Sikandar Box Office Day 5:5 ದಿನ ಆದರೂ ₹100 ಕೋಟಿ ದಾಟಲಿಲ್ಲ ಸಿಕಂದರ್; ಬಾಕ್ಸಾಫೀಸ್ ಗಂಭೀರ

ಒಂದು ಕಾಲದ ಬಾಲಿವುಡ್‌ ಬಾಕ್ಸಾಫೀಸ್‌ ಸುಲ್ತಾನ್ ಸಲ್ಮಾನ್ ಖಾನ್ ಇಂದು 100 ಕೋಟಿ ಕ್ಲಬ್ ಸೇರುವುದಕ್ಕೂ ಪರದಾಡುವಂತಾಗಿದೆ. ಸಲ್ಮಾನ್ ಖಾನ್ ಅಂತಹ ಮಾಸ್ ಹೀರೊ ಇದ್ದರೂ ಸಿನಿಮಾ ಗಲ್ಲಾ ಪಟ್ಟೆಯಲ್ಲಿ ಜಾದು ಮಾಡುತ್ತಿಲ್ಲ. ಇಲ್ಲಿ ಹೇಳುವುದಕ್ಕೆ ಹೊರಟಿರೋದು ಈದ್‌ಗೆ ರಿಲೀಸ್ ಆಗಿರುವ ಸಲ್ಮಾನ್ ಖಾನ್ ಸಿನಿಮಾ 'ಸಿಕಂದರ್' ಬಗ್ಗೆ.

'ಸಿಕಂದರ್' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿದ್ದರು. 'ಘಜನಿ' ಅಂತಹ ಸಿನಿಮಾ ಕೊಟ್ಟಿರುವ ಎ ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದರು. ಹೀಗಿದ್ದರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದರಲ್ಲಿ ಸಿನಿಮಾ ಸೋತಿದೆ. ಐದನೇ ದಿನಕ್ಕೆ ಸೋತು ಸುಣ್ಣವಾಗಿದೆ.

Salman Khan Rashmika Mandanna Film Sikandar Day 5 Box Office Collection report

ಸಲ್ಮಾನ್ ಖಾನ್ ಅಂತಹ ಬಿಗ್ ಸ್ಟಾರ್ ಹೊರತಾಗಿಯೂ 'ಸಿಕಂದರ್' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಇದು ಸ್ವತ: ಸಲ್ಮಾನ್ ಖಾನ್‌ಗೂ ನಿರಾಸೆ ಮೂಡಿಸಿದೆ. ಒಂದೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಜಮಾನದಲ್ಲಿ, ಸಿನಿಮಾ ರಿಲೀಸ್ ಆಗಿ ಐದು ದಿನಗಳಾಗಿದ್ದರೂ 'ಸಿಕಂದರ್' ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಗಡಿ ದಾಟಿಲ್ಲ. ಹಾಗಿದ್ದರೆ ಐದನೇ ದಿನ ಸಿಕಂದರ್ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.

5ನೇ ದಿನದ ಕಲೆಕ್ಷನ್ ಎಷ್ಟು?

'ಸಿಕಂದರ್' ಐದನೇ ದಿನವೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಯಾವುದೇ ರೀತಿಯ ಚೇತರಿಕೆ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಬ್ಬರು ಸಕ್ಸಸ್‌ಫುಲ್ ನಟರ ಸಿನಿಮಾ ನೆಲಕ್ಕಚ್ಚಿದೆ. ದಿನದಿಂದ ದಿನಕ್ಕೆ ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಐದನೇ ದಿನ ಸಿಕಂದರ್ ಬಾಕ್ಸಾಫೀಸ್ ಕಲೆಕ್ಷನ್ ಒಂದಂಕಿ ತಲುಪಿದೆ. 4ನೇ ದಿನಕ್ಕೆ ಹೋಲಿಸಿದರೆ, ಶೇ. 41.03ರಷ್ಟು ಇಳಿಕೆಯಾಗಿದೆ. ಅಂದರೆ, 4ನೇ ದಿನ 9.75 ಕೋಟಿ ರೂ. ಗಳಿಸಿದ್ದ ಸಿನಿಮಾ 5ನೇ ದಿನ ಕೇವಲ 5.75 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವೆಬ್‌ಸೈಟ್ ವರದಿ ಮಾಡಿದೆ.

Salman Khan Rashmika Mandanna Film Sikandar Day 5 Box Office Collection report

5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಸಿಕಂದರ್' ಮಾಸ್ ಪ್ರಿಯರಿಗೆ ಅಂತಾನೇ ಮಾಡಿದ ಸಿನಿಮಾ. ಜೊತೆಗೆ ಕ್ಲಾಸ್ ಮಂದಿಗೂ ಬೇಕಿರುವ ಎಲಿಮೆಂಟ್ಸ್ ಅನ್ನು ಇಲ್ಲಿ ಇಡಲಾಗಿತ್ತು. ಆದರೂ ಯಾಕೋ ವರ್ಕ್‌ಔಟ್ ಆಗಿಲ್ಲ. ಸಲ್ಮಾನ್ ಖಾನ್ ಜಾದು ತೆರೆಮೇಲೆ ಮೋಡಿ ಮಾಡಲಿಲ್ಲ. ರಶ್ಮಿಕಾ ಮಂದಣ್ಣ ಅದೃಷ್ಟ ಕೈ ಹಿಡಿಯಲಿಲ್ಲ. ಹೀಗಾಗಿ ಸಲ್ಮಾನ್ ಖಾನ್‌ಗೆ ಈ ಬಾರಿಯ ಈದ್ ಕಹಿಯಾಗಿದೆ ಅಂತಲೇ ಹೇಳಬಹುದು.

ಮೊದಲ ದಿನ ₹26 ಕೋಟಿ
2ನೇ ದಿನ ₹29 ಕೋಟಿ
3ನೇ ದಿನ ₹19.5 ಕೋಟಿ
4ನೇ ದಿನ ₹09.75 ಕೋಟಿ
5ನೇ ದಿನ ₹05.75 ಕೋಟಿ
ಒಟ್ಟು ₹90 ಕೋಟಿ

₹100 ಕೋಟಿ ದಾಟುವುದಕ್ಕೂ ಪರದಾಟ

ಸಲ್ಮಾನ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಪರದಾಡಿತ್ತು ಇತ್ತೀಚೆಗೆ ಕಂಡು ಬಂದಿಲ್ಲ. ಕೆಟ್ಟ ಸಿನಿಮಾ ಅಂತ ರಿವ್ಯೂ ಇದ್ದರೂ ಮೊದಲ ಮೂರು ದಿನಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿತ್ತು. ಆದ್ರೀಗ ಐದು ದಿನಗಳಾದರೂ ಬಿಗ್ ಸ್ಟಾರ್‌ಗಳ, ಬಿಗ್ ಬಜೆಟ್ ಸಿನಿಮಾಗಳು 100 ಕೋಟಿಯ ಗಡಿಯನ್ನು ಮುಟ್ಟಿಲ್ಲ. ಇದು ಬಾಲಿವುಡ್ ಮಂದಿಯ ನಿದ್ದೆ ಕೆಡಿಸಿದೆ.

ವೀಕೆಂಡ್‌ನಲ್ಲಿ ಜಾದು ಆಗುತ್ತಾ?

'ಸಿಕಂದರ್' ಸಿನಿಮಾ ಬಿಡುಗಡೆಯಾದ ದಿನವೇ ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಜನರು ಕೂಡ ಥಿಯೇಟರ್‌ಗೆ ಬರುವ ಮನಸ್ಸು ಮಾಡಲಿಲ್ಲ. ಜೊತೆಗೆ ಐಪಿಎಲ್ ಇರುವುದರಿಂದ ಜನರು ಈ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರಿಸದೇ ಇರಬಹುದು. ಇನ್ನೇನು 2ನೇ ವೀಕೆಂಡ್ ಶುರುವಾಗಿದೆ. ಹೀಗಾಗಿ ವೀಕೆಂಡ್‌ನಲ್ಲಿ ಏನಾದರೂ ಜಾದು ಮಾಡಬಹುದೇ ಎಂದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Salman Khan, Rashmika Mandanna Film Sikandar Day 5 Box Office Collection report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X