10 ಸಿನಿಮಾ.. ₹1900 ಕೋಟಿ.. 'ಈದ್'ಗೆ ಬಾಕ್ಸಾಫೀಸ್ ಧೂಳು: ₹2000 ಕೋಟಿ ಕ್ಲಬ್ ಮೇಲೆ ಕಣ್ಣು!
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್. ಬಾಕ್ಸಾಫೀಸ್‌ನಲ್ಲಿ ಸಲ್ಮಾನ್ ಸಿನಿಮಾಗಳು ಧೂಳೆಬ್ಬಿಸುತ್ತವೆ. ಪಕ್ಕಾ ಮಾಸ್ ಅವತಾರದಲ್ಲಿ ಥಿಯೇಟರ್‌ಗೆ ಲಗ್ಗೆ ಇಡುವ ಸಲ್ಲು ಭಾಯ್‌ಗೆ ದೊಡ್ಡ ದೊಡ್ಡ ಸಕ್ಸಸ್ ಸಿಕ್ಕಿದೆ. ಕೆಲವು ಸಿನಿಮಾಗಳು ಹೊಸ ಹೊಸ ದಾಖಲೆಗಳನ್ನೇ ಬರೆದಿವೆ.
'ಈದ್'ಗೂ ಸಲ್ಮಾನ್ ಖಾನ್‌ಗೂ ಬಿಡಲಾರದ ನಂಟು. ಈ ಹಬ್ಬ ಬಂತು ಅಂದರೆ, ಸಲ್ಮಾನ್ ಖಾನ್ ಅಭಿಮಾನಿಗಳು ಅಲರ್ಟ್ ಆಗಿ ಬಿಡುತ್ತಾರೆ. ಯಾಕಂದ್ರೆ, ಪ್ರತಿ ವರ್ಷನೂ ಸಲ್ಮಾನ್ ಖಾನ್ ನಟನೆಯ ಒಂದಾದರೂ ಸಿನಿಮಾ ರಿಲೀಸ್ ಆಗುತ್ತಲೇ ಇರುತ್ತೆ. ಈ ಬಾರಿ ಕೂಡ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಿದ್ಧತೆ ನಡೆಸುತ್ತಿದೆ.

ಸಲ್ಮಾನ್ ಖಾನ್‌ಗೆ 'ಈದ್' ಅದೃಷ್ಟ. ಈ ವೇಳೆ ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೇ ಬರೆದಿವೆ. ಇದೂವರೆಗೂ ಸಲ್ಲು ಸುಮಾರು 10 ಸಿನಿಮಾಗಳನ್ನು 'ಈದ್'ಗೇ ರಿಲೀಸ್ ಮಾಡಿದ್ದಾರೆ. ಆ ಎಲ್ಲಾ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ವಿಶೇಷ ಸಂದರ್ಭದಲ್ಲಿ ರಿಲೀಸ್ ಆದ ಸಿನಿಮಾಗಳ್ಯಾವುವು? ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೋಚಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ
10 ಸಿನಿಮಾ.. ₹1900 ಕೋಟಿ ಬ್ಯುಸಿನೆಸ್
ಸಲ್ಮಾನ್ ಖಾನ್‌ಗೆ 'ಈದ್' ಲಕ್ಕಿ ಅನ್ನೋದು ಪದೇ ಪದೆ ಪ್ರೂವ್ ಆಗುತ್ತಲೇ ಇದೆ. 'ಈದ್'ಗೆ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿವೆ. ಇದೂವರೆಗೂ ಸಲ್ಮಾನ್ ಖಾನ್ ಅಭಿನಯದ 10 ಸಿನಿಮಾಗಳು ರಿಲೀಸ್ ಆಗಿವೆ. ಈ ಹತ್ತೂ ಸಿನಿಮಾಗಳಿಂದ ಸುಮಾರು ಸುಮಾರು 1900 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕ ಹಾಕಿದ್ದಾರೆ.

