Salman Khan 59th Birthday: ಬಾಲಿವುಡ್ ಭಾಯ್‌ಜಾನ್ ಜೇಬಿಗೆ ಎಲ್ಲೆಲ್ಲಿಂದ ಎಷ್ಟೆಷ್ಟು ಕೋಟಿ ಬರುತ್ತೆ?

ಬಾಲಿವುಡ್‌ ಭಾಯ್‌ಜಾನ್ ಸಲ್ಮಾನ್ ಖಾನ್‌ಗೆ ಇಂದು (ಡಿಸೆಂಬರ್ 27) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಸಲ್ಮಾನ್‌ ಖಾನ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ. ಬಾಲಿವುಡ್‌ ಮಂದಿ ಈ ಸೂಪರ್‌ಸ್ಟಾರ್ ಕೂಡ ಬರ್ತ್‌ಡೇ ಮೂಡ್‌ನಲ್ಲಿ ಇದ್ದಾರೆ.

59ನೇ ವರ್ಷದ ಹುಟ್ಟುಹಬ್ಬದಲ್ಲೂ ತನ್ನ ಮಾಜಿ ಗೆಳತಿಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ತಾಕತ್ತು ಇರುವ ನಟ. ನಿನ್ನೆ(ಡಿಸೆಂಬರ್ 26) ಮಧ್ಯರಾತ್ರಿಯಿಂದಲೇ ಸಲ್ಮಾನ್ ಖಾನ್ ಬರ್ತ್‌ಡೇ ರಂಗೇರಿದೆ. ಮಾಜಿ ಗೆಳತಿಯರಾದ ಸಂಗೀತಾ ಬಿಜ್ಲಾನಿ, ಲೂಲಿಯಾ ವೆಂಥೂರ್ ಸೇರಿದಂತೆ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Salman Khan 59th Birthday here is details about Business ventures net worth and films

ಸಲ್ಮಾನ್ ಖಾನ್ ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬ. ಕೇವಲ ಸಿನಿಮಾ ನಟನಾಗಿ ಅಷ್ಟೇ ಗುರುತಿಸಿಕೊಂಡಿಲ್ಲ. ಬದಲಾಗಿ ಉದ್ಯಮಿಯಾಗಿಯೂ ಯಶಸ್ಸು ಕಂಡಿದ್ದಾರೆ. ಹಾಗೇ ಸೋಶಿಯಲ್ ವರ್ಕ್‌ಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಜಾಹೀರಾತು, ಬಿಗ್ ಬಾಸ್ ನಿರೂಪಣೆ ಅಂತ ಆದಾಯದ ಮೂಲವನ್ನು ಬಿಟ್ಟಿಲ್ಲ. ಹಾಗಿದ್ದರೆ, ಸಲ್ಮಾನ್ ಖಾನ್ ಬಳಿ ಇರುವ ಆಸ್ತಿ ಎಷ್ಟು? ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಲ್ಮಾನ್ ಖಾನ್ ಒಟ್ಟು ಆಸ್ತಿ ಎಷ್ಟು?

ಬಾಲಿವುಡ್ ನಟ ಸಲ್ಮಾನ್ ಖಾನ್ ಒಂದೊಂದು ಸಿನಿಮಾಗೂ ಕಮ್ಮಿ ಅಂದರೂ 100 ಕೋಟಿ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಸಿನಿಮಾದ ಗಳಿಕೆಯಲ್ಲಿ ಇಷ್ಟು ಪರ್ಸೆಂಟ್ ಕೂಡ ಪಡೆಯುತ್ತಾರೆ ಅನ್ನೋ ವರದಿಯಿದೆ. ಇದರೊಂದಿಗೆ ಜಾಹೀರಾತು, ನಿರೂಪಣೆ, ವ್ಯಾಪಾರ ಅಂತ ಸಲ್ಮಾನ್ ಖಾನ್ ಬಳಿಕ 2900 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ಮಾಧ್ಯಮಗಳಲ್ಲ ವರದಿಗಳಾಗಿದೆ. ಹೀಗಾಗಿ ಸಲ್ಮಾನ್ ಖಾನ್ ಬಾಲಿವುಡ್‌ನ ಶ್ರೀಮಂತ ನಟ ಎಂದು ನಿಸ್ಸಂದೇಹವಾಗಿ ಹೇಳಬಹುದು.

