»   » ಯಾಹೂ ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ ಗೆ ಮುಖಭಂಗ

ಯಾಹೂ ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ ಗೆ ಮುಖಭಂಗ

Posted By:
Subscribe to Filmibeat Kannada

ವರ್ಷಾಂತ್ಯದಲ್ಲಿ ವರ್ಷದ ಅತ್ಯುತ್ತಮ ಚಿತ್ರ, ನಟ, ನಟಿ ಮುಂತಾದವುಗಳನ್ನು ಪಟ್ಟಿ ಮಾಡುವುದನ್ನು ನೋಡಿದ್ದೇವೆ. ಆದರೆ, ' ವರ್ಷದ ಕಳಪೆ ಚಿತ್ರ ' ಎಂದು ಆಯ್ಕೆ ಮಾಡುವ ಪರಿಪಾಠ ಎಂದಿಗೆ ಶುರುವಾಯಿತೋ?

ಅದೇನೋ ಒಟ್ಟಿನಲ್ಲಿ, ಯಾಹೂ ಡಾಟ್ ಕಾಂ 2014ರ 'ವರ್ಷದ ಅತ್ಯಂತ ಕಳಪೆ ಹಿಂದಿ ಚಿತ್ರ'ಗಳ ಪಟ್ಟಿಯನ್ನು ಸಿದ್ದಮಾಡಿದೆ. ಅದರಲ್ಲಿ ಸಲ್ಮಾನ್ ಖಾನ್ ಅಭಿನಯದ ಚಿತ್ರ ಮೊದಲ ಸ್ಥಾನ ಪಡೆದಿದೆಯಂತೆ. ಈ ಸುದ್ದಿ ಕೇಳಿ ಶಾಕ್ ಆದ ಸಲ್ಲು ಮಿಯಾ 'ಯೇ ಕ್ಯಾರೇ ನಯಾ ಕಿಸ್ಸಾ' ಅಂತಾ ತನ್ನ ಶರ್ಟ್ ಬಿಚ್ಚಿ ಗಿರ್ರನೇ.. ತಿರಗಿಸಿದ್ದಾರಂತ ಸುದ್ದಿ.

ಯಾವ ಮಾನದಂಡವನ್ನು ಆಧರಿಸಿ ಯಾಹೋ ಈ ಸಮೀಕ್ಷೆ ನಡೆಸಿದೆ ಎನ್ನುವ ವಿಚಾರ ಬಹಿರಂಗವಾಗಿಲ್ಲ. ಆದರೆ, ಸಲ್ಮಾನ್ ಖಾನ್ ಅಭಿನಯದ 'ಜೈ ಹೋ' ಚಿತ್ರ ವರ್ಷದ ಅತ್ಯಂತ ಕಳಪೆ ಚಿತ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಈ ಚಿತ್ರ ಸಲ್ಮಾನ್ ಅವರ ಕಟ್ಟಾ ಅಭಿಮಾನಿಗಳಿಗೂ ನಿರಾಶೆ ಮೂಡಿಸುವ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ತನಗಿರುವ ವರ್ಚಸ್ಸನ್ನು ಒರೆಗಚ್ಚುವಲ್ಲೂ ವಿಫಲರಾಗಿದ್ದಾರೆ ಎಂದು ಯಾಹೂ ತನ್ನ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದೆ.

ಬಾಕ್ಸ್ ಆಫೀಸನಲ್ಲೂ ಮುಗ್ಗರಿಸಿದ ಈ ಚಿತ್ರದ ನಿರ್ದೇಶಕರು ಚಿತ್ರದ ಸಾಹಸ ಸನ್ನಿವೇಶಕ್ಕೆ ಮಾತ್ರ ಗಮನ ಹರಿಸಿದ್ದರು. ಚಿತ್ರದ ಕಾಮಿಡಿ ಸನ್ನಿವೇಶಗಳಂತೂ ತುಂಬಾ ಪೇಲವವಾಗಿತ್ತು ಎಂದು ಯಾಹೂ ತಿಳಿಸಿದೆ.

ಸೊಹೇಲ್ ಖಾನ್ ನಿರ್ಮಿಸಿ ನಿರ್ದೇಶಿಸಿದ್ದ ಈ ಚಿತ್ರ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಸಲ್ಮಾನ್, ಟಬು, ಡೈಸಿ ಶಾ, ಡ್ಯಾನಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು.

