For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಗೆ ಈ ಕೆಟ್ಟ ಚಾಳಿಯೂ ಇದೆ! ವಿಡಿಯೋ ವೈರಲ್

  By Suneel
  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಸ್ತುತ 'ಟ್ಯೂಬ್‌ಲೈಟ್' ಚಿತ್ರದ ಪ್ರಮೋಷನ್ ನಲ್ಲಿ ಬಿಜಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮಾಧ್ಯಮಗಳ ಎದುರೇ ಅವರ ಕೆಟ್ಟ ಚಾಳಿಯೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.[ಸಲ್ಮಾನ್ ಖಾನ್ ಹ್ಯಾಪಿ ಆಗಿರದ 'ಟ್ಯೂಬ್‌ಲೈಟ್' ಟ್ರೈಲರ್]

  ಮಾಧ್ಯಮ ಮಿತ್ರರೇ ಆಗಲಿ ಅಥವಾ ಯಾರೇ ಎದುರು ಇರಲಿ ತಮ್ಮ ಆಟಿಟ್ಯೂಡ್ ಬಗ್ಗೆ ಕೇರ್ ಮಾಡುವುದಿಲ್ಲ ಸಲ್ಮಾನ್ ಖಾನ್. ಅಂತೆಯೇ ಇತ್ತೀಚೆಗೆ 'ಟ್ಯೂಬ್‌ಲೈಟ್' ಚಿತ್ರದ ಈವೆಂಟ್ ಒಂದರಲ್ಲಿ ಕುಳಿತಿರುವಾಗ ಅವರ ಜೀನ್ಸ್ ಪ್ಯಾಂಟ್ ದಾರವನ್ನು ಕಿತ್ತು ಬಾಯಲ್ಲಿ ಹಾಕಿಕೊಂಡು ಚೂಯಿಂಗ್ ಗಮ್ ರೀತಿ ಅಗೆದು ನಂತರ ಉಗಿದರು. ಅದು ಕೇವಲ ಒಂದು ಬಾರಿ ಅಲ್ಲ ಎರಡು ಬಾರಿ ಅದೇ ರೀತಿ ಮಾಡಿದ್ದಾರೆ. ಇದೇ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು ಸಲ್ಲು ಬಗೆಗಿನ ಹಾಟ್ ಟಾಪಿಕ್ ಆಗಿದೆ. ವಿಡಿಯೋ ನೋಡಿದ ಹಲವರು ಟ್ವಿಟ್ಟರ್ ನಲ್ಲಿ ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ, ಆ ವಿಡಿಯೋ ಯಾವುದು ಎಂಬುದರ ಡೀಟೇಲ್ಸ್‌ಗಾಗಿ ಮುಂದೆ ಓದಿ..

  ಹೊಸ ಸಂಶೋಧನೆ

  ಹೊಸ ಸಂಶೋಧನೆ

  'ಸಲ್ಮಾನ್ ಖಾನ್ ರವರು ತಿನ್ನಬಹುದಾದ ಹೊಸ ರೀತಿಯ ಜೀನ್ಸ್ ಪ್ಯಾಂಟ್ ಸಂಶೋಧನೆ ಮಾಡಿದ್ದಾರೆ' - ಶಿಖರ್ ಅರೋರ

  ಭಾರತದ ಟ್ವಿಟ್ಟರ್ ನಲ್ಲಿ ಯೂಟರ್ನ್

  ಭಾರತದ ಟ್ವಿಟ್ಟರ್ ನಲ್ಲಿ ಯೂಟರ್ನ್

  "ಭಾರತದ ಟ್ವಿಟ್ಟರ್ ನಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ಅದೇನಂದ್ರೆ ಬೀಫ್ ತಿನ್ನುವ ಟಾಪಿಕ್ ಬದಲು ಈಗ ಸಲ್ಮಾನ್ ಖಾನ್ ಜೀನ್ಸ್ ಪ್ಯಾಂಟ್ ದಾರವನ್ನು ತಿನ್ನುವುದು ಟ್ರೆಂಡಿಂಗ್ ನಲ್ಲಿದೆ' -ಡಿಜೆ

  ನಕ್ಕು ನಕ್ಕು ಸುಸ್ತಾದ ತಾನ್ವಿ

  ನಕ್ಕು ನಕ್ಕು ಸುಸ್ತಾದ ತಾನ್ವಿ

  'ಬೀಯಿಂಗ್ ಹ್ಯೂಮನ್... ತಿನ್ನುವ ಜೀನ್ಸ್ ಲಾಂಚ್ ಮಾಡಿದ್ದಾರೆ. ಸಲ್ಮಾನ್ ಖಾನ್ ತಮ್ಮ ಜೀನ್ಸ್ ಹರಿದು ತಿನ್ನುವ ವಿಡಿಯೋ ನೋಡಿ ನಗುವುದನ್ನು ತಡೆಯಲಾಗುತ್ತಿಲ್ಲ. ವಿಡಿಯೋ ಸೂಪರ್' - ತಾನ್ವಿ ಜೈನ್

  ಸ್ವಚ್ಛ ಭಾರತ್ ಅಭಿಯಾನ

  ಸ್ವಚ್ಛ ಭಾರತ್ ಅಭಿಯಾನ

  "ಟ್ಯೂಬ್‌ಲೈಟ್ ಈವೆಂಟ್ ಸ್ವಚ್ಛ ಭಾರತ್ ಅಭಿಯಾನ. ಹಾಗಾಗಿ ಸಲ್ಮಾನ್ ಖಾನ್ ಹರಿದ ಜೀನ್ಸ್ ದಾರವನ್ನು ನೆಲದ ಮೇಲೆ ಎಸೆಯುತ್ತಿಲ್ಲ" - The Rising

  ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ...

  ವೈರಲ್ ಆಗಿರುವ ಜೀನ್ಸ್ ದಾರ ತಿನ್ನುವ ವಿಡಿಯೋದಲ್ಲಿ ಸಲ್ಮಾನ್ ಖಾನ್ 'ಟ್ಯೂಬ್‌ಲೈಟ್' ಚಿತ್ರದಲ್ಲಿ ಕಾಣಿಸಿಕೊಂಡಿರುವಷ್ಟೇ ಮುಗ್ದರಾಗಿ ಕಾಣುತ್ತಾರೆ. ಅವರ ಆ ವಿಡಿಯೋ ನೋಡಿ.

  'ಟ್ಯೂಬ್‌ಲೈಟ್' ರಿಲೀಸ್ ಯಾವಾಗ?

  'ಟ್ಯೂಬ್‌ಲೈಟ್' ರಿಲೀಸ್ ಯಾವಾಗ?

  ಸಲ್ಮಾನ್ ಖಾನ್ ಗೆ ಚೀನಾ ಮೂಲದ ನಟಿ Zhu Zhu ಜೊತೆಯಾಗಿ ಅಭಿನಯಿಸಿರುವ 'ಟ್ಯೂಬ್‌ಲೈಟ್' ಚಿತ್ರ ಜೂನ್ 23 ರಂದು ಬಿಡುಗಡೆ ಆಗಲಿದೆ. ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Bollywood Actor Salman Khan ‘eating’ his own jeans in a event, that video now breaking breaking the Internet!.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X