Salman Khan 59th Birthday here is details about Business ventures net worth and films

'ಬೀಯಿಂಗ್ ಹ್ಯೂಮನ್' ಬ್ಯುಸಿನೆಸ್

2013ರಲ್ಲಿ ಸಲ್ಮಾನ್ ಖಾನ್ ಬೀಯಿಂಗ್ ಹ್ಯೂಮನ್ ಅನ್ನುವ ಫ್ಯಾಷನ್ ಬ್ರ್ಯಾಂಡ್ ಅನ್ನು ಆರಂಭಿಸಿದ್ದರು. ಆರಂಭದ ದಿನಗಳಲ್ಲಿ ಈ ಬ್ರ್ಯಾಂಡ್‌ಗೆ ಉತ್ತರ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಭಾರತದ ಜೊತೆಗೆ ಯೂರೋಪ್ ಹಾಗೂ ಬೇರೆ ಬೇರೆ ದೇಶಗಳಿಗೂ ಆ ವ್ಯಾಪಾರವನ್ನು ವಿಸ್ತರಿಸಿದ್ದರು. ಇದರಿಂದಲ್ಲೂ ನೂರಾರು ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ, 2024ರಲ್ಲಿ ಈ ಬ್ರ್ಯಾಂಡ್‌ಗೆ ನಷ್ಟ ಆಗಿದೆ ಅಂತನೂ ವರದಿಯಾಗಿದೆ. ಆದರೆ, ಮೊತ್ತ ಎಷ್ಟು ಅನ್ನೋದು ರಿವೀಲ್ ಆಗಿಲ್ಲ.

'ಬೀಯಿಂಗ್ ಸ್ಟ್ರಾಂಗ್'

ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಬ್ರ್ಯಾಂಡ್ ಜನಪ್ರಿಯತೆ ಗಳಿಸಿದೆ. ಈ ಬೆನ್ನಲ್ಲೇ 2020ರಲ್ಲಿ ಬೀಯಿಂಗ್ ಸ್ಟ್ರಾಂಗ್ ಅನ್ನುವ ಬ್ರ್ಯಾಂಡ್ ಅನ್ನೂ ಆರಂಭ ಮಾಡಿದ್ದಾರೆ. ಫಿಟ್ನೆಸ್‌ಗೆ ಸಂಬಂಧಿಸಿದ ಉದ್ಯಮವಿದು. ಈ ಮೂಲಕ ಜಿಮ್‌ಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಈ ಉದ್ಯಮ ಕೂಡ ನಿಧಾನವಾಗಿ ಬೆಳೆಯುತ್ತಿದೆ.

ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ

ಸಲ್ಮಾನ್ ಖಾನ್ ಸ್ಟಾರ್ಟ್‌ಅಪ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಟ್ರ್ಯಾವೆಲ್ ಕಂಪನಿ ಯಾತ್ರಾ.ಕಾಮ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗೇ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ 'ಚಿಂಗಾರಿ'ಯಲ್ಲಿಯೂ 13 ಮಿಲಿಯನ್ ಡಾಲರ್‌ನಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆಂದು ಸಿಎನ್‌ಬಿಸಿ ಟಿವಿ18 ತನ್ನ ವರದಿಯಲ್ಲಿ ಹೇಳಿದೆ.

ನಿರ್ಮಾಣ ಸಂಸ್ಥೆ

ಸಲ್ಮಾನ್ ಖಾನ್ 2011ರಲ್ಲಿಯೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್‌ನಿಂದ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 'ಭಜರಂಗಿ ಭಾಯ್‌ಜಾನ್', 'ರೇಸ್ 3' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಎಲ್ಲೆಲ್ಲಿ ಆಸ್ತಿಯಿದೆ?

ಮುಂಬೈನ ದುಬಾರಿ ಏರಿಯಾ ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಇದೆ. ಇದರ ಬೆಲೆ 100 ರಿಂದ 150 ಕೋಟಿ ರೂಪಾಯಿ. ತಂಗಿ ಅರ್ಪಿತಾ ಹೆಸರಿನಲ್ಲಿ 150 ಎಕರೆ ಫಾರ್ಮ್ ಹೌಸ್ ಹೊಂದಿದ್ದಾರೆ. ಮುಂಬೈನ ಬೀಚ್‌ ಸೈಡ್‌ನಲ್ಲಿಯೇ ದುಬಾರಿ ಬೆಲೆಯ ಬಂಗಲೆ ಇದೆ. ಇದರ ಬೆಲೆ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹೀಗೆ ಇನ್ನೂ ಹಲವು ಕಡೆಗಳಲ್ಲಿ ಸಲ್ಮಾನ್ ಖಾನ್ ಹೂಡಿಕೆ ಮಾಡಿದ್ದಾರೆ.

More from Filmibeat

English summary
Salman Khan 59th Birthday here is details about Business ventures, net worth and films;
Read more about: salman khan net worth business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X