ಯಾಹೂ ಪಟ್ಟಿ ಮಾಡಿದ ಕಳಪೆ ಚಿತ್ರಗಳಾವುವು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಅಂತರ್ಜಾಲದಲ್ಲಿ ಅತ್ಯಂತ ಹೆಚ್ಚು ಸರ್ಚ್ ಪಡೆದ ಚಿತ್ರ

ಆದರೆ ಸಲ್ಮಾನ್ ಖಾನಿಗೆ ಸ್ವಲ್ಪ ಖುಷಿ ಕೊಡುವ ಸಂಗತಿ ಏನಂದರೆ, ಅವರ ಅಭಿನಯದ 'ಕಿಕ್ ' ಸಿನಿಮಾ ಅಂತರ್ಜಾಲದಲ್ಲಿ ಅತ್ಯಂತ ಹೆಚ್ಚು ಸರ್ಚ್ ಆದ ಚಿತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಶಾರೂಖ್ ಅಭಿನಯದ ಹ್ಯಾಪಿ ನ್ಯೂ ಈಯರ್.

ರಾಗಿಣಿ ಎಂಎಂಎಸ್ 2

ಬರೀ ಮೈಮಾಟ ಪ್ರದರ್ಶನದಿಂದ ದಿಗ್ವಿಜಯ ಸಾಧಿಸಲು ಸಾಧ್ಯವಿಲ್ಲ ಎಂದು ಚಿತ್ರತಂಡ ಈ ಸರ್ವೇ ನೋಡಿ ಅರಿತರೆ ಒಳ್ಳೆಯದು. ಸನ್ನಿ ಲಿಯೋನ್, ಶಾಹಿಲ್ ಪ್ರೇಮ್, ಪರ್ವಿನ್ ದಬಾಸ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಭೂಷಣ್ ಪಟೇಲ್ ನಿರ್ದೇಶಿಸಿದ್ದರು - ಕಳಪೆ ಚಿತ್ರ 2.

ಹಮ್ ಶಕಲ್

ಸೈಫ್ ಆಲಿ ಖಾನ್, ರಿತೇಶ್ ದೇಶಮುಖ್, ಬಿಪಾಶ ಬಸು, ತಮನ್ನಾ ಭಾಟಿಯಾ ಮುಂತಾದ ಪ್ರಮುಖ ತಾರಾಗಣವಿರುವ ಈ ಚಿತ್ರವನ್ನು ಸಾಜಿದ್ ಖಾನ್ ನಿರ್ದೇಶಿಸಿದ್ದರು. ಇದು ಕಳಪೆ ಚಿತ್ರಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

ಎಂಟರ್ಟೈನ್ಮೆಂಟ್

ಅಕ್ಷಯ್ ಕುಮಾರ್, ಮಿಥುನ್ ಚಕ್ರವರ್ತಿ, ತಮನ್ನಾ ಭಾಟಿಯಾ ಜಾನಿ ಲೀವರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಕಳಪೆ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಈ ಚಿತ್ರವನ್ನು ಸಾಜಿದ್ - ಫರದ್ ನಿರ್ದೇಶಿಸಿದ್ದರು.

ದಿ ಶೌಕೀನ್

ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಗೊತ್ತು ಗುರಿಯಿಲ್ಲದ ಚಿತ್ರ. ಲಿಶಾ ಹೇಡನ್, ಅನುಪಮ್ ಖೇರ್, ಅನ್ನು ಕಪೂರ್ ಇತರ ತಾರಾಗಣದಲ್ಲಿರುವ ಈ ಚಿತ್ರವನ್ನು ಅಭಿಶೇಕ್ ಶರ್ಮಾ ನಿರ್ದೇಶಿಸಿದ್ದರು. ಕಳಪೆ ಚಿತ್ರಗಳ ಪೈಕಿ ಐದನೇ ಸ್ಥಾನದಲ್ಲಿರುವ ಚಿತ್ರ ಇದಾಗಿದೆ.

English summary
Yahoo has released list of worst films of the year 2014, in which Salman Khan's 'Jai Ho' movie has been declared one of the worst films of the year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada