ಲಾರೆನ್ಸ್ ಬಿಷ್ಟೋಯಿ ಜೀವ ಬೆದರಿಕೆ.. ಸಲ್ಲುಗಾಗಿ ದೇಶದಿಂದ ಬಂತು ಬುಲೆಟ್ ಪ್ರೂಫ್ ಕಾರು: ಬೆಲೆ ಎಷ್ಟು?
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ನಟಿಸಿರೋ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಸಿನಿಮಾ ನೋಡಲು ಕಾಯುತ್ತಿರೋ ಅಭಿಮಾನಿಗಳಿಗಾಗಿ ಸ್ಪೆಷಲ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಅದ್ರೀಗ ಬಾಲಿವುಡ್ ಸ್ಟಾರ್ ನಟ ಅವರ ಹೊಚ್ಚ ಹೊಸ ಕಾರಿನಿಂದ ಸುದ್ದಿಯಲ್ಲಿದ್ದಾರೆ.
ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಹಿಂದೆ ಮಾಡಿಕೊಂಡ ವಿವಾದಗಳು ಬೆನ್ನು ಬಿಡದೆ ಕಾಡುತ್ತಿವೆ. ಇದರಿಂದ ಸಲ್ಮಾನ್ ಖಾನ್ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಕೆಲವು ವರ್ಷಗಳಿಂದ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯಿ ಸಲ್ಮಾನ್ ಖಾನ್‌ಗೆ ಜೀವನ ಬೆದರಿಕೆ ಹಾಕುತ್ತಲೇ ಇದ್ದಾನೆ. ಕೆಲವು ದಿನಗಳ ಹಿಂದಷ್ಟೇ ಮತ್ತೆ ಪ್ರಾಣ ಬೆದರಿಕೆ ಹಾಕಿದ್ದ. ಈ ಬೆನ್ನಲ್ಲೇ ಸಲ್ಮಾನ್ ಖಾನ್ ಹೊಚ್ಚ ಹೊಸ ಬುಲೆಟ್‌ಪ್ರೂಫ್ ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಕಲ್ಪನೆ ಮಾಡಿಕೊಂಡಿದ್ದಕ್ಕಿಂತಲೂ ದುಬಾರಿ.
ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಗ್ಯಾರೇಜ್ ಮತ್ತೊಂದು ಎಸ್‌ಯುವಿ ಕಾರು ಸೇರ್ಪಡೆಯಾಗಿದೆ. ಹಾಗಂತ ಇದು ಮಾಮೂಲಿ ಕಾರು ಅಲ್ಲ. ಈ ಬಾರಿ ಸಲ್ಮಾನ್ ಖಾನ್ ಖರೀದಿಸಿದ್ದು ಸಾಮಾನ್ಯ ಕಾರಲ್ಲ. ಬುಲೆಟ್ ಪ್ರೂಫ್ ಕಾರು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯಿ ಜೀವ ಬೆದರಿಕೆ ಬೆನ್ನಲ್ಲೇ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರನ್ನು ಖರೀದಿ ಮಾಡಿದ್ದಾರೆ.
ಮುಂಬೈನ ಸಲ್ಮಾನ್ ಖಾನ್ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ಗೆ ಇದೇ ಬುಲೆಟ್ ಪ್ರೂಫ್ ಕಾರಿನಲ್ಲಿ ಆಗಮಿಸಿದ್ದರು. ಅಲ್ಲಿಯೇ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ ಅನಾವರಣ ಆಗಿದೆ. ಈ ಮೂಲಕ ಗ್ಯಾಂಗ್‌ಸ್ಟರ್ ಬೆದರಿಕೆಯಿಂದ ರಕ್ಷಣೆ ಪಡೆಯಲು ಈ ಕಾರನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಬುಲೆಟ್ ಪ್ರೂಫ್ ಕಾರಿನ ಬೆಲೆ ಏನು?
ಸಲ್ಮಾನ್ ಖಾನ್ ಬಳಿ ಟೊಯೊಟಾ ಲಾಂಡ್ ಕ್ರೂಸರ್ ಎಲ್‌ಸಿ200 ಬುಲೆಟ್ ಪ್ರೂಫ್ ಕಾರು ಇತ್ತು. ಅದರ ಬದಲಾಗಿ ಈಗ ನಿಸ್ಸಾನ್ ಬುಲೆಟ್ ಪ್ರೂಫ್ ಗಾಡಿಯನ್ನು ಖರೀದಿ ಮಾಡಿದ್ದಾರೆ ಎಂದು ಹೆಚ್‌ಟಿ ವರದಿ ಮಾಡಿದೆ. ಸದ್ಯ ನಿಸ್ಸಾನ್ ಬುಲೆಟ್ ಪ್ರೂಫ್ ಕಾರನ್ನು ಭಾರತದಲ್ಲಿ ಲಭ್ಯವಿಲ್ಲ. ಹೀಗಾಗಿ ವಿದೇಶಿದಿಂದ ಆಮದು ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಿಸ್ಸಾನ್ ಬುಲೆಟ್ ಪ್ರೂಫ್ ಕಾರು ಎರಡು ಫೀಚರ್ ಹೊತ್ತು ಬರಲಿದೆ. ಬಿ6 ಹಾಗೂ ಬಿ7 ಲೆವೆಲ್ ಪ್ರೊಟೆಕ್ಷನ್ ಇರಲಿದೆ. ಬಿ6 ಪ್ರೊಟೆಕ್ಷನ್‌ನಲ್ಲಿ 41ಎಂಎಂ ದಪ್ಪವಿರುವ ಗಾಜನ್ನು ಬಳಸಿರುತ್ತಾರೆ. ಅದೇ ಬಿ7ನಲ್ಲಿ 78ಎಂಎಂ ದಪ್ಪವಿರುವ ಗಾಜನ್ನು ಬಳಸುತ್ತಾರೆ. ಹೀಗಾಗಿ ಕಾರೊಳಗಿರುವ ವ್ಯಕ್ತಿ ಹೈಲೆವೆಲ್ ರೈಫಲ್‌ನಿಂದ ಶೂಟ್ ಮಾಡಿದರೂ ಅಪಾಯ ಕಡಿಮೆ ಎನ್ನಲಾಗಿದೆ. ಅಂದ್ಹಾಗೆ ಇದರ ಬೆಲೆ 1.87 ಕೋಟಿ ರೂ. ಎನ್ನಲಾಗಿದ್ದು, ಆನ್ ರೋಡ್ ಬೆಲೆ 2 ಕೋಟಿ ರೂ. ಎನ್ನಲಾಗಿದೆ.
ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ
ಬಾಲಿವುಡ್ ನಟ ಸಲ್ಮಾನ್ ಖಾನ್ ಕಳೆದ ಕೆಲವು ವರ್ಷಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕಳೆದ ತಿಂಗಳು ಕೂಡ ಈಮೇಲ್ ಮೂಲಕ ಪ್ರಾಣ ಬೆದರಿಕೆ ಕರೆ ಬರುತ್ತಿವೆ. ಈ ವೇಳೆ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ರಕ್ಷಣೆಯನ್ನು ಒದಗಿಸಿದ್ದರು.
ಪೊಲೀಸರು ಐಪಿಸಿ ಸೆಕ್ಸನ್ 506(2), 120(b) & 34 ಅಡಿ ಕೇಸ್ ಅನ್ನು ದಾಖಲಿಸಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯಿ, ರೋಹಿತ್ ಗರ್ಗ್ ಹಾಗೂ ಗೋಲ್ಡಿ ಬ್ರಾರ್ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಏನೇ ಇದ್ದರೂ, ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರು ಬೇಜಾನ್ ಸದ್ದು ಮಾಡುತ್ತಿದೆ.


Click it and Unblock the Notifications











