52 ವರ್ಷಗಳಿಂದ ವಾಸವಿದ್ದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ತೊರೆಯಲಿರುವ ಸಲ್ಮಾನ್ ಖಾನ್: 6 ಅಂತಸ್ತಿನ ಕಡಲತೀರದ ಮನೆಗೆ ಶಿಫ್ಟ್

ಬಾಲಿವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶೀಘ್ರದಲ್ಲಿಯೇ ಹೊಸ ಅಡ್ಡ ಸಿಗಲಿದೆ. ಈ ಬಾಲಿವುಡ್‌ ನಟನನ್ನು ನೋಡಬೇಕು ಅಂದರೆ, ಹೊಸ ಅಡ್ರೆಸ್ ಹುಡುಕಿಕೊಂಡು ಹೋಗಬೇಕು. ಕಳೆದ 30 ವರ್ಷಗಳಿಂದ ಸಿನಿಮಾ ಮಂದಿಗೆ ಸಲ್ಮಾನ್ ಖಾನ್ ನೋಡಲು ಮುಂಬೈನ ಐಕಾನಿಕ್ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್' ಅಡ್ರೆಸ್‌ ಆಗಿತ್ತು. ಆದ್ರೀಗ ಈ ಐಕಾನಿಕ್ ಅಪಾರ್ಟ್‌ಮೆಂಟ್‌ ಅನ್ನು ಅವರು ತೊರೆಯಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಸಲ್ಮಾನ್ ಖಾನ್ ಅಂದ ಕೂಡಲೇ ಅಭಿಮಾನಿಗಳು 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್' ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದರು. ಸಿನಿಮಾ ಮಂದಿಗೆ ಇದೇ ಅಡ್ಡ ಎನಿಸಿಕೊಂಡಿತ್ತು. 1974ರಿಂದ ಅಂದರೆ, ಸುಮಾರು 52 ವರ್ಷಗಳ ಕಾಲ ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬ ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಹೀಗಾಗಿ ಮುಂಬೈನ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್' ಸಲ್ಮಾನ್ ಖಾನ್ ಹೆಸರಿನ ಜೊತೆಗೆ ದಶಕಗಳ ನಂಟು ಹೊಂದಿದೆ.

Salman Khan leaving Galaxy apartment and moving 6 story seaside building here is details

ಇಷ್ಟು ದಿನ ಸಲ್ಮಾನ್ ಖಾನ್ ನೋಡುವುದಕ್ಕೆ ದೇಶದ ಮೂಲೆ ಮೂಲೆಗಳಿಂದ ಈ ಅಪಾರ್ಟ್‌ಮೆಂಟ್ ಅಡ್ರೆಸ್ ಹುಡುಕಿಕೊಂಡು ಬರುತ್ತಿದ್ದರು. ಲಕ್ಷಾಂತರ ಅಭಿಮಾನಿಗಳು ಈ ಅಪಾರ್ಟ್‌ಮೆಂಟ್‌ ಗೇಟ್ ಮುಂದೆ ಬಂದು ಕಾಯುತ್ತಿದ್ದರು. ಆದರೆ ಸಲ್ಮಾನ್ ಖಾನ್ ಅವರೆಲ್ಲರಿಗೂ ಹೊಸ ಅಡ್ರೆಸ್ ನೀಡಲಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಖಾನ್ ಹೊಸ ಅಪಾರ್ಟ್‌ಮೆಂಟ್‌ನ ವಿಶೇಷತೆಗಳೇನು? ತಿಳಿಯುವುದಕ್ಕೆ ಮುಂದೆ ಓದಿ.

ಕಡಲತೀರದಲ್ಲಿ 6 ಅಂತಸ್ತಿನ ಮನೆ

ಸಲ್ಮಾನ್ ಖಾನ್ ಶಿಫ್ಟ್ ಆಗಲಿರುವ ಹೊಸ ಅಪಾರ್ಟ್‌ಮೆಂಟ್‌ ಬಗ್ಗೆ ಚರ್ಚೆಗಳಾಗುತ್ತಿದೆ. ಈ ಹೊಸ ಪ್ರಾಪರ್ಟಿಯು ಕಡಲ ತೀರದ ಅದ್ಭುತ ನೋಟವನ್ನು ಹೊಂದಿರುವ ಭವ್ಯವಾದ ಆರು ಅಂತಸ್ತಿನ ಕಟ್ಟಡ ಎನ್ನಲಾಗಿದೆ. ಅತ್ಯಾಧುನಿಕ ವಿನ್ಯಾಸದ ಈ ಅಪಾರ್ಟ್‌ಮೆಂಟ್‌ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳು ಇರಲಿವೆ. ವಿಶಾಲವಾದ ಕೊಠಡಿಗಳ ಜೊತೆಗೆ ಹೈಟೆಕ್ ಸೌಕರ್ಯಗಳು ಇರಲಿವೆ. ಸಲ್ಮಾನ್ ಖಾನ್ ಕುಟುಂಬದ ಅಗತ್ಯತೆಗಳಿಗೆ ತಕ್ಕಂತೆ ಈ ಮನೆಯ ಇಂಟಿರಿಯರ್ ಡಿಸೈನ್ ಮಾಡಲಿದೆ. ಸದ್ಯ ಇದರ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿವೆ ಎಂದು ಹೇಳಲಾಗುತ್ತಿದೆ.