ಈ ಟ್ರೆಂಡ್ 2009ರಿಂದ ಶುರುವಾಗಿತ್ತು. ಸಲ್ಮಾನ್ ಖಾನ್ ನಟಿಸಿದ 'ವಾಂಟೆಡ್' ಸಿನಿಮಾ ಅದೇ ವರ್ಷ 'ಈದ್' ವೇಳೆಗೆ ಶುರುವಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಡೆದುಕೊಂಡೇ ಬಂದಿದೆ. ವಿಶೇಷ ಅಂದ್ರೆ, ಈ ಬಾರಿ ಕೂಡ ಸಲ್ಲು ಅಭಿನಯದ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ರಿಲೀಸ್ ಆಗುತ್ತಿದ್ದು, ಸಲ್ಮಾನ್ ಖಾನ್‌ಗೆ ಯಶಸ್ಸು ಸಿಗುತ್ತಾ? ಅನ್ನೋದನ್ನು ಎದುರು ನೋಡುತ್ತಿದ್ದಾರೆ.
10 ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ?
'ವಾಂಟೆಡ್' ಸಿನಿಮಾದಿಂದ ಆರಂಭ ಆಗಿದ್ದು, 'ಭಾರತ್' ಸಿನಿಮಾವರೆಗೂ ಸುಮಾರು 10 ಸಿನಿಮಾಗಳು ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲಿ ಸುಮಾರು 2000 ಕೋಟಿ ರೂ. ಕಲೆಕ್ಷನ್ ಮಾಡುವ ಸನಿಹದಲ್ಲಿದೆ. ಈ 10 ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ವಾಂಟೆಡ್ ₹64 ಕೋಟಿ
ದಬಾಂಗ್ ₹143 ಕೋಟಿ
ಬಾಡಿಗಾರ್ಡ್ ₹142 ಕೋಟಿ
ಏಕ್ ಥಾ ಟೈಗರ್ ₹198 ಕೋಟಿ
ಕಿಕ್ ₹233 ಕೋಟಿ
ಬಜರಂಗಿ ಭಾಯ್‌ಜಾನ್ ₹320.34 ಕೋಟಿ
ಸುಲ್ತಾನ್ ₹300 ಕೋಟಿ
ಟ್ಯೂಬ್‌ಲೈಟ್ ₹121.25 ಕೋಟಿ
ರೇಸ್ ₹169 ಕೋಟಿ
ಭಾರತ್ ₹211.07
'ಕಿಸಿ ಕ ಭಾಯ್ ಕಿಸಿ ಕಿ ಜಾನ್'
ಸಲ್ಮಾನ್ ಖಾನ್ ಸಿನಿಮಾ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಇದೇ 'ಈದ್'ಗೆ ರಿಲೀಸ್ ಆಗುತ್ತಿದೆ. ಇದೇ ಏಪ್ರಿಲ್ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ, ವೆಂಕಟೇಶ್, ಭುಮಿಕಾ ಚಾವ್ಲಾ, ಶೆಹ್ನಾಜ್ ಗಿಲ್, ರಾಘವ್ ಜುಯಲ್, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಂ, ಪಾಲಕ್ ತಿವಾರಿ, ವಿಜಯೇಂದ್ರ ಸಿಂಗ್ ಅಂತಹ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿದೆ. ಈ ಕಾರಣಕ್ಕೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಕುತೂಹಲವಿದೆ.
ಸದ್ಯ 10 ಸಿನಿಮಾಗಳಿಂದ ಸುಮಾರು 1902.11 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳು ಹೇಳಿವೆ. ಇನ್ನು ಕೇವಲ 97.89 ಕೋಟಿ ರೂ. ಕಲೆಕ್ಷನ್ ಆದರೆ, ಕೇವಲ 'ಈದ್'ನಲ್ಲೇ ರಿಲೀಸ್ ಆದ ಸಲ್ಮಾನ್ ಸಿನಿಮಾದ ಕಲೆಕ್ಷನ್ 2000 ಕೋಟಿ ರೂ. ದಾಟಿದಂತೆ ಆಗುತ್ತೆ.


Click it and Unblock the Notifications











