Don't Miss!
- News
Tulu Language : ಭಾಷೆ ರಾಜ್ಯದ 2ನೇ ಅಧಿಕೃತ ಭಾಷೆ ಸ್ಥಾನಮಾನ, ವರದಿ ನೀಡಲು ಸಮಿತಿ ರಚಿಸಿದ ಸರ್ಕಾರ
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಲೀಗ್ ಕ್ರಿಕೆಟ್ನಲ್ಲಿ ಆರ್ಭಟಿಸುತ್ತಿದ್ದಾರೆ ಈ 5 ಕ್ರಿಕೆಟಿಗರು!
- Technology
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Automobiles
ಅತಿಹೆಚ್ಚು ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ಜಿ ಲಾಂಚ್
- Lifestyle
Horoscope Today 31 Jan 2023: ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದ ಬಾಲಿವುಡ್ ತಾರೆಯರು: ಶೇ.90 ರಷ್ಟು ಯಶಸ್ಸು!
2022 ದಕ್ಷಿಣ ಭಾರತದ ಚಿತ್ರರಂಗಕ್ಕೆ ಮರೆಯಲಾಗದ ವರ್ಷ. ನಾಲ್ಕು ಭಾಷೆಯ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅದರಲ್ಲೂ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಕಿಕ್ ಕೊಟ್ಟಿದೆ.
ಇನ್ನೊಂದು ಕಡೆ ಬಾಲಿವುಡ್ ಸಿನಿಮಾಗಳಿಗೆ ಈ ವರ್ಷವೂ ಕೂಡ ನಿರಾಸೆಯನ್ನುಂಟು ಮಾಡಿದೆ. ಹಿಂದಿ ಸಿನಿಮಾಗಳು ಬಾಕ್ಸಾಪೀಸ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆಯಷ್ಟು ಮಾತ್ರ. ಇದೇ ವೇಳೆ ಬಾಲಿವುಡ್ ಸ್ಟಾರ್ ನಟರು ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ಗೆಲುವು ಗಿಟ್ಟಿಸಿಕೊಂಡಿದ್ದಾರೆ. ಈ ವರ್ಷ ಉತ್ತರದಿಂದ ದಕ್ಷಿಣಕ್ಕೆ ಬಂದು ಗೆದ್ದವರ ಪಟ್ಟಿ ದೊಡ್ಡದಿದೆ.
ನಿಮ್ಮ
ಸಿನಿಮಾದಲ್ಲಿ
ಅವಕಾಶ
ಕೊಡಿ:
ರಿಷಬ್ಗೆ
ಮನವಿ
ಮಾಡಿದ
ಬಾಲಿವುಡ್
ಸ್ಟಾರ್

ಐಶ್ವರ್ಯಾ ರೈ ಬಚ್ಚನ್- ಪೊನ್ನಿಯನ್ ಸೆಲ್ವನ್
ಐಶ್ವರ್ಯಾ ರೈ ಬಚ್ಚನ್‌ಗೆ ದಕ್ಷಿಣ ಭಾರತದ ಹೊಸತೇನೂ ಅಲ್ಲ. ಇದಕ್ಕೂ ಮುನ್ನ ಐಶ್ವರ್ಯಾ ರೈ 'ಇರುವರ್' ಹಾಗೂ 'ಎಂದಿರನ್' ಸಿನಿಮಾದಲ್ಲಿ ನಟಿಸಿ ಗೆದ್ದಿದ್ದರು. ಬಹಳ ದಿನಗಳ ಬಳಿಕ ಐಶ್ವರ್ಯಾ ರೈ ಮತ್ತೆ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದುವೇ 'ಪೊನ್ನಿಯನ್ ಸೆಲ್ವನ್'. ನಂದಿನಿ ಹಾಗೂ ಮಂದಾಕಿನಿ ದೇವಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಕಲೆ ಹಾಕಿತ್ತು.

