For Quick Alerts
  ALLOW NOTIFICATIONS  
  For Daily Alerts

  ಅಮೀರ್ ನಂತರ ಮುರುಗದಾಸ್ ಜೊತೆ ಸಲ್ಮಾನ್ ಖಾನ್

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ಗಳ ಖಾನ್ ನಡುವೆ ಆಗಾಗ ಜಟಾಪಟಿ ನಡುವೆ ಖಾನ್ ತ್ರಯರ ಚಿತ್ರಗಳ ಪೈಪೋಟಿಯೂ ನಡೆಯುವುದುಂಟು. ಇದೆಲ್ಲದರ ಜೊತೆ ಒಬ್ಬ ಖಾನ್ ಒಬ್ಬ ಯಶಸ್ವಿ ನಿರ್ದೇಶಕನ ಚಿತ್ರದಲ್ಲಿ ನಟಿಸಿದರೆ ಮಿಕ್ಕ ಇಬ್ಬರು ಖಾನ್ ಗಳು ಕೂಡಾ ಆ ನಿರ್ದೇಶಕನ ಹಿಂದೆ ಬೀಳು ನಿದರ್ಶನಗಳಿವೆ. ಈಗ ಸಲ್ಮಾನ್ ಖಾನ್ ಇದಕ್ಕೆ ಲೇಟೆಸ್ಟ್ ಉದಾಹರಣೆ.

  ಅಮೀರ್ ಖಾನ್ ನಟನೆಯ 'ಘಜಿನಿ' ಚಿತ್ರವನ್ನು ನಿರ್ದೇಶಿಸುವ ಮೂಲಕ ಹಿಂದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ತಮಿಳು ನಿರ್ದೇಶಕ ಎ.ಆರ್ ಮುರುಗದಾಸ್ ಈಗ ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಘಜಿನಿ ಚಿತ್ರದ ಮೂಲಕ ಬಾಕ್ಸಾಫೀಸ್ ನಲ್ಲಿ ನೂರಾರು ಕೋಟಿ ಗಳಿಕೆಯ ಟ್ರೆಂಡಿಂಗ್ ಕ್ಲಬ್ ಶುರುವಾಗಿದ್ದು ಸುಳ್ಳಲ್ಲ.[ಕತ್ರಿನಾ ಕೈಫ್ ಜೊತೆ ಕುಣಿಯಲು ಸಿದ್ಧ : ಸಲ್ಮಾನ್]

  ಸಲ್ಮಾನ್ ಅವರ ಸುಲ್ತಾನ್ ಚಿತ್ರ, ಶಾರುಖ್ ಅವರ ರಾಯೀಸ್ ಹಾಗೂ ಅಮೀರ್ ಖಾನ್ ಅವರ ದಾಂಗಲ್ ಚಿತ್ರ ಒಟ್ಟಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

  ಅಮೀರ್ ನಂತರ ಅಕ್ಷಯ್ ಕುಮಾರ್ ಜೊತೆ ಹಾಲಿಡೇ ಚಿತ್ರ ಮಾಡಿದ ಮುರುಗದಾಸ್ ಈಗ ಸೋನಾಕ್ಷಿ ಸಿನ್ಹಾ ನಟನೆಯ ಅಕಿರಾ ಚಿತ್ರದಲ್ಲಿ ನಿರತರಾಗಿದ್ದಾರೆ. ಮುಂದೆ ಸಲ್ಮಾನ್ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಪಕ್ಕಾ ಆಗಿದೆ. ಇನ್ನಷ್ಟು ವಿವರ ಹಾಗೂ ಅಕಿರಾ ಚಿತ್ರದ ದೃಶ್ಯ ನಿಮ್ಮ ಮುಂದೆ...

  ಸಲ್ಮಾನ್ ಜೊತೆ ಮುರುಗದಾಸ್ ಮಾತುಕತೆ

  ಸಲ್ಮಾನ್ ಜೊತೆ ಮುರುಗದಾಸ್ ಮಾತುಕತೆ

  ಸಲ್ಮಾನ್ ಜೊತೆ ಮುರುಗದಾಸ್ ಮಾತುಕತೆ ನಡೆಸುವಾಗ ನಟ ಗೋವಿಂದ ಕೂಡಾ ಜೊತೆಗಿದ್ದಾರೆ.

