Sikandar Box Office Day 4:4ನೇ ದಿನವೂ 'ಸಿಕಂದರ್' ಜಾದು ನಡೆಯಲಿಲ್ಲ? ₹100 ಕೋಟಿಗೂ ಪರದಾಟ

ಒಂದು ಕಾಲದ ಬಾಲಿವುಡ್ ಬಾಕ್ಸಾಫೀಸ್‌ ಸುಲ್ತಾನ್ ಇಂದು ಒಂದು ಹಿಟ್ ಕೊಡುವುದಕ್ಕೆ ಪರದಾಡುವಂತಾಗಿದೆ. ಹೌದು, ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಒಂದರ ಹಿಂದೊಂದು ಸಿನಿಮಾ ಸೋತು ಸುಣ್ಣವಾಗುತ್ತಿದೆ. ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುವ ಲಕ್ಷಣ ಎದ್ದು ಕಾಣುತ್ತಿದೆ. ಅದುವೇ 'ಸಿಕಂದರ್'.

ಈದ್‌ಗೆ ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗೋದು ಹೊಸ ವಿಷಯವೇನಲ್ಲ. ಇದೇ ಹಬ್ಬಕ್ಕೆ ಸಲ್ಮಾನ್ ಖಾನ್ ಸಾಕಷ್ಟು ಸಿನಿಮಾಗಳನ್ನು ರಿಲೀಸ್ ಮಾಡಿದ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವು ಸಿನಿಮಾಗಳು ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿದ್ದು ಇದೆ. ಹೀಗೆ 'ಸಿಕಂದರ್' ಕೂಡ ಚಮತ್ಕಾರ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಹಾಗಾಗುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.

Salman Khan Rashmika Mandanna Film Sikandar Day 4 Box Office Collection report

ಯಾಕಂದ್ರೆ, 'ಸಿಕಂದರ್' ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಲೇ ಇದೆ. ಸಲ್ಮಾನ್ ಖಾನ್ ಅಂತಹ ಸೂಪರ್‌ಸ್ಟಾರ್ ನಟಿಸಿದ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುತ್ತಿಲ್ಲ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ರಶ್ಮಿಕಾ ಮಂದಣ್ಣ-ಸಲ್ಮಾನ್ ಖಾನ್ ಜೋಡಿ ತೆರೆಮೇಲೆ ಮೋಡಿ ಮಾಡುವಲ್ಲಿ ಸೋತಿದೆ. ನಾಲ್ಕನೇ ದಿನ ಈ ಸಿನಿಮಾ ಶೇ.50ರಷ್ಟು ಡ್ರಾಪ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಹಾಗಿದ್ದರೆ, 4ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? 100 ಕೋಟಿ ಕ್ಲಬ್ ಸೇರಿತೇ? ತಿಳಿಯುವುದಕ್ಕೆ ಮುಂದೆ ಓದಿ.

'ಸಿಕಂದರ್' 4ನೇ ದಿನದ ಕಲೆಕ್ಷನ್ ಎಷ್ಟು?

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಬಹುದೆಂದು ನಿರೀಕ್ಷೆಯಿತ್ತು. ಸಲ್ಮಾನ್ ಖಾನ್ ಫೇವರಿಟ್ ಈದ್‌ಗೆ ರಿಲೀಸ್‌ ಆಗಿತ್ತು. ಆದರೂ, ಜಾದು ಮಾಡಲಿಲ್ಲ. ವಿಕ್ಕಿ ಕೌಶಲ್, ಅಲ್ಲು ಅರ್ಜುನ್, ರಣ್‌ಬೀರ್ ಕಪೂರ್‌ಗೆ ಲಕ್ಕಿ ಅಂತ ಸಾಬೀತಾಗಿದ್ದ ರಶ್ಮಿಕಾ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್‌ಗೆ ಅದೃಷ್ಟ ದೇವತೆಯಾಗಲಿಲ್ಲ. ನಾಲ್ಕನೇ ದಿನ ಈ ಸಿನಿಮಾ ಗಳಿಸಿದ್ದು, ಕೇವಲ 9.75 ಕೋಟಿ ರೂಪಾಯಿ. ಮೂರನೇ ದಿನಕ್ಕೆ ಹೋಲಿಕೆ ಮಾಡಿದರೆ, ಶೇ.50ರಷ್ಟು ಡ್ರಾಪ್ ಆಗಿದೆ.

Salman Khan Rashmika Mandanna Film Sikandar Day 4 Box Office Collection report

4 ದಿನಗಳಲ್ಲಿ ₹100 ಕೋಟಿ ದಾಟಿತೇ?

ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನಗಳಲ್ಲಿ ₹100 ಕೋಟಿ ಕ್ಲಬ್ ಸೇರುತ್ತಿತ್ತು. ಆದರೆ, 'ಸಿಕಂದರ್' ನಾಲ್ಕು ದಿನಗಳಾದರೂ ಭಾರತದ ಬಾಕ್ಸಾಫೀಸ್‌ನಿಂದ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ನಾಲ್ಕು ದಿನಗಳಲ್ಲಿ 'ಸಿಕಂದರ್' ಕಲೆಕ್ಷನ್ ಕೇವಲ 84.25 ಕೋಟಿ ರೂಪಾಯಿ ಗಳಿಸಿದೆಯಷ್ಟೇ.

ಮೊದಲ ದಿನ ₹26 ಕೋಟಿ
2ನೇ ದಿನ ₹29 ಕೋಟಿ
3ನೇ ದಿನ ₹19.5 ಕೋಟಿ
4ನೇ ದಿನ ₹09.75 ಕೋಟಿ
ಒಟ್ಟು ₹84.25 ಕೋಟಿ

'ಸಿಕಂದರ್' ಸೋಲಿಗೆ ಕಾರಣ ಏನು?

ಸಲ್ಮಾನ್ ಖಾನ್ ಅಂತಹ ಸೂಪರ್‌ ಸ್ಟಾರ್ ಒಂದ್ಕಡೆ, ಮುರುಗದಾಸ್ ಅಂತಹ ಟಾಪ್ ಡೈರೆಕ್ಟರ್, ಮೆಗಾ ಬ್ಲಾಕ್‌ಬಸ್ಟರ್ ನೀಡಿದ ರಶ್ಮಿಕಾ ಮಂದಣ್ಣ. ಇಷ್ಟು ಮಂದಿ ಇದ್ದರೂ, 'ಸಿಕಂದರ್' ಗೆಲ್ಲಿಸುವುದಕ್ಕೆ ಆಗಲಿಲ್ಲ. ಮುರುಗದಾಸ್ ಕಥೆ ಹೇಳುವ ವಿಧಾನ ಅಪ್‌ಡೇಟ್ ಆಗಿಲ್ಲ ಅನಿಸುತ್ತಿದೆ. ಇನ್ನೊಂದು ಕಡೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಸಿನಿಪ್ರಿಯರಿಗೆ ಸಿಂಕ್ ಆಗಲಿಲ್ಲ.

2ನೇ ವೀಕೆಂಡ್ ನಿರ್ಣಾಯಕ

'ಸಿಕಂದರ್' ಸಿನಿಮಾ 2ನೇ ವೀಕೆಂಡ್‌ ಕಡೆಗೆ ಮುನ್ನುಗ್ಗುತ್ತಿದೆ. ಸಿನಿಮಾ ಏನಾದರೂ ಕಚ್ಚಿಕೊಂಡರೆ, 2ನೇ ವೀಕೆಂಡ್‌ನಲ್ಲಿ ಕಚ್ಚಿಕೊಳ್ಳಬೇಕು. ಆದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೂ, ಈ ವೀಕೆಂಡ್‌ಗೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X