ಸಲ್ಮಾನ್ ಖಾನ್ - ಗಾಡ್ ಫಾದರ್
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ 'ಗಾಡ್ ಫಾದರ್' ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂ ರಿಮೇಕ್ 'ಲೂಸಿಫರ್' ತೆಲುಗಿಗೆ ರಿಮೇಕ್ ಆಗಿತ್ತು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮೆಗಾಸ್ಟಾರ್ ಚಿರಂಜೀವಿಯ ಆತ್ಮೀಯ ಸ್ನೇಹಿತನಾಗಿ ಕಾಣಿಸಿಕೊಂಡಿದ್ದರು.

ಅಜಯ್ ದೇವಗನ್, ಆಲಿಯಾ ಭಟ್-RRR
ಬಾಲಿವುಡ್‌ನ ಇಬ್ಬರು ಸ್ಟಾರ್ ನಟರು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರಿಗೆ ಈ ವರ್ಷ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಎರಡರಲ್ಲೂ ಸಕ್ಸಸ್ ಸಿಕ್ಕಿದೆ.

ಅನುಪಮ್ ಖೇರ್, ಅನನ್ಯಾ ಪಾಂಡೆ
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟರ ಸಾಲಿನಲ್ಲಿ ಇನ್ನಿಬ್ಬರು ತೆಲುಗು ನಟರೆಂದರೆ, ಅನುಪಮ್ ಖೇರ್ ಹಾಗೂ ಅನನ್ಯಾ ಪಾಂಡೆ. ಈ ವರ್ಷ ಸರ್ಪ್ರೈಸ್ ಹಿಟ್ ಕೊಟ್ಟ 'ಕಾರ್ತಿಕೇಯ 2' ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸಿದ್ರೆ, 'ಲೈಗರ್' ಸಿನಿಮಾದಲ್ಲಿ ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಕಂಡಿದ್ದರು. ಆದರೆ, ಅನನ್ಯಾ ಪಾಂಡೆಗೆ ಯಶಸ್ಸು ಸಿಗಲಿಲ್ಲ.

ಕನ್ನಡಕ್ಕೂ ಬಂದ ಬಾಲಿವುಡ್ ನಟರು
ಬಾಲಿವುಡ್ ನಟರು ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಕೆಜಿಎಫ್ 2' ಮೂಲಕ ಕನ್ನಡ ಸಿನಿಮಾಗೆ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದರು. ಅಧೀರನಾಗಿ ಸಂಜಯ್ ದತ್ ಕನ್ನಡಿಗರ ಮನಗೆದ್ದಿದ್ದರು. ಇವರೊಂದಿಗೆ ಬಾಲಿವುಡ್ ನಟಿ ರವೀನಾ ಟಂಡನ್ ಬಹಳ ದಿನಗಳ ಬಳಿಕ 'ಕೆಜಿಎಫ್ 2' ಸಿನಿಮಾ ಮೂಲಕ ಕನ್ನಡಕ್ಕೆ ಬಂದಿದ್ದರು.

ವಿವೇಕ್ ಓಬೆರಾಯ್, ಹುಮಾ ಖುರೇಶಿ
ಈ ವರ್ಷ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡ ಮತ್ತಿಬ್ಬರು ಬಾಲಿವುಡ್ ನಟರೆಂದರೆ, ವಿವೇಕ್ ಓಬೆರಾಯ್ ಹಾಗೂ ಹುಮಾ ಖರೇಶಿ. ಪೃಥ್ವಿರಾಜ್ ಸುಕುಮಾರ್ ಸಿನಿಮಾ 'ಕಡುವ'ದಲ್ಲಿ ವಿವೇಕ್ ಓಬೆರಾಯ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಬಾಲಿವುಡ್ ನಟಿ ಹುಮಾ ಖುರೇಶಿ ಕಾಲಿವುಡ್ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಸಿನಿಮಾ 'ವಲಿಮೈ'ನಲ್ಲೂ ನಟಿಸಿದ್ದಾರೆ. ಈ ಅನನ್ಯಾ ಪಾಂಡೆ ಬಿಟ್ಟು ಉಳಿದ ಎಲ್ಲಾ ಬಾಲಿವುಡ್ ನಟನಟಿಯರಿಗೆ ಸಕ್ಸಸ್ ಸಿಕ್ಕಿದೆ.