ಭಾಯ್‌ಜಾನ್ ಹೊಸ ಅವತಾರ; ಶಾರ್ಟ್ ಸಿನಿಮಾಗಾಗಿಯೋ? ಇಲ್ಲ ಆರೋಗ್ಯ ಸಮಸ್ಯೆನಾ?
ಬಾಲಿವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಲುಕ್, ಖದರ್, ತನ್ನದೇ ವಿಶಿಷ್ಟ ಸ್ಟೈಲ್‌ಗೆ ಹೆಸರುವಾಸಿ. ಸದ್ಯ ಆಮಿರ್ ಖಾನ್ ಇವೆಂಟ್‌ನಲ್ಲಿ ಸಲ್ಮಾನ್ ಖಾನ್ ಲುಕ್ ನೋಡಿ ಅಲ್ಲಿ ನೆರೆದಿದ್ದವರಷ್ಟೇ ಅಲ್ಲ, ಅವರ ಅಭಿಮಾನಿಗಳು ಕೂಡ ಫುಲ್ ಥ್ರಿಲ್ ಆಗಿದ್ದರು. ಸಲ್ಮಾನ್ ಖಾನ್ ಹೊಸ ಹೇರ್ ಸ್ಟೈಲ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಸಲ್ಮಾನ್ ಖಾನ್ ತಮ್ಮ ವಿಭಿನ್ನ ಸ್ಟೈಲ್ ಹಾಗೂ ಸ್ವಾಗ್‌ಗೆ ಹೆಸರುವಾಸಿ. ಆದರೆ, ದಿಢೀರನೇ ಅವರ ಹೊಸ ಹೇರ್‌ಸ್ಟೈಲ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಇಂಟರ್ನೆಟ್‌ನಲ್ಲಿ ಇನ್ನಿಲ್ಲದ ಸಂಚಲನ ಸೃಷ್ಟಿಸಿದೆ. ನಟ ಅಮೀರ್ ಖಾನ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಹೇರ್ ಕಟ್ ಎಲ್ಲರ ಹುಬ್ಬೇರಿಸಿದೆ.

ಭಾಯ್‌ಜಾನ್ ಹೇರ್ ಕಟ್
ಇತ್ತೀಚೆಗೆ ಮುಂಬೈನಲ್ಲಿ ನಟ ಅಮಿರ್ ಖಾನ್ 'ಲಗಾನ್'ಗೆ 25 ದಿನಗಳನ್ನು ಪೂರೈಸಿದ ಬೆನ್ನಲ್ಲೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಆಗ ಎಲ್ಲರ ಕಣ್ಣು ಬಿದ್ದಿದ್ದು ಸಲ್ಮಾನ್ ಖಾನ್ ಮೇಲೆ. ಎಂದಿನಂತೆ ಅವರ ಗಂಭೀರ ನಗು ಜೊತೆಗೆ ವಿಶೇಷವಾಗಿ ಗಮನ ಸೆಳೆದಿದ್ದು, ಹೇರ್‌ಸ್ಟೈಲ್. ಚಿಕ್ಕದಾಗಿ ಹೇರ್ ಕಟ್ ಮಾಡಿಸಿಕೊಂಡು, ಲೆದರ್ ಜಾಕೆಟ್ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದರು. ಇದು ಸಲ್ಮಾನ್ ಖಾನ್ ಅಭಿಮಾನಿಗಳ ನಿದ್ದೆಕೆಡಿಸಿತ್ತು.
ಸಿನಿಮಾಗಾಗಿಯೋ? ಆರೋಗ್ಯ ಸಮಸ್ಯೆನಾ?
ಸಲ್ಮಾನ್ ಖಾನ್ ಹೇರ್ ಸ್ಟೈಲ್ ಅಚ್ಚರಿಯನ್ನೇನೋ ಮೂಡಿಸಿದೆ. ಅವರ ಅಭಿಮಾನಿಗಳು ಈ ಲುಕ್ ಅನ್ನು ಗೊಂದಲದಿಂದ ನೋಡುತ್ತಿದ್ದಾರೆ. ಅದಕ್ಕೆ ಕಾರಣ ಸಲ್ಮಾನ್ ಖಾನ್ ಸಿನಿಮಾಗಾಗಿ ಈ ಅವತಾರ ತಾಳಿದ್ದಾರೋ? ಇಲ್ಲ ಏನಾದರೂ ಆರೋಗ್ಯ ಸಮಸ್ಯೆ ಇದೆಯೋ? ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಯಾಕಂದ್ರೆ, ಈ ಹಿಂದೆ ಸಲ್ಮಾನ್ ಖಾನ್ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಈ ಲುಕ್ ನೋಡಿ ಶಾಕ್ ಆಗಿದ್ದಾರೆ.
'ತೇರೆನಾಮ್ 2'ಗೆ ಈ ಲುಕ್?
ಸಲ್ಮಾನ್ ಖಾನ್ ತಮ್ಮ ಈ ಹೊಸ ಹೇರ್ ಸ್ಟೈಲ್‌ನಿಂದ ಇಂಟರ್‌ನೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇನ್ನು ನೆಟಿಜನ್‌ಗಳು ಈ ಲುಕ್ ನೋಡಿ ಡಿಸೈನ್, ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 'ತೇರೆ ನಾಮ್ 2'ಗಾಗಿ ಈ ಲುಕ್ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಬೇರೆ ಸಿನಿಮಾಗಾಗಿ ಈ ತಯಾರಿ ಇರಬಹುದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಸಲ್ಮಾನ್ ಖಾನ್ ಆತ್ಮವಿಶ್ವಾಸವನ್ನು ಕೊಂಡಾಡುತ್ತಿದ್ದಾರೆ.
ಯಾಕೀ ಬದಲಾವಣೆ?
ಸಲ್ಮಾನ್ ಖಾನ್ ಈ ಹೊಸ 'ಬಜ್ ಕಟ್'ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಸಿನಿಮಾದ ತಯಾರಿ ಇರಬಹುದು. ಈ ಹಿಂದೆ 'ತೇರೆ ನಾಮ್' ಮತ್ತು 'ಸುಲ್ತಾನ್' ಸಿನಿಮಾಗಳಿಗಾಗಿ ಸಲ್ಮಾನ್ ಖಾನ್ ತಮ್ಮ ಕೂದಲನ್ನು ಸಣ್ಣದಾಗಿ ಕತ್ತರಿಸಿ ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಅವರ ಮುಂದಿನ ಬಿಗ್ ಬಜೆಟ್ ಆಕ್ಷನ್ ಸಿನಿಮಾಗಾಗಿ ಈ ಲುಕ್ ಕೊಟ್ಟಿರಬಹುದು ಎಂದು ಹೇಳಲಾಗಿದೆ. ಏನೇ ಇದ್ದರೂ, ಸಲ್ಮಾನ್ ಖಾನ್ ಅವರ ಈ ಲುಕ್ ಅವರ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ.


Click it and Unblock the Notifications