  ಮುರುಗದಾಸ್ ಹಿಟ್ ಲಿಸ್ಟ್

  ಮುರುಗದಾಸ್ ಹಿಟ್ ಲಿಸ್ಟ್

  ನಿರ್ದೇಶಕರಾಗಿ ಮುರುಗದಾಸ್ ಹಿಟ್ ಲಿಸ್ಟ್ ನಲ್ಲಿ ಘಜಿನಿ, 7ಆಮ್ ಅರಿವು, ತುಪಾಕಿ, ಕತ್ತಿ ಚಿತ್ರಗಳಿವೆ. ಇದಲ್ಲದೆ, ಎಂಗೊಯುಂ ಎಪ್ಪೊದುಂ, ರಾಜ ರಾಣಿ, ಮಾನ್ ಕರಾಟೆ, ಇನ್ನೂ ಬಿಡುಗಡೆಯಾಗಬೇಕಿರುವ ವಿಕ್ರಮ್ ಅಭಿನಯದ 10 ಎಂಟ್ರಕುಲ್ಲ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಘಜನಿ ಹೇರ್ ಸ್ಟೈಲ್ ಮಾಡುತ್ತಿರುವ ಅಮೀರ್

  ಅಕ್ಷಯ್ ಹಾಗೂ ಸೋನಾಕ್ಷಿ ಜೊತೆ ಸೆಲ್ಫಿ

  ಅಕ್ಷಯ್ ಹಾಗೂ ಸೋನಾಕ್ಷಿ ಜೊತೆ ಸೆಲ್ಫಿ

  ಅಕ್ಷಯ್ ಹಾಗೂ ಸೋನಾಕ್ಷಿ ಜೊತೆ ಸೆಲ್ಫಿ ಚಿತ್ರದಲ್ಲಿ ಮುರುಗದಾಸ್

  ಸಲ್ಮಾನ್ ಖಾನ್ ಭಾವ ಅತುಲ್ ನಿರ್ಮಾಣ

  ಸಲ್ಮಾನ್ ಖಾನ್ ಭಾವ ಅತುಲ್ ನಿರ್ಮಾಣ

  ಸಲ್ಮಾನ್ ಖಾನ್ ಭಾವ ಅತುಲ್ ಅಗ್ನಿಹೋತ್ರಿ ಅವರ ನಿರ್ಮಾಣದ ಚಿತ್ರಕ್ಕೆ ಎಆರ್ ಮುರುಗದಾಸ್ ನಿರ್ದೇಶಕರಾಗಲಿದ್ದಾರೆ. ಈ ಹಿಂದೆ ಅತುಲ್ ನಿರ್ಮಾಣದ ಬಾಡಿಗಾರ್ಡ್ ಚಿತ್ರ ಯಶಸ್ವಿಯಾಗಿದೆ. ಸಲ್ಮಾನ್ ಚಿತ್ರಕ್ಕೆ ಕತ್ರೀನಾ ನಾಯಕಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಅದರೆ, ಇನ್ನೂ ಸ್ಪಷ್ಟವಾಗಿಲ್ಲ.ಚಿತ್ರದಲ್ಲಿ ಅಕಿರಾ ಚಿತ್ರದ ಕ್ಲಾಪ್ ಹಿಡಿದಿರುವ ಸೋನಾಕ್ಷಿ

  ಸೋನಾಕ್ಷಿಗಾಗಿ ಉತ್ತಮ ಪಾತ್ರ ರಚನೆ

  ಸೋನಾಕ್ಷಿಗಾಗಿ ಉತ್ತಮ ಪಾತ್ರ ರಚನೆ

  ಸೋನಾಕ್ಷಿಗಾಗಿ ಉತ್ತಮ ಪಾತ್ರ ರಚನೆ, ಸ್ತ್ರೀಸಂವೇದನಾಶೀಲ ಹೋರಾಟಗಾರ್ತಿಯಾಗಿ ಅಕಿರಾದಲ್ಲಿ ಕಾಣಿಸಿಕೊಳ್ಳಲಿರುವ ಸೋನಾಕ್ಷಿ

  English summary
  Ghajini director and Salman Khan will be working together very soon and this project is apparently being produced by Atul Agnihotri who previously produced Bodyguard. Salman Khan starrer Sultan's release date is clashing with Shahrukh Khan's Raees and the same movie's plot is clashing with Aamir Khan's Dangal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X