Also Read
ಭಾಯ್‌ಜಾನ್ ಹೊಸ ಅವತಾರ; ಶಾರ್ಟ್‌ ಸಿನಿಮಾಗಾಗಿಯೋ? ಇಲ್ಲ ಆರೋಗ್ಯ ಸಮಸ್ಯೆನಾ?
ಭಾಯ್‌ಜಾನ್ ಹೊಸ ಅವತಾರ; ಶಾರ್ಟ್‌ ಸಿನಿಮಾಗಾಗಿಯೋ? ಇಲ್ಲ ಆರೋಗ್ಯ ಸಮಸ್ಯೆನಾ?

ಶಿಫ್ಟ್ ಆಗಲು ಪ್ರಮುಖ ಕಾರಣ

ಗ್ಯಾಲಕ್ಕಿ ಅಪಾರ್ಟ್‌ಮೆಂಟ್‌ನಿಂದ ಶಿಫ್ಟ್ ಆಗುವ ಬಗ್ಗೆ ಸಲ್ಮಾನ್ ಖಾನ್ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಆದರೂ, ಎನ್‌ಡಿಟಿವಿ ವರದಿ ಪ್ರಕಾರ, ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಸಮೀಪದಲ್ಲಿಯೇ ನೂತನವಾಗಿ ನಿರ್ಮಾಣ ಆಗುತ್ತಿರುವ 6 ಅಂತಸ್ತಿನ ಕಟ್ಟಕ್ಕೆ ಶಿಫ್ಟ್ ಆಗಲಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಭದ್ರತೆ. ಇತ್ತೀಚೆಗೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಬೆನ್ನಲ್ಲೇ ಇಂತಹದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Salman Khan leaving Galaxy apartment and moving 6 story seaside building here is details

6 ಅಂತಸ್ತಿನ ಮನೆಯ ಹೈಲೈಟ್ ಏನು?

ಸಲ್ಮಾನ್ ಖಾನ್ 6 ಅಂತಸ್ತಿನ ಅಪಾರ್ಟ್‌ಮೆಂಟ್‌ ಕಡಲ ತೀರಕ್ಕೆ ಹೊಂದಿಕೊಂಡಂತೆ ಇದೆ. ಅಲ್ಲದೇ, ಆಧುನಿಕ ತಂತ್ರಜ್ಞಾನದೊಂದಿಗೆ ಹೈಟೆಕ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟು ನಿಟ್ಟಾದ ಭದ್ರತಾ ಪ್ರೋಟೊಕಾಲ್‌ ಇರಲಿದೆ. ಸಲ್ಮಾನ್ ಖಾನ್‌ಗೆ ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ಸಿಸಿಟಿವಿ ಕ್ಯಾಮರಾ ಇರಲಿದೆ. ಹಾಗೇ ಇಲ್ಲಿ ಜಿಮ್‌ಗೆ ವ್ಯವಸ್ಥೆ, ಭದ್ರತಾ ಸಿಬ್ಬಂದಿ ಹಾಗೂ ಬಾಡಿಗಾರ್ಡ್‌ಗಳಿಗೆ ಒಂದೇ ಸೂರಿನಡಿ ವ್ಯವಸ್ಥೆ ಮಾಡಲಾಗಿದೆ.

ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ನೆನಪುಗಳು

ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿರುವ ಸಲ್ಮಾನ್ ಖಾನ್ ಇಷ್ಟರೊಳಗೆ ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಬಹುದಿತ್ತು. ಆದರೆ, ಪೋಷಕರಾದ ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಅವರ ಸೆಂಟಿಮೆಂಟ್‌ನಿಂದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲೇ ಉಳಿದುಕೊಂಡಿದ್ದರು. ಈದ್ ಹಾಗೂ ಅವರ ಜನ್ಮದಿನ ಸಾವಿರಾರು ಅಭಿಮಾನಿಗಳು ಸಲ್ಮಾನ್ ನೋಡಲು ಬರುತ್ತಿದ್ದರು. ಹೀಗಾಗಿ ಸಲ್ಮಾನ್ ಖಾನ್‌ಗೆ ಇದು ಭಾವುಕ ಕ್ಷಣಗಳಾಗಲಿದೆ.

English summary
Salman Khan leaving Galaxy apartment and moving 6 story seaside building here is details. According to recent reports, the Tiger 3 actor will soon shift into a brand-new, ultra-luxurious six-story seaside apartment located in the prime area of Bandra, Mumbai.
Read more about: salman khan actor apartment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X