"ದಾವೂದ್ ಕಾಪಾಡ್ತಾನೆ ಅನ್ನೋ ಭ್ರಮೆ ಬೇಡ.. ಯಾರೂ ಉಳಿಸಲ್ಲ": ಸಲ್ಮಾನ್ ಖಾನ್‌ಗೆ ಮತ್ತೆ ಬೆದರಿಕೆ
ಸಲ್ಮಾನ್ ಖಾನ್‌ಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಬಾಲಿವುಡ್ ಸೂಪರ್‌ಸ್ಟಾರ್ ಅನ್ನು ಕೊಲ್ಲುವುದಾಗಿ ಆಗಾಗ ಬೆದರಿಕೆಯೊಡ್ಡುತ್ತನೇ ಇದ್ದಾನೆ. ಕೆಲವು ದಿನಗಳ ಕಾಲ ಸೈಲೆಂಟ್ ಆಗಿದ್ದ ಈ ಬೆದರಿಕೆ ಕರೆ ಈಗ ಮತ್ತೆ ಬಂದಿದೆ.
ಸೋಶಿಯಲ್ ಮೀಡಿಯಾ ಫೇಸ್‌ಬುಕ್‌ನಲ್ಲಿ ಸಲ್ಮಾನ್ ಖಾನ್‌ಗೆ ಮತ್ತೆ ಬೆದರಿಕೆಯೊಡ್ಡಲಾಗಿದೆ. ಈ ಸಂಬಂದ ಮುಂಬೂ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ, ರಕ್ಷಣೆ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಈ ಹಿಂದೆ ಬೆದರಿಕೆ ಹಾಕಿದ ಬೆನ್ನಲ್ಲೇ ಈಗಾಗಲೇ ಸಲ್ಮಾನ್ ಖಾನ್ ವೈ-ಪ್ಲಸ್ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಭಾನುವಾರ, ಫೇಸ್‌ಬುಕ್‌ನಲ್ಲಿ ಗ್ಯಾಂಗ್‌ಸ್ಟರ್ ಬಿಷ್ಣೋಯಿ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಬೆದರಿಕೆಯೊಡ್ಡಿ ಪೋಸ್ಟ್ ಮಾಡಲಾಗಿದೆ. ಇತ್ತೀಚೆಗೆ ಕೆನಾಡದಲ್ಲಿರುವ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮುಂದೆ ಶೂಟೌಟ್ ಮಾಡಲಾಗಿತ್ತು. ಅದನ್ನು ಹೊಣೆಗಾರಿಕೆ ತಮ್ಮದೇ ಎಂದು ಹೇಳಿಕೊಂಡಿದ್ದು, ಗಿಪ್ಪಿ ಗ್ರೆವಾಲ್ ಹಾಗೂ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಲಾಗಿದೆ.
"ನೀನು ಸಲ್ಮಾನ್ ಖಾನ್ ಅನ್ನು ಸಹೋದರ ಎಂದು ಭಾವಿಸಿದ್ದೀಯ. ಈಗ ನಿಮ್ಮ ಸಹೋದರ ಬಂದು ನಿನ್ನನ್ನು ಕಾಪಾಡುವ ಸಮಯ ಬಂದಿದೆ. ಈ ಸಂದೇಶ ಸಲ್ಮಾನ್ ಖಾನ್‌ಗೂ ಸಂಬಂಧಿಸಿದೆ. ದಾವುದ್ ಬಂದು ನಿನ್ನನ್ನು ಉಳಿಸುತ್ತಾನೆ ಅನ್ನೋ ಭ್ರಮೆಯಲ್ಲಿ ಇರಬೇಡ. ನಿನ್ನನ್ನು ಯಾರೂ ಉಳಿಸಲು ಸಾಧ್ಯವಿಲ್ಲ." ಎಂದು ಫೋಸ್ಟ್‌ನಲ್ಲಿ ಹೇಳಲಾಗಿದೆ.
