»   » 'ಎಬಿಸಿಡಿ 3'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಸಲ್ಮಾನ್-ಜಾಕ್ವೆಲಿನ್

'ಎಬಿಸಿಡಿ 3'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಸಲ್ಮಾನ್-ಜಾಕ್ವೆಲಿನ್

Posted By:
Subscribe to Filmibeat Kannada

ನಿರ್ದೇಶಕ ರೆಮೋ ಡಿಸೋಜಾ ತಮ್ಮ ನಿರ್ದೇಶನದ 'ಎಬಿಸಿಡಿ' ಮತ್ತು 'ಎಬಿಸಿಡಿ 2' ಚಿತ್ರಗಳ ಮೂಲಕ ಸಿನಿಮಾ ವೀಕ್ಷಕರ ಮನದಲ್ಲಿ ಡ್ಯಾನ್ಸ್ ಬಗ್ಗೆ ಹೊಸ ಅಲೋಚನೆ ಮತ್ತು ಅತ್ಯಧಿಕ ಕ್ರೇಜ್ ಸೃಷ್ಟಿಸಿದವರು. ಅಲ್ಲದೇ ಅವರ ಈ ಎರಡು ಚಿತ್ರಗಳು ಸಹ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದ್ದವು.

ರೆಮೋ ಡಿಸೋಜಾ ತಮ್ಮ 'ಎಬಿಸಿಡಿ' ಸೀರೀಸ್‌ನ ಎರಡು ಚಿತ್ರಗಳು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈಗ 'ಎಬಿಸಿಡಿ 3' ಚಿತ್ರ ನಿರ್ಮಿಸಲು ಮುಂದಾಗಿದ್ದಾರಂತೆ. ಈ ಚಿತ್ರಕ್ಕಾಗಿ ಈಗಾಗಲೇ ನಟ-ನಟಿಯನ್ನು ಫೈನಲೈಸ್ ಮಾಡಿದ್ದು ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮತ್ತೆ ತೆರೆಮೇಲೆ ಒಂದಾಗಲಿದ್ದಾರಂತೆ. ಮುಂದೆ ಓದಿರಿ..

'ಎಬಿಸಿಡಿ 3'ನಲ್ಲಿ 'ಕಿಕ್' ಜೋಡಿ

2014 ರಲ್ಲಿ ತೆರೆಕಂಡ 'ಕಿಕ್ ಚಿತ್ರದ ಜೋಡಿ 'ಎಬಿಸಿಡಿ 3' ಚಿತ್ರಕ್ಕಾಗಿ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದೆ. 'ಕಿಕ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೆ ಸಲ್ಲು ಜೊತೆ ಅಭಿನಯಿಸಲಿದ್ದಾರೆ.[ಸಲ್ಮಾನ್ ಖಾನ್ ಗೆ ಈ ಕೆಟ್ಟ ಚಾಳಿಯೂ ಇದೆ! ವಿಡಿಯೋ ವೈರಲ್]

ಡ್ಯಾನ್ಸ್ ಕುರಿತ ಚಿತ್ರ

ಅಂದಹಾಗೆ ನಿರ್ದೇಶಕ ರೆಮೋ ಡಿಸೋಜಾ ರವರ ಈ ಹಿಂದಿನ 'ಎಬಿಸಿಡಿ' ಮತ್ತು 'ಎಬಿಸಿಡಿ 2' ಚಿತ್ರದಂತೆ 'ಎಬಿಸಿಡಿ 3' ಸಹ ಡ್ಯಾನ್ಸ್ ಕುರಿತ ಚಿತ್ರವಾಗಿರಲಿದೆ.

'ಟೈಗರ್ ಜಿಂದಾ ಹೈ' ನಂತರ 'ಎಬಿಸಿಡಿ 3'

ಸಲ್ಮಾನ್ ಖಾನ್ ಪ್ರಸ್ತುತ 'ಟೈಗರ್ ಜಿಂದಾ ಹೈ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದು, ಇದು ಮುಗಿದ ನಂತರ ರೆಮೋ ಡಿಸೋಜಾ 'ಎಬಿಸಿಡಿ 3' ಚಿತ್ರವನ್ನು ಶುರುಮಾಡಲಿದ್ದಾರಂತೆ.

ತಂದೆ ಪಾತ್ರದಲ್ಲಿ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ರವರು 'ಎಬಿಸಿಡಿ 3' ಚಿತ್ರದಲ್ಲಿ ಡ್ಯಾನ್ಸ್ ಬಗ್ಗೆ ಹೆಚ್ಚು ಆಸಕ್ತಿ ಇರುವ 13 ವರ್ಷದ ಹುಡುಗಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಲ್ಲದೇ ಚಿತ್ರವನ್ನು 2018 ರ ರಂಜಾನ್ ಹಬ್ಬದ ವೇಳೆಗೆ ಬಿಡುಗಡೆ ಮಾಡುವ ಪ್ಲಾನ್ ಇದೆಯಂತೆ.

'ಎಬಿಸಿಡಿ' ಮತ್ತು 'ಎಬಿಸಿಡಿ 2'

ರೆಮೋ ಡಿಸೋಜಾ ರವರು ಆಕ್ಷನ್ ಹೇಳಿದ್ದ 'ಎಬಿಸಿಡಿ' 2013 ಫೆಬ್ರವರಿಯಲ್ಲಿ ಮತ್ತು 'ಎಬಿಸಿಡಿ 2' ಚಿತ್ರ 2015 ಜೂನ್ ತಿಂಗಳಲ್ಲಿ ಬಿಡುಗಡೆ ಆಗಿದ್ದವು. ಈ ಎರಡು ಚಿತ್ರಗಳಲ್ಲಿ ಎಲ್ಲುಬಿಲ್ಲದ ಡ್ಯಾನ್ಸರ್ ಎಂದೇ ಪ್ರಖ್ಯಾತರಾದ ನಿರ್ದೇಶಕ, ನಟ ಮತ್ತು ಡ್ಯಾನ್ಸ್ ಕೊರಿಯೋಗ್ರಫರ್ ಪ್ರಭುದೇವ್ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

English summary
Bollywood Actor Salman Khan and Actress Jacqueline Fernandez confirmed for 'ABCD 3' Movie. Salman Khan and Jacqueline Fernandez previously shared screen in 'Kick' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada