Tiger 3 Box office: ಮೊದಲ ದಿನ 'ಟೈಗರ್ 3'ಗೆ ಒಲಿದ ಲಕ್ಷ್ಮಿ..'ಪಠಾಣ್','ಜವಾನ್' ದಾಖಲೆ ಮುರಿಯಲಿಲ್ಲ ಸಲ್ಮಾನ್

ಬಾಲಿವುಡ್‌ನ ಶ್ರೀಮಂತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ವೀಕೆಂಡ್‌ನಲ್ಲಿ 'ಟೈಗರ್ 3' ಸಿನಿಮಾವನ್ನು ರಿಲೀಸ್ ಮಾಡಿತ್ತು. ಲಕ್ಷ್ಮಿ ಪೂಜೆ ದಿನವೇ ಸಿನಿಮಾ ರಿಲೀಸ್ ಮಾಡಿ, ಗುರುವಾರ, ಶುಕ್ರವಾರ ರಿಲೀಸ್ ಮಾಡುತ್ತಿದ್ದ ಸಂಪ್ರದಾಯವನ್ನೂ ಮುರಿದಿತ್ತು.

ಒಂದ್ಕಡೆ ಹಬ್ಬ. ಇನ್ನೊಂದು ಕಡೆ ಭಾನುವಾರ (ನವೆಂಬರ್ 12) ರಿಲೀಸ್ ಮಾಡಿದ್ದು ಬಾಕ್ಸಾಫೀಸ್ ಮೇಲೆ ಪರಿಣಾಮ ಬೀರಬಹುದೇ ಎಂಬ ಅನುಮಾವಿತ್ತು. ಅದಕ್ಕೆಲ್ಲಾ ಈಗ ತೆರೆಬಿದ್ದಿದೆ. ಮೊದಲ ದಿನವೇ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Salman Khan Katrina Kaif starrer Tiger 3 Box Office Collection Day 1 Report

ಫಸ್ಟ್ ಡೇ.. ಫಸ್ಟ್ ಶೋ 'ಟೈಟರ್ 3'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಬಾಕ್ಸಾಫೀಸ್‌ ಮೇಲೂ ಪರಿಣಾಮ ಬೀರಬಹುದೇನೋ ಎಂದು ನಿರೀಕ್ಷಿಸಲಾಗಿತ್ತು. ಆದ್ರೀಗ ಆ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಭಾರತದಲ್ಲಿ ಮೊದಲ ದಿನವೇ ಭಾರೀ ಮೊತ್ತವನ್ನು ಕಲೆ ಹಾಕಿದೆ.

ಮೊದಲ ದಿನ ಮಾರಾಟವಾದ ಟಿಕೆಟ್‌ಗಳೆಷ್ಟು?

ಸಲ್ಮಾನ್ ಖಾನ್,ಕತ್ರಿನಾ ಕೈಫ್ ಜೋಡಿಯ 'ಟೈಗರ್ 3' ಬಜ್ ಜೋರಾಗಿಯೇ ಇತ್ತು. ಅಡ್ವಾನ್ಸ್ ಬುಕಿಂಗ್‌ನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಟ್ರೇಡ್ ಅನಲಿಸ್ಸ್ ಮನೋಬಾಲ ವಿಜಯಬಾಲನ್ ಪ್ರಕಾರ, 'ಟೈಗರ್ 3' ಮೊದಲ ದಿನ ಸುಮಾರು 6 ಲಕ್ಷ ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಇದರಲ್ಲಿ ಭಾರತದಾದ್ಯಂತ ಮಲ್ಟಿಪ್ಲೆಕ್ಸ್‌ನಲ್ಲಿ 2 ಲಕ್ಷ ಟಿಕೆಟ್ ಸೇಲ್ ಆಗಿದ್ದರೆ, ಸಿಂಗಲ್‌ ಸ್ಕ್ರೀನ್ 4 ಸೇಲ್ ಆಗಿದೆ. ಒಟ್ಟು ಭಾರತ ಎಲ್ಲಾ ಥಿಯೇಟರ್‌ಗಳಿಂದ 6 ಲಕ್ಷ ಟಿಕೆಟ್ ಸೇಲ್ ಆಗಿದೆ ಎಂದು ಹೇಳಿದ್ದರು. ಅಡ್ವಾನ್ಸ್ ಬುಕಿಂಗ್‌ನಿಂದಲೇ ಸುಮಾರು 16.34 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿತ್ತು.

ಫಸ್ಟ್ ಡೇ ಕಲೆಕ್ಷನ್ ಎಷ್ಟು?

'ಟೈಗರ್ 3' ಮೊದಲ ದಿನದ ಕಲೆಕ್ಷನ್ ಮೇಲೆ ಇಡೀ ಭಾರತೀಯ ಚಿತ್ರರಂಗ ಕಣ್ಣಿಟ್ಟಿತ್ತು. ಯಾಕಂದ್ರೆ, ಸಲ್ಮಾನ್ ಖಾನ್ ಸಿನಿಮಾದಲ್ಲಿ ಒಬ್ಬರಲ್ಲ ಇಬ್ಬರು ಸೂಪರ್‌ಸ್ಟಾರ್‌ಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಂದು ಕಡೆ ಅಡ್ವಾನ್ಸ್ ಬುಕಿಂಗ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸಾಫೀಸ್ ಟ್ರ್ಯಾಕರ್ Sacnilk ವರದಿ ಪ್ರಕಾರ, 'ಟೈಗರ್ 3' ಮೊದಲ ದಿನ 44.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ದೀಪಾವಳಿ ಹಬ್ಬದಂದು ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯನ್ನು ಬರೆದಿದೆ.

Salman Khan Katrina Kaif starrer Tiger 3 Box Office Collection Day 1 Report

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು?

'ಟೈಗರ್ 3' ಕೇವಲ ಹಿಂದಿ ಬೆಲ್ಟ್‌ನಿಂದಲೇ 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ಮತ್ತು ತಮಿಳಿಗೂ ಈ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ತೆಲುಗಿನಲ್ಲಿ 1.15 ಕೋಟಿ ರೂಪಾಯಿ ಕಲೆಕ್ಷನ್ ಆದರೆ, ತಮಿಳಿನಲ್ಲಿ ಕೇವಲ 15 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ. ಇದು ಸಲ್ಮಾನ್ ವೃತ್ತಿ ಬದುಕಿನಲ್ಲೇ ಅತೀ ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

'ಜವಾನ್' ಹಿಂದಿಕ್ಕಲಿಲ್ಲ 'ಟೈಗರ್'

ಶಾರುಖ್ ಖಾನ್ ಕಮ್‌ಬ್ಯಾಕ್ ಮಾಡಿದ್ದ ಸಿನಿಮಾ 'ಪಠಾಣ್' ಮೊದಲ ದಿನ 57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ತೆರೆಕಂಡಿರೋ 'ಜವಾನ್' ಸಿನಿಮಾ 75 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈ ದಾಖಲೆಯನ್ನು ಸಲ್ಮಾನ್ ಖಾನ್ ಸಿನಿಮಾ 'ಟೈಗರ್ 3' ಭೇದಿಸಲಿಲ್ಲ. ಇನ್ನೂ ಎರಡು ದಿನ ರಜೆ ಇರುವುದರಿಂದ 'ಟೈಗರ್ 3' ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Tiger 3 Box Office Collection: Salman Khan, Katrina Kaif movie day 1 report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X