ಸಲ್ಮಾನ್ ಖಾನ್ ಸೋದರಳಿಯ, ಬಾಡಿ ಬಿಲ್ಡರ್ ಅಬ್ದುಲ್ಲಾ ಖಾನ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಸಲ್ಮಾನ್ ಖಾನ್ ಸೋದರಳಿಯ ಅಬ್ದುಲ್ಲಾ ಖಾನ್ ಮುಂಬೈನ ಆಸ್ಪತ್ರೆಯೊಂದರಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ತಮ್ಮ ಆತ್ಮೀಯನಿಗೆ ಸಲ್ಮಾನ್ ಖಾನ್ ಭಾವನಾತ್ಮಕ ಗೌರವ ಸಲ್ಲಿಸಿದ್ದಾರೆ.

Recommended Video

ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪುನೀತ್ ರಾಜ್ ಕುಮಾರ್ | Puneeth Rajkumar | Birthday | Filmibeat Kannada

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅಬ್ದುಲ್ಲಾ, ತಮ್ಮ ಭರ್ಜರಿ ದೇಹದಾರ್ಡ್ಯದಿಂದ ಗುರುತಿಸಿಕೊಂಡಿದ್ದರು. ಸಾಯುವಾಗ ಅವರ ವಯಸ್ಸು ಕೇವಲ 38. ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗದೆ ಹಠಾತ್ ಕೊನೆಯುಸಿರೆಳೆದಿದ್ದಾರೆ. ಅಬ್ದುಲ್ಲಾ ಅವರು ತಮ್ಮ ಹುರಿಗಟ್ಟಿದ ದೇಹಾಕಾರದಿಂದ ಗಮನ ಸೆಳೆದಿದ್ದರು.

ಸಲ್ಮಾನ್ ಖಾನ್ ಅವರ ಜತೆಗೆ ಅನೇಕ ಬಾರಿ ಕಾಣಿಸಿಕೊಂಡಿದ್ದ ಅವರು, ಬಾಲಿವುಡ್‌ನಲ್ಲಿ ಯಾವುದೇ ರೀತಿ ಪಾಲ್ಗೊಳ್ಳದೆ ಇದ್ದರೂ ಅನೇಕ ನಟ, ನಟಿಯರಿಗೆ ಆತ್ಮೀಯರಾಗಿದ್ದರು. ಹೀಗಾಗಿ ಅವರ ಹಠಾತ್ ನಿಧನಕ್ಕೆ ಬಾಲಿವುಡ್ ಆಘಾತ ವ್ಯಕ್ತಪಡಿಸಿದೆ.

ಎರಡು ದಿನಗಳ ಹಿಂದೆ ಅನಾರೋಗ್ಯ

ಎರಡು ದಿನಗಳ ಹಿಂದೆ ಅನಾರೋಗ್ಯ

ಮೂಲಗಳ ಪ್ರಕಾರ ಅಬ್ದುಲ್ಲಾ ಅವರು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ಅಸ್ವಸ್ಥರಾಗಿದ್ದರಿಂದ ಅವರನ್ನು ಧೀರೂಬಾಯಿ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಅನಾರೋಗ್ಯದ ಬಗ್ಗೆ ಸಲ್ಮಾನ್ ಖಾನ್ ಅವರಿಗೆ ಮಾಹಿತಿ ತಿಳಿದ ನಂತರ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾವುಕರಾದ ಸಲ್ಮಾನ್ ಖಾನ್

ನಾನು ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ' ಎಂದು ಸಲ್ಮಾನ್ ಖಾನ್ ಭಾವುಕರಾಗಿ ಸಂದೇಶ ಹಂಚಿಕೊಂಡಿದ್ದಾರೆ. ಬಾಡಿಬಿಲ್ಡರ್ ಆಗಿರುವ ಅಬ್ದುಲ್ಲಾ, ಸಲ್ಮಾನ್ ಖಾನ್ ಜತೆಗೆ ಹೆಚ್ಚು ಸಮಯ ವರ್ಕೌಟ್ ಮಾಡುತ್ತಿದ್ದರು. ಕಳೆದ ವರ್ಷ ತಮ್ಮ ಇನ್‌ಸ್ಟಾಗ್ರಾಂ ಟೈಮ್‌ಲೈನ್‌ನಲ್ಲಿ ಅಬ್ದುಲ್ಲಾ ಅವರನ್ನು ಪರಿಚಯಿಸಿದ್ದ ಸಲ್ಮಾನ್, ಅವರನ್ನು ಎತ್ತುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

ಬೇಗನೆ ಬಿಟ್ಟು ಹೋದಿರಿ

ಬಾಲಿವುಡ್‌ನ ಅನೇಕ ನಟ, ನಟಿಯರು ಕೂಡ ಅಬ್ದುಲ್ಲಾ ಸಾವಿಗೆ ಕಣ್ಣೀರಿಟ್ಟಿದ್ದಾರೆ. 'ನಾವು ಬೀಳುತ್ತೇವೆ, ನಾವು ಚೂರು ಚೂರಾಗುತ್ತೇವೆ, ನಾವು ಸೋಲುತ್ತೇವೆ ಆದರೆ ಮತ್ತೆ ಏಳುತ್ತೇವೆ. ನಾವು ಗುಣಮುಖರಾಗುತ್ತೇವೆ, ನಾವು ಎಲ್ಲವನ್ನೂ ಎದುರಿಸುತ್ತೇವೆ. ನೀವು ಬೇಗನೇ ನಮ್ಮನ್ನು ಬಿಟ್ಟು ಹೋಗಿದ್ದೀರಿ' ಎಂದು ಸಲ್ಮಾನ್ ಆಪ್ತೆ ಇಯುಲಿಯಾ ವಂಚುರ್ ಪೋಸ್ಟ್ ಮಾಡಿದ್ದಾರೆ.

ಎಂದೆಂದಿಗೂ ಪ್ರೀತಿಸುತ್ತೇವೆ

'ನಾವು ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇವೆ. ನನ್ನ ಆತ್ಮೀಯ ಗೆಳೆಯನೇ ನಿಮಗೆ ಶಾಂತಿ ಸಿಗಲಿ' ಎಂದು ನಟಿ, ಹಾಗೂ ಸಲ್ಮಾನ್ ಖಾನ್ ಆಪ್ತೆ ಡೈಸಿ ಶಾ ಸಂತಾಪ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bollywood actor Salman Khan's nephew, body builder Abdullah Khan died of lung infection on Monday night. He was 38.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X