Sikandar Box Office Day 3: ಸಲ್ಮಾನ್ ಖಾನ್-ರಶ್ಮಿಕಾ ಜೋಡಿ ಒಪ್ಪಿಲ್ಲ; 3ನೇ ದಿನ ಬಾಕ್ಸಾಫೀಸ್‌ನಲ್ಲಿ ಕುಸಿದ 'ಸಿಕಂದರ್'
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದ್ದರು. 'ಅನಿಮಲ್', 'ಚಾವಾ'ದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟ ಬಳಿಕ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆ ನಟಿಸಿದ ಸಿನಿಮಾ 'ಸಿಕಂದರ್' ರಿಲೀಸ್ ಆಗಿದೆ. ಈದ್ ವೇಳೆ ರಿಲೀಸ್ ಆಗಿದ್ದ ಈ ಸಿನಿಮಾ ಮೇಲೆ ನಿರೀಕ್ಷೆಯಿತ್ತು.
ಸಲ್ಮಾನ್ ಖಾನ್ ಸಿನಿಮಾ ಈದ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಆದರೆ, 'ಸಿಕಂದರ್' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಮೊದಲ ಮೂರು ದಿನ ಈ ಸಿನಿಮಾ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ. ಮೊದಲ ಮೂರು ದಿನಗಳ ಕಲೆಕ್ಷನ್ 100 ಕೋಟಿ ರೂಪಾಯಿ ಕೂಡ ದಾಟಿಲ್ಲ. 2025ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದಾಗಿತ್ತು.

ಕಳೆದ ವೀಕೆಂಡ್‌ನಲ್ಲಿ ಒಂದರ ಹಿಂದೊಂದು ರಜೆ ಇತ್ತು. ಇದರ ಹೊರತಾಗಿಯೂ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. 3ನೇ ದಿನ ಬರೋಬ್ಬರಿ ಶೇ.33ರಷ್ಟು ಕುಸಿತ ಕಂಡಿದೆ. ರಜೆಯಲ್ಲೇ ಮೋಡಿ ಮಾಡದ 'ಸಿಕಂದರ್' ವೀಕ್ ಡೇಸ್‌ನಲ್ಲಿ ಜಾದು ಮಾಡುತ್ತಾ? ಎನ್ನುವ ಪ್ರಶ್ನೆ ಟ್ರೇಡ್ ಎಕ್ಸ್‌ಪರ್ಟ್ ಅನ್ನು ಕಾಡುತ್ತಿದೆ. ಹಾಗಿದ್ದರೆ, ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಜೋಡಿಯ ಈ ಸಿನಿಮಾ 3ನೇ ದಿನ ಗಳಿಸಿದ್ದು ಎಷ್ಟು? ತಿಳಿಯಲು ಮುಂದೆ ಓದಿ.
'ಸಿಕಂದರ್' 3ನೇ ದಿನದ ಕಲೆಕ್ಷನ್ ಎಷ್ಟು?
ಬಾಲಿವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಅಂತಲೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಸಿನಿಮಾಗಳು ಸೋಲುತ್ತಿವೆ. ಗಲ್ಲಾ ಪಟ್ಟಿಗೆಯಲ್ಲಿ ಮೋಡಿ ಮಾಡುವಲ್ಲಿ ಹಿಂದೆ ಬೀಳುತ್ತಿದೆ. 3ನೇ ದಿನ 'ಸಿಕಂದರ್' ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ನಿರೀಕ್ಷೆ ಸುಳ್ಳಾಗಿದೆ. sacnilk ವೆಬ್‌ಸೈಟ್ ವರದಿ ಪ್ರಕಾರ 'ಸಿಕಂದರ್' ಸಿನಿಮಾದ ಮೂರನೇ ದಿನದ ಕಲೆಕ್ಷನ್ ಬರೀ 19.5 ಕೋಟಿ ರೂಪಾಯಿ. ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆಯಾಗುವುದನ್ನು ತಂಡ ನಿರೀಕ್ಷೆ ಮಾಡಿರಲಿಲ್ಲ.

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಸಿಕಂದರ್' 3 ದಿನಗಳಲ್ಲಿ 100 ಕೋಟಿ ರೂಪಾಯಿಯನ್ನೂ ದಾಟಿಲ್ಲ. ಮೊದಲ ದಿನ ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದರೂ, ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಸಮಾಧಾನ ತಂದಿಲ್ಲ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬಾಕ್ಸಾಫೀಸ್‌ನಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದೇ ನಿರೀಕ್ಷೆಯನ್ನು ಮಾಡಲಾಗಿತ್ತು. ಮೊದಲ ಮೂರು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ - ₹26 ಕೋಟಿ
2ನೇ ದಿನ - ₹29 ಕೋಟಿ
3ನೇ ದಿನ - ₹19.5 ಕೋಟಿ
ಒಟ್ಟು - ₹74.5 ಕೋಟಿ
ಮುರುಗದಾಸ್ ಜಾದು ನಡೆಯಲಿಲ್ಲ
ತಮಿಳಿನ ಸ್ಟಾರ್ ನಿರ್ದೇಶಕ, 'ಘಜನಿ' ಅಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಮುರುಗದಾಸ್ ನಿರ್ದೇಶಿಸಿದ ಸಿನಿಮಾವಿದು. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಅಂತಹ ಸ್ಟಾರ್ ಕಾಸ್ಟ್ ಹೊರತಾಗಿಯೂ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಮುರುಗದಾಸ್ ಸಿನಿಮಾ ಮಂದಿಯನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಸೋತಿದ್ದಾರೆ. ಮೂರು ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್ ಕೇವಲ 95 ಕೋಟಿ ರೂಪಾಯಿ.
'ಛಾವಾ', 'ಎಂಪೂರನ್' ಹಿಂದಿಕ್ಕಲಿಲ್ಲ
ವಿಕ್ಕಿ ಕೌಶಲ್ ನಟಿಸಿದ 'ಛಾವಾ' ಹಾಗೂ ಮೋಹನ್ ಲಾಲ್ ನಟಿಸಿದ 'ಎಂಪೂರನ್' ಎರಡೂ ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಓಪನಿಂಗ್ ಸಿಕ್ಕಿತ್ತು. ಆದರೆ, ಸಲ್ಮಾನ್ ಖಾನ್ ಸಿನಿಮಾ 'ಸಿಕಂದರ್'ಗೆ ಈ ಎರಡು ಸಿನಿಮಾಗಳನ್ನು ಹಿಂದಿಕ್ಕುವಲ್ಲಿ ಸೋತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