"ಸಿದ್ಧು ಮೂಸೆ ವಾಲ ಸಾವಿನ ಬಳಿಕ ನಿಮ್ಮ ನಾಟಕೀಯ ಪ್ರತಿಕ್ರಿಯೆಯನ್ನು ನಾವು ಗಮನಿಸುತ್ತಿದ್ದೇವೆ. ಅವನು ಎಂತಹ ವ್ಯಕ್ತಿಯಾಗಿದ್ದ, ಆತನ ಕ್ರಿಮಿನಲ್ ಹಿನ್ನೆಲೆಯೇನು ಅನ್ನೋದು ನಮಗೆ ಗೊತ್ತಿದೆ. ನೀವು ಈಗ ನಮ್ಮ ರೆಡಾರ್‌ನಲ್ಲಿ ಸಿಕ್ಕಿಕೊಂಡಿದ್ದೀರಿ. ಇದನ್ನು ಕೇವಲ ಟ್ರೈಲರ್ ಎಂದು ಭಾವಿಸಿ. ಇಡೀ ಸಿನಿಮಾವನ್ನು ಶೀಘ್ರದಲ್ಲಿಯೇ ರಿಲೀಸ್ ಮಾಡುತ್ತೇವೆ." ಎಂದು ಪೋಸ್ಟ್‌ನಲ್ಲಿ ಬೆದರಿಕೆ ಹಾಕಲಾಗಿದೆ.

ಇಲ್ಲಿ ನಿಂತಿಲ್ಲ.. "ನೀವು ಯಾವ ದೇಶಕ್ಕೆ ಬೇಕಾದರೂ ಹೋಗಿ. ಆದರೆ, ನೆನಪಿನಲ್ಲಿಡಿ , ಸಾವಿಗೆ ವಿಸಾ ಬೇಕಿಲ್ಲ. ಆಮಂತ್ರಣ ಕೊಡದೇ ಬರುತ್ತೆ" ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮುಂದೆ ಶೂಟೌಟ್ ಬಳಿಕ ಸಲ್ಮಾನ್ ಖಾನ್ ನನ್ನ ಗೆಳೆಯ ಅಲ್ಲ. ಕೇವಲ ಎರಡು ಬಾರಿ ಭೇಟಿ ಮಾಡಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಬೆದರಿಕೆ ಪೋಸ್ಟ್ ಬಂದ ಬಳಿಕ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆಗೆ ಈ ಪೋಸ್ಟ್ ಬಿಷ್ಙೋಯಿನೇ ಮಾಡಿದ್ದಾ? ಇಲ್ಲ. ಫೇಕ್ ಇರಬಹುದು ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸದ್ಯ ಜೈಲಿನಲ್ಲಿ ಇರುವುದರಿಂದ ಇದು ಬಿಷ್ಣೋಯಿ ಆಪ್ತರಿಂದ ಆಗಿರುವ ಕೆಲಸನಾ ಅನ್ನೋದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಲ್ಮಾನ್‌ಗೆ ಇನ್ನೂ ಹೆಚ್ಚಿನ ರಕ್ಷಣೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ಹಿಂದೆ ಬಂದ ಬೆದರಿಕೆ ಕರೆಗಳ ಬಳಿಕ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ರಕ್ಷಣೆ ಒದಗಿಸಲಾಗಿದೆ. ಹಾಗೇ ಲೈಸೆನ್ಸ್ ಗನ್ ಅನ್ನು ಇಟ್ಟುಕೊಂಡು ಓಡಾಡುವುದಕ್ಕೆ ಅನುಮತಿ ನೀಡಲಾಗಿದ್ದು, ಇತ್ತೀಚೆಗೆ ಬುಲೆಟ್ ಪ್ರೋಫ್ ಕಾರನ್ನು ಖರೀದಿ ಮಾಡಲಾಗಿದೆ.


Click it and Unblock the Notifications











