ಪ್ರಾಣ ಬೆದರಿಕೆ ಹಿನ್ನೆಲೆ ಬುಲೆಟ್‌ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಕಾರಿನ ವಿಶೇಷತೆ ಏನು?

ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್‌ಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿದೆ. ಇದು ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲಿಂದ ಆತಂಕದ ವಾತಾವಾರಣ ನಿರ್ಮಾಣ ಆಗಿತ್ತು.

ಈ ಕಾರಣಕ್ಕೆ ಸಲ್ಮಾನ್ ಖಾನ್ ಪ್ರಾಣ ರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡುವಂತೆ ಮುಂಬೈ ಕಮಿಷನರ್ ಆಫೀಸ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಸಲ್ಮಾನ್ ಖಾನ್‌ಗೆ ಗನ್ ಲೈಸೆನ್ಸ್ ಕೂಡ ಮಂಜೂರು ಮಾಡಲಾಗಿತ್ತು.

ಗನ್ ಲೈಸೆನ್ಸ್ ಪಡೆದ ಬಳಿಕವೇ ನಟ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರನ್ನು ಕೂಡ ಖರೀದಿ ಮಾಡಿದ್ದಾರೆ. ಇದೇ ಕಾರ್‌ನಲ್ಲಿ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬುಲೆಟ್ ಪ್ರೂಫ್ ಕಾರಿನ ವಿಶೇಷತೆ ಹಾಗೂ ಅದರ ಬೆಲೆಯ ಬಗ್ಗೆನೇ ಚರ್ಚೆಯಾಗುತ್ತಿದೆ.

ಸಲ್ಮಾನ್ ಖಾನ್ ಬುಲೆಟ್ ಪ್ರೂಫ್‌ ಕಾರು

ಸಲ್ಮಾನ್ ಖಾನ್ ಬುಲೆಟ್ ಪ್ರೂಫ್‌ ಕಾರು

ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಟೋಯಿಯಿಂದ ಪ್ರಾಣ ಬೆದರಿಕೆ ಹಿನ್ನೆಲೆ ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರು ಖರೀದಿ ಮಾಡಿದ್ದಾರೆ. ಟೊಯೋಟಾ ಲ್ಯಾಂಡ್ ಕ್ರೂಸರ್ ಎಸ್‌ಯುವಿಯನ್ನು ಖರೀದಿ ಮಾಡಿದ್ದು, ಇದೇ ಕಾರಿನಲ್ಲಿ ಬಾಲಿವುಡ್ ಬಾಕ್ಸಾಪೀಸ್ ಸುಲ್ತಾನ್ ಮುಂಬೈ ಏರ್‌ಪೋರ್ಟ್‌ಗೂ ಬಂದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಲ್ಮಾನ್ ಕಾರಿನ ವಿಶೇಷತೆ ಏನು?

ಸಲ್ಮಾನ್ ಕಾರಿನ ವಿಶೇಷತೆ ಏನು?

ಸಲ್ಮಾನ್ ಖಾನ್ ಬುಲೆಟ್‌ ಪ್ರೂಫ್ ಕಾರಿನ ಬೆಲೆ ಬಗ್ಗೆನೂ ಬಾರಿ ಚರ್ಚೆಯಾಗುತ್ತಿದೆ. ಲ್ಯಾಂಡ್ ಕ್ರೂಸರ್ ಎಸ್‌ಯುವಿ ಬುಲೆಟ್ ಪ್ರೂಫ್ ಕಾರಿನ ಬೆಲೆ ಬರೋಬ್ಬರಿ 1 ಕೋಟಿ 50 ಲಕ್ಷ ಎನ್ನಲಾಗುತ್ತಿದೆ. ಕಾರ್‌ವಾಲೆ.ಕಾಮ್ ಪ್ರಕಾರ, ಲ್ಯಾಂಡ್ ಕ್ರೂಸರ್ 4461 ಸಿಸಿ ಇಂಜಿನ್ ಹೊಂದಿದೆ. 262 ಬಿಹೆಚ್‌ಪಿ ಪವರ್ ಇದೆ. ಇದು ಒಂದೇ ಮಾದರಿ ಇದ್ದು, ಇದನ್ನು ಬುಲೆಟ್ ಪ್ರೂಫ್‌ ಎಂದು ಹೇಳಲಾಗುತ್ತಿದೆ. ಕಾರಿನ ವಿಂಡೋ ಹಾಗೂ ಮುಂಭಾಗ ಹಾಗೂ ಹಿಂಭಾಗ ಬುಲೆಟ್ ಪ್ರೂಫ್ ಎನ್ನಲಾಗುತ್ತಿದೆ.

ಗನ್ ಲೈನ್ಸ್‌ಗೆ ಅನುಮತಿ

ಗನ್ ಲೈನ್ಸ್‌ಗೆ ಅನುಮತಿ

ಪ್ರಾಣ ರಕ್ಷಣೆ ಆಧಾರದ ಮೇಲೆ ಸಲ್ಮಾನ್ ಖಾನ್ ಮುಂಬೈ ಪೊಲೀಸರಿಗೆ ಗನ್ ಲೈಸೆನ್ಸ್ ನೀಡುವಂತೆ ಮಾನವಿ ಮಾಡಿದ್ದರು. ಮುಂಬೈ ಪೊಲೀಸರು ಈ ಮನವಿಯನ್ನು ಡಿಸಿಪಿ ಜೋನ್ 9ಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ಅನುಮತಿ ಸಿಕ್ಕಿದ ಬಳಿಕ ಸಲ್ಮಾನ್ ಖಾನ್ ರಕ್ಷಣೆಗೆಂದು ಒಬ್ಬ ಗನ್‌ ಹೊಂದುವುದಕ್ಕೆ ಪರವಾನಿಗಿ ನೀಡಲಾಗಿದೆ ಎನ್ನಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಒಬ್ಬ ಗನ್ ಮ್ಯಾನ್ ಅನ್ನು ನೀಡಲಾಗಿದೆ. ಅಲ್ಲದೆ .32 ರಿವಾಲ್ವರ್ ಅಥವಾ ಪಿಸ್ತೂಲ್ ಅನ್ನು ಹೊಂದಲು ಅವಕಾಶ ನೀಡಲಾಗಿದೆ.

ಸಲ್ಮಾನ್ ಖಾನ್ ಸಿನಿಮಾಗಳು

ಸಲ್ಮಾನ್ ಖಾನ್ ಸಿನಿಮಾಗಳು

ಸಲ್ಮಾನ್ ಖಾನ್ ಕೆಲವು ದಿನ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಬರೊಬ್ಬರಿ 50 ದಿನಗಳ ಬಳಿಕ 'ವಿಕ್ರಾಂತ್ ರೋಣ' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಂದ್ಹಾಗೆ ಸಲ್ಮಾನ್ ಖಾನ್ ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಗಾಢ್ ಫಾದರ್' ಸಿನಿಮಾದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಕ್ಟೋಬರ್ 2022ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ 'ಟೈಗರ್ 3', 'ಕಭಿ ಈದ್ ಕಭಿ ದಿವಾಲಿ'ದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Salman Khan Death Threat: His Brand New Bulletproof Car Worth Rs. 1.50 Crore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X