"ಮದುವೆ ಅಲ್ಲ.. ತಂದೆ ಆಗಬೇಕು ಅನ್ನೋ ಪ್ಲ್ಯಾನ್ ಇತ್ತು.. ಆದರೆ ದೇಶದ ಕಾನೂನು ಬಿಡಲಿಲ್ಲ" - ನಟ ಸಲ್ಮಾನ್ ಖಾನ್!
ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈದ್‌ಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಆದರೆ, ಅಂದ್ಕೊಂಡ ಮಟ್ಟಿಗೆ ಸಿನಿಮಾ ಗೆಲ್ಲಲ್ಲಿಲ್ಲ. ಮೊದಲ ವಾರವೇ ಸಿನಿಮಾಗೆ ನೀರಸ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸಾಫೀಸ್‌ನಲ್ಲಿ ಸೋಲುಂಡಿದೆ.
ಹಾಗಂತ ಸಲ್ಮಾನ್ ಖಾನ್‌ಗೆ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಸಲ್ಲು ಡೇಟ್‌ಗಾಗಿ ಬಾಲಿವುಡ್ ನಿರ್ಮಾಪಕರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಈಗ ಹೇಳೋದಕ್ಕೆ ಹೊರಟಿರೋ ಮ್ಯಾಟರ್ ಬೇರೆನೇ ಇದೆ. ಅದು ಸಲ್ಮಾನ್ ಖಾನ್ ಮಕ್ಕಳ ಮ್ಯಾಟರ್. ಅರೇ.. ಮದುವೆನೇ ಆಗಿಲ್ಲ. ಇನ್ನು ಮಕ್ಕಳು ಎಲ್ಲಿಂದ ಬಂದು ಅನ್ನೋ ಪ್ರಶ್ನೆ ಸಹಜ.

ಸಲ್ಮಾನ್ ಖಾನ್ ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ ಮದುವೆ, ಮಕ್ಕಳ ವಿಷಯದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಈ ಸಂದರ್ಶನದಲ್ಲಿ ನನಗೆ ತಂದೆ ಆಗಬೇಕು ಅನ್ನೋ ಆಸೆಯಿತ್ತು ಅಂತ ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
"ತಂದೆ ಆಗಬೇಕು ಅನ್ನೋ ಪ್ಲ್ಯಾನ್ ಇತ್ತು"
ಸಲ್ಮಾನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಂದೆ ಆಗಬೇಕು ಅನ್ನೋ ಪ್ಲ್ಯಾನ್ ಇತ್ತು ಎಂದು ಹೇಳಿದ್ದಾರೆ. "ಒಮ್ಮೆ ಮಗು ಬೇಕು ಅಂತ ಅನಿಸಿತ್ತು. ಆದರೆ ಭಾರತ ದೇಶದ ಕಾನೂನಿನಿಂದ ಅದು ಸಾಧ್ಯವಾಗಿಲ್ಲ" ಎಂದು ಹೇಳಿದ್ದಾರೆ. ಇದೇ ವೇಳೆ ಮದುವೆ ಪ್ಲ್ಯಾನ್ ಬಗ್ಗೆನೂ ಮುಕ್ತವಾಗಿ ಮಾತಾಡಿದ್ದಾರೆ.
ಸಲ್ಮಾನ್ ಖಾನ್‌ಗೆ ಮಕ್ಕಳೆಂದರೆ ಬಲು ಪ್ರೀತಿ ಅನ್ನೋದು ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಈಗಾಗಲೇ ಹಲವು ವಿಡಿಯೋಗಳಲ್ಲಿ ಸಲ್ಮಾನ್ ಖಾನ್‌ಗೆ ಮಕ್ಕಳ ಬಗ್ಗೆ ಎಷ್ಟು ಪ್ರೀತಿ ಅನ್ನೋದನ್ನು ರಿವೀಲ್ ಮಾಡಿವೆ. ಹಾಗೇ ಸಲ್ಮಾನ್ ಖಾನ್‌ಗೂ ಮಗು ಬೇಕು ಅಂತ ಅನಿಸಿತ್ತು. ಆದರೆ, ಮದುವೆ ಅಲ್ಲ ಅನ್ನೋದನ್ನು ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಹೇಳಿದ್ದಾರೆ.

