಟ್ಪಾತ್ ಮೇಲಿರುವವರನ್ನೂ ಗೌರವಿಸಿ

ಫುಟ್ಪಾತ್ ಮೇಲಿರುವವರನ್ನೂ ಗೌರವಿಸಿ

ಫುಟ್ ಪಾತ್ ಮೇಲೆ ಮಲಗುವ ಜನರನ್ನೂ ಗೌರವಿಸಿ ಎಂದು ಕೆಲವರು ಸಲ್ಮಾನ್ ಖಾನ್ ಅವರ ಹಿಟ್ ಆಂಡ್ ರನ್ ಕೇಸ್ಅನ್ನು ನೆನಪಿಸಿದ್ದಾರೆ. ಅದರ ಜತೆಗೆ ಕೃಷ್ಣಮೃಗವನ್ನೂ ಗೌರವಿಸಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ.

More from Filmibeat

English summary
Netizens slams Salman Khan after he posting a picture with mud to his body and saying respect to all the farmers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X