ಸಂದರ್ಶನದಲ್ಲಿ ಸಲ್ಮಾನ್ ಹೇಳಿದ್ದೇನು?
ಇಂಡಿಯಾ ಟಿವಿಯ ಜನಪ್ರಿಯ ಶೋ ಆಪ್ ಕಿ ಅದಾಲತ್‌ನಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಗು ಬೇಕು ಅಂತ ಬಯಸಿದ್ದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಖಾನ್ ಮಗು ಬೇಕು ಅಂತ ಬಯಸಿದ್ದರ ಬಗ್ಗೆ ಹೀಗೆ ಹೇಳಿದ್ದಾರೆ.
" ಅದೇ ಪ್ಲ್ಯಾನ್ ಇದ್ದಿದ್ದು. ಸೊಸೆಯ ಪ್ಲ್ಯಾನ್ ಇರಲಿಲ್ಲ. ಮಗು ಬೇಕು ಅನ್ನೋ ಪ್ಲ್ಯಾನ್ ಇತ್ತು. ಆದರೆ, ಕಾನೂನಿನ ಪ್ರಕಾರ ಭಾರತದಲ್ಲಿ ಅದು ಸಾಧ್ಯವೇ ಇರಲಿಲ್ಲ. ಈಗ ಏನು ಮಾಡಬೇಕು ಅಂತ ಯೋಚನೆ ಮಾಡಬೇಕು" ಎಂದು ಸಲ್ಮಾನ್ ಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕರಣ್ ಜೋಹರ್ ಮಕ್ಕಳ ಬಗ್ಗೆ ಹೇಳಿದ್ದೇನು?
ಇದೇ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಮಕ್ಕಳ ಬಗ್ಗೆನೂ ಮಾತಾಡಿದ್ದಾರೆ. " ನಾನು ಕರಣ್ ಜೋಹರ್ ಹಾಗೇ ಮಾಡಬೇಕು ಅಂತಿದ್ದೆ. ಈ ಕಾನೂನು ಬದಲಾಗಿರಬೇಕು. ಈಗ ಯೋಚನೆ ಮಾಡುತ್ತೇನೆ. ನನಗೆ ಮಕ್ಕಳು ಅಂದರೆ ತುಂಬಾನೇ ಇಷ್ಟ." ಮಗುವಿನ ಬಗ್ಗೆ ಹೇಳಿದ್ದಾರೆ.
"ಯಾವಾಗ ಮಕ್ಕಳು ಬರುತ್ತಾರೋ, ಆಗ ಅವರ ತಾಯಿನೂ ಬರುತ್ತಾರೆ. ಅವರಿಗೆ ಮಕ್ಕಳು ತುಂಬಾನೇ ಮುಖ್ಯ. ಆದರೆ, ನಮ್ಮ ಮನೆಯಲ್ಲಿ ಬಹಳಷ್ಟು ಮಂದಿ ತಾಯಿಯಂದಿರು ಇದ್ದಾರೆ. ನಮ್ಮಲ್ಲಿ ಇಡೀ ಜಿಲ್ಲೆನೇ ಇದೆ. ಇಡೀ ಗ್ರಾಮವೇ ಇದೆ. ಅವರೆಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ, ಆ ಮಗುವಿನ ನಿಜವಾದ ತಾಯಿ ಯಾರಿದ್ದಾರೋ, ಅವರೇ ನನ್ನ ಹೆಂಡತಿ ಆಗುತ್ತಾರೆ" ಎಂದು ಸಲ್ಮಾನ್ ಖಾನ್ ಮುಕ್ತವಾಗಿ ಮದುವೆ, ಮಗು ಬಗ್ಗೆ ಮಾತಾಡಿದ್ದಾರೆ.


Click it and Unblock the